Snake Funny Video: ಇಲ್ಲಿದೆ ನೋಡಿ ಹಾವಿನ ಅಮೋಘ ನಟನೆ
ಸಾಮಾಜಿಕ ಜಾಲತಾಣಗಳಲ್ಲಿ ಕಾಲಕಾಲಕ್ಕೆ ವಿವಿಧ ವಿಚಿತ್ರ ವೈರಲ್ ವೀಡಿಯೋಗಳು ವೈರಲ್ ಆಗುತ್ತಿರುತ್ತವೆ. ಪ್ರಾಣಿಗಳ ಕೆಲವು ವಿಡಿಯೋಗಳು ನೆಟ್ಟಿಗರ ಗಮನ ಸೆಳೆಯುತ್ತದೆ. ಇತ್ತೀಚಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಾವಿನ ವಿಡಿಯೋಗಳು ಹೆಚ್ಚಾಗಿ ಹರಿದಾಡುತ್ತಿವೆ.
ನವದೆಹಲಿ : ಇಂಟರ್ನೆಟ್ ಜಗತ್ತು ಒಂದು ಮೋಜಿನ ಜಗತ್ತು. ಇಲ್ಲಿ ನಾವು ಪ್ರತಿದಿನ ಇಲ್ಲಿ ಸಾವಿರಾರು ವಿಭಿನ್ನ ವೀಡಿಯೊಗಳನ್ನು ನೋಡುತ್ತೇವೆ. ಇಂಟರ್‌ನೆಟ್‌ನಲ್ಲಿ ನಾವು ನೋಡುವ ಕೆಲವೊಂದು ವಿಡಿಯೋಗಳಲ್ಲಿ (Viral video) ನಮಗೆ ಏನಾದರೊಂದು ಪಾಠ ಸಿಗುತ್ತದೆ. ಇನ್ನು ಕೆಲವು ವಿಡಿಯೋಗಳು ಮನಸ್ಸಿಗೆ ಮುದ ನೀಡುತ್ತದೆ. ಇನ್ನು ಕೆಲವು ವಿಡಿಯೋಗಳು ಮನಸಿಗೆ ನೋವುಂಟು ಮಾಡುತದೆ, ಕಸಿವಿಸಿ ಉಂಟು ಮಾಡುತ್ತದೆ. ಕೆಲ ವಿಡಿಯೋಗಳು ಎಷ್ಟು ಫನ್ನಿಯಾಗಿರುತ್ತದೆ ಎಂದರೆ ಮತ್ತೆ ನೋಡಿದರೂ ನೋಡಬೇಕೆನಿಸುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಿ (Social media) ಕಾಲಕಾಲಕ್ಕೆ ವಿವಿಧ ವಿಚಿತ್ರ ವೈರಲ್ ವೀಡಿಯೋಗಳು (Viral video) ವೈರಲ್ ಆಗುತ್ತಿರುತ್ತವೆ. ಪ್ರಾಣಿಗಳ ಕೆಲವು ವಿಡಿಯೋಗಳು ನೆಟ್ಟಿಗರ ಗಮನ ಸೆಳೆಯುತ್ತದೆ. ಇತ್ತೀಚಿಗೆ ಸಾಮಾಜಿಕ ಮಾಧ್ಯಮಗಳಲ್ಲಿ (social media) ಹಾವಿನ ವಿಡಿಯೋಗಳು ಹೆಚ್ಚಾಗಿ ಹರಿದಾಡುತ್ತಿವೆ.
ಇದನ್ನೂ ಓದಿ : Black Idli: ನೀವು ಎಂದಾದರೂ 'ಕರಿ ಇಡ್ಲಿ' ತಿಂದಿದ್ದೀರಾ? ಎಲ್ಲಿ ಸಿಗುತ್ತೆ?
ಇಲ್ಲಿ ಕಾಣುತ್ತಿರುವ ವಿಡಿಯೋದಲ್ಲಿ (Video) ನೆಲದ ಮೇಲೆ ಕಪ್ಪು ಹಾವೊಂದು ಮಲಗಿರುವುದನ್ನು ನೋಡಬಹುದು. ಅದು ಸ್ವಲ್ಪ ಮಟ್ಟಿಗೆ ಹೆಡೆ ಎತ್ತಲು ಪ್ರಯತ್ನಿಸುತ್ತಿದೆ. ಆದರೆ ಅಲ್ಲೇ ಇದ್ದ ವ್ಯಕ್ತಿ ಹಾವನ್ನು ಸ್ಪರ್ಶಿಸುವುದನ್ನು ಕಾಣಬಹುದು. ವ್ಯಕ್ತಿ ಹಾವನ್ನು ಸ್ಪರ್ಶಿಸಿದ ಕೂಡಲೇ ಹಾವು (snake video) ಇದ್ದಕ್ಕಿದ್ದಂತೆ ಸತ್ತು ಈಳುವ ನಾಟಕವಾಡುತ್ತದೆ. ಹಾವಿನ ಈ ಪ್ರತಿಕ್ರಿಯೆ ನೋಡಿ ಅಲ್ಲಿದ್ದ ವ್ಯಕ್ತಿ ಜೋರಾಗಿ ನಗುವುದನ್ನು ಕೂಡಾ ಕೇಳಬಹುದು.
‘ನಮ್ಮನ್ನು ಬಿಟ್ಟು ಹೋಗ್ಬೇಡಿ ಸಾರ್ ಪ್ಲೀಸ್’: ಶಿಕ್ಷಕನ ವರ್ಗಾವಣೆಗೆ ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು..
ಪ್ರಸ್ತುತ, ಹಾವಿನ ಈ ಅದ್ಬುತ ನಟನೆಗೆ ಬಹಳ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೆ, ಈ ವಿಡಿಯೋ ಬಗ್ಗೆ ಹಲವು ಅಭಿಪ್ರಾಯಗಳು ವ್ಯಕ್ತವಾಗಿವೆ. ಇದುವರೆಗೆ 90 ಸಾವಿರ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಈ ವೀಡಿಯೊಹಂಚಿಕೊಂಡವರು ಕೂಡಾ ಇದಕ್ಕೆ 'ದಿ ಡ್ರಾಮಾ!' ಎಂದೇ ಶೀರ್ಷಿಕೆ ನೀಡಿದ್ದಾರೆ.
ಈ ಹಾವು ಹ್ಯಾಗ್ನೋಸ್ ಜಾತಿಗೆ ಸೇರಿದೆ ಎಂದು ಹೇಳಲಾಗುತ್ತದೆ. ಈ ವೀಡಿಯೋ ಯಾವಾಗ ಮತ್ತು ಎಲ್ಲಿ ತೆಗೆದದ್ದು ಎಂಬುದು ತಿಳಿದಿಲ್ಲ. ಆದರೆ, ಈ ವಿಡಿಯೋ ವೈರಲ್ ಆಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.