ನವದೆಹಲಿ: ಕೇರಳದಿಂದ ದುಬೈಗೆ ತೆರಳಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಹಾವು ಪತ್ತೆಯಾಗಿ ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವು ದುಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಕೂಡಲೇ ಸರಕು ಇಡುವ ಜಾಗದಲ್ಲಿ ಶನಿವಾರ ಹಾವು ಪತ್ತೆಯಾಗಿದೆ.   


COMMERCIAL BREAK
SCROLL TO CONTINUE READING

ವಿಮಾನದಲ್ಲಿ ಹಾವು ಕಂಡಕೂಡಲೇ ಸಿಬ್ಬಂದಿ ಭಯಭೀತರಾಗಿದ್ದಾರೆ. ಅದೃಷ್ಟವಶಾತ್ ಹಾವು ಜನರು ಕುಳಿತುಕೊಳ್ಳುವ ಪ್ರದೇಶದ ಬದಲು ಸರಕು ಇಡುವ ಜಾಗದಲ್ಲಿತ್ತು ಎಂದು ತಿಳಿದುಬಂದಿದೆ. ಈ ಬಗ್ಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA) ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಇದನ್ನೂ ಓದಿ: “ನಾನು 4 ಮಕ್ಕಳಿಗೆ ಜನ್ಮ ನೀಡಲು ಕಾಂಗ್ರೆಸ್ ಪಕ್ಷವೇ ಕಾರಣ”


ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಬಿ-737-800 ವಿಮಾನವು ಕೇರಳದ ಕ್ಯಾಲಿಕಟ್‌ನಿಂದ ದುಬೈ ತಲುಪಿತ್ತು. ವಿಮಾನದಲ್ಲಿ ಹಾವು ಇರುವ ಸುದ್ದಿ ತಿಳಿದ ನಂತರ ಅದರಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ಇಡೀ ಘಟನೆಯನ್ನು ವಿವರಿಸಿರುವ ಡಿಜಿಸಿಎ ಅಧಿಕಾರಿ, ‘ವಿಮಾನವು ದುಬೈ ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ಕಾರ್ಗೋ ಹೋಲ್ಡ್‌ನಲ್ಲಿ ಹಾವು ಕಂಡುಬಂದಿದೆ. ಬಳಿಕ ವಿಮಾನ ನಿಲ್ದಾಣದ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು’ ಅಂತಾ ಹೇಳಿದ್ದಾರೆ.


ತನಿಖೆ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ


ಗ್ರೌಂಡ್ ಹ್ಯಾಂಡ್ಲಿಂಗ್‌ನಲ್ಲಿ ತಪ್ಪಾಗಿರುವ ಪ್ರಕರಣ ಇದಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ. ಸದ್ಯ ಈ ಬಗ್ಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ನಿಂದ ಯಾವುದೇ ರೀತಿಯ ಹೇಳಿಕೆ ಹೊರಬಿದ್ದಿಲ್ಲ. ಆ ಸಮಯದಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರ ಸಂಖ್ಯೆಯ ಬಗ್ಗೆಯೂ ಮಾಹಿತಿ ಬಂದಿಲ್ಲ.


ಇದನ್ನೂ ಓದಿ: Trending News: 'ಹಲ್ಲೋ ಬ್ರದರ್ ... ಏನ್ ತಮಾಷೆ ಇದು? ಮಗುವಿಗೆ ಹಾವು ಕಚ್ಚುತ್ತೆ.. ಜೋಪಾನ', ಎದೆ ಝಲ್ ಎನ್ನಿಸುತ್ತೆ ಈ ವಿಡಿಯೋ


ಇಡೀ ಘಟನೆಯನ್ನು ನಿರ್ಲಕ್ಷ್ಯದಿಂದ ನೋಡಲಾಗುತ್ತಿದೆ. ಹಾವು ವಿಮಾನದ ಕಾರ್ಗೋ ಹೋಲ್ಡ್ ಅನ್ನು ಹೇಗೆ ತಲುಪಿತು? ಇದರ ಬಗ್ಗೆ ಯಾವುದೇ ಸಿಬ್ಬಂದಿ ಹೇಗೆ ಗಮನಿಸಲಿಲ್ಲ? ಅನ್ನೋ ಪ್ರಶ್ನೆ ಮೂಡಿದೆ. ಈ ಹಿಂದೆಯೂ ಹಲವಾರು ವಿಮಾನದಲ್ಲಿ ಹಾವುಗಳು ಪತ್ತೆಯಾದ ಘಟನೆಗಳು ನಡೆದಿದ್ದವು. ಈ ವರ್ಷದ ಆರಂಭದಲ್ಲಿ ಏರ್ ಏಷ್ಯಾ ವಿಮಾನದಲ್ಲಿ ಹಾವು ಪತ್ತೆಯಾಗಿ ಆತಂಕ ಮೂಡಿಸಿತ್ತು. ಫೆಬ್ರವರಿ 10ರಂದು ಕೌಲಾಲಂಪುರಕ್ಕೆ ಹೋಗುತ್ತಿದ್ದ ಏರ್ ಏಷ್ಯಾ ವಿಮಾನದಲ್ಲಿ ಹಾವು ಕಂಡುಬಂದಿತ್ತು. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಸಹ ವೈರಲ್ ಆಗಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.