ಕಣ್ಣೂರು: ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಇಂದು ನಡೆಯುತ್ತಿದೆ. ಈ ಸಂದರ್ಭದಲ್ಲಿ ಮತಕೇಂದ್ರಕ್ಕೆ ಅಸಾಮಾನ್ಯ ಅತಿಥಿಯೊಬ್ಬರು ಭೇಟಿ ನೀಡಿ ವಿವಿ ಪ್ಯಾಟ್ ಯಂತ್ರ ಪರಿಶೀಲಿಸಿದ್ದಾರೆ. ಅದ್ಯಾರಪ್ಪಾ ಅಂತ ಯೋಚಿಸ್ತಿದ್ದೀರಾ.. ಹಾಗಿದ್ರೆ ಈ ಸುದ್ದಿ ಓದಿ!


COMMERCIAL BREAK
SCROLL TO CONTINUE READING

ಕೇರಳದ ಕಣ್ಣೂರು ಲೋಕಸಭೆ ಕ್ಷೇತ್ರದ ಮೇಯಿಲ್ ಕಂದಾಕ್ಕೈನಲ್ಲಿನ ಮತಗಟ್ಟೆಗೆ ಮತದಾರು ಬಂದು ಮತದಾನ ಮಾಡುತ್ತಿರುವಾಗಲೇ ಅಲ್ಲಿನ ವಿವಿಪ್ಯಾಟ್​ ಯಂತ್ರದೊಳಗೆ ಸಣ್ಣ ಹಾವು ಪತ್ತೆಯಾಗಿದೆ. ಹಾವು ಪತ್ತೆಯಾದ ಹಿನ್ನೆಲೆಯಲ್ಲಿ ಮತದಾರರು ಮತ್ತು ಚುನಾವಣೆ ಸಿಬ್ಬಂದಿ ಆತಂಕಕ್ಕೊಳಗಾದ ಘಟನೆ ನಡೆದಿದೆ.


ಮತಯಂತ್ರದಲ್ಲಿ ಹಾವು ಪತ್ತೆಯಾದ ಕಾರಣ ಕೆಲ ಕಾಲ ಮತದಾನವನ್ನು ತಡೆಹಿಡಿಯಲಾಗಿತ್ತು. ಬಳಿಕ ಹಾವನ್ನು ಯಂತ್ರದಿಂದ ಹೊರತೆಗೆದು ಬಿಟ್ಟ ಬಳಿಕ ಮತದಾನ ಪ್ರಕ್ರಿಯೆ ಪುನರಾರಂಭವಾಯಿತು.