ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಎಡ ಪಕ್ಷಗಳು ರಾಜಕೀಯ ವಿರೋಧಿಗಳಾಗಿರಬಹುದು, ಆದರೆ ತಮಿಳುನಾಡಿನ ಸೇಲಂನಲ್ಲಿ ಮಮತಾ ಬ್ಯಾನರ್ಜೀ ಎನ್ನುವ ಯುವತಿಯನ್ನು ಇಂದು ಸೋಶಿಯಲಿಸಂ ಎಂಬ ವ್ಯಕ್ತಿ ವಿವಾಹವಾಗಿದ್ದಾರೆ.


COMMERCIAL BREAK
SCROLL TO CONTINUE READING

ವಧು, ಪಿ ಮಮತಾ ಬ್ಯಾನರ್ಜಿ, ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಮತ್ತು ಕಾಂಗ್ರೆಸ್ ಬೆಂಬಲಿಗರ ಕುಟುಂಬದಿಂದ ಬಂದವರು. ಆಕೆಯ ಪೋಷಕರು ಕಾಂಗ್ರೆಸ್ ಜೊತೆಗಿದ್ದಾಗ ಫೈರ್‌ಬ್ರಾಂಡ್ ತೃಣಮೂಲ ಕಾಂಗ್ರೆಸ್ ನಾಯಕಿಯ ಹೆಸರಿಟ್ಟರು.


ಇದನ್ನೂ ಓದಿ: "ನಾನು ಭಾರತ ಕ್ರಿಕೆಟ್ ತಂಡದ ನಾಯಕನಾಗಬೇಕಾಗಿತ್ತು...ಆದರೆ..."


ಈಗ ಈ ವಿಚಾರವಾಗಿ ಮಾತನಾಡಿರುವ ಪಿ ಮಮತಾ ಬ್ಯಾನರ್ಜಿ (P Mamata Banerjee) , "ನನ್ನ ಸ್ನೇಹಿತರು ಅದರ ಬಗ್ಗೆ ಮಾತನಾಡಲು ಪ್ರಾರಂಭಿಸಿದ ನಂತರ ನನ್ನ ಹೆಸರಿನ ಮಹತ್ವದ ಬಗ್ಗೆ ತಿಳಿದುಕೊಂಡಾಗ ನಾನು ಹತ್ತನೇ ತರಗತಿಯಲ್ಲಿದ್ದೆ" ಎಂದು ಹೇಳಿದರು.ಬಂಗಾಳ ಮುಖ್ಯಮಂತ್ರಿಯ ಬಗ್ಗೆ ಅವರ ಅಭಿಪ್ರಾಯದ ಬಗ್ಗೆ ಕೇಳಿದಾಗ, ಇದಕ್ಕೆ ಪ್ರತಿಕ್ರಿಯಿಸಿದ ಅವರು "ನಾನು ಅವರನ್ನು ಅನೇಕ ಬಾರಿ ಸುದ್ದಿಗಳಲ್ಲಿ ನೋಡಿದ್ದೇನೆ. ಅವರು ಪ್ರಬಲ ಮಹಿಳೆಯಾಗಿದ್ದಾರೆ. ಅದನ್ನು ಹೇಳಲು ನನಗೆ ತುಂಬಾ ಹೆಮ್ಮೆ ಇದೆ" ಎಂದು ಉತ್ತರಿಸಿದರು.


ವಧುವಿನ ಸಂಬಂಧಿಯಾಗಿರುವ 29 ವರ್ಷದ ವರ ಸೋಷಿಯಲಿಸಂ(Socialism) ಬಿಕಾಂ ಪದವಿ ಪಡೆದಿದ್ದು ಬೆಳ್ಳಿ ಚೈನ್ ಮಾರುವ ವ್ಯವಹಾರ ನಡೆಸುತ್ತಿದ್ದಾನೆ. ಅವರ ತಂದೆ ಎ ಮೋಹನ್ ಸೇಲಂನ ಸಿಪಿಐ ಘಟಕದ ಜಿಲ್ಲಾ ಕಾರ್ಯದರ್ಶಿಯಾಗಿದ್ದು, ಸೋವಿಯತ್ ಒಕ್ಕೂಟ ಕುಸಿಯುತ್ತಿರುವಾಗ ಅವರ ಮಗನಿಗೆ ಸೋಷಿಯಲಿಸಂ ಎಂದು ಹೆಸರಿಸಿದ್ದರು. ಅವರ ಇತರ ಇಬ್ಬರು ಪುತ್ರರಿಗೆ ಕಮ್ಯುನಿಸಮ್ ಮತ್ತು ಲೆನಿನಿಸಂ ಎಂದು ಹೆಸರಿಸಲಾಗಿದೆ. ಮೋಹನ್ ಅವರು ಮದುವೆಯಾಗುವುದಕ್ಕೂ ಮುಂಚೆಯೇ ತಮ್ಮ ಮಕ್ಕಳಿಗೆ ಈ ರೀತಿ ಹೆಸರಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಜೂನ್ 13 ಕ್ಕೆ AM Socialism ಮದುವೆಯಾಗಲಿರುವ 'P Mamata Banerjee..!


ರಾಜಕೀಯ ವಿರೋಧಿಗಳ ಹೆಸರು ಇಟ್ಟಿರುವುದು ಏನಾದರೂ ಪರಿಣಾಮ ಬೀರುತ್ತದೆ ಎಂದು ಕೇಳಿದಾಗ' ಇದಕ್ಕೆ ಪ್ರತಿಕ್ರಿಯಿಸಿದ ಅವರು  "ನಾವು ಒಟ್ಟಿಗೆ ಬರುವ ಬಗ್ಗೆ ಸಂತೋಷಪಡುತ್ತೇವೆ. ಸಂತೋಷದ ಸಮಯಗಳಲ್ಲಿ ಮತ್ತು ಕಠಿಣ ಸಮಯಗಳಲ್ಲಿ ನಾವು ಒಟ್ಟಿಗೆ ಬೇರ್ಪಡಿಸಲಾಗದವರಾಗಿರುತ್ತೇವೆ. ಏನಾಗಲಿ, ನಮ್ಮ ಇಡೀ ಜೀವನವನ್ನು ನಾವು ಒಟ್ಟಿಗೆ ನೋಡುತ್ತೇವೆ" ಎಂದು ಸೋಶಿಯಲಿಂ ಹೇಳಿದರು.


ತಮಿಳುನಾಡು ಸಿಪಿಐ ಮುಖ್ಯಸ್ಥ ಆರ್ ಮುತರಸನ್ ಮತ್ತು ತಿರುಪ್ಪೂರಿನ ಪಕ್ಷದ ಸಂಸದ ಕೆ ಸುಬ್ಬರಾಯಣ್ ಸೇರಿದಂತೆ ಎಡ ಮುಖಂಡರು ವಿವಾಹದಲ್ಲಿ ಭಾಗವಹಿಸಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.