ನವದೆಹಲಿ: ಬಿಜೆಪಿ ಹಾಗೂ ಆರೆಸೆಸ್ಸ್ ಬೆಂಬಲಿಗರು ಲೋಕಸಭಾ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಭದ್ರತಾ ಪಡೆಗಳ ವೇಷದಲ್ಲಿ ಪ್ರವೇಶಿಸಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೆ ಆರೋಪಿಸಿದ್ದಾರೆ.


COMMERCIAL BREAK
SCROLL TO CONTINUE READING

"ನಾನು ಕೇಂದ್ರ ಭದ್ರತಾ ಪಡೆಗಳನ್ನು ಅಗೌರವಿಸುತ್ತಿಲ್ಲ, ಆದರೆ ಇಲ್ಲಿ ಮತದಾರರನ್ನು ಹೆದರಿಸಲು ಅವರಿಗೆ ಸೂಚನೆ ನೀಡಲಾಗುತ್ತಿದೆ. ವಾಸ್ತವವಾಗಿ, ಇಲ್ಲಿ ಕಳುಹಿಸಿಕೊಟ್ಟಿರುವ ಕೇಂದ್ರೀಯ ಪಡೆಗಳಲ್ಲಿ ಕೆಲವರು ಸೈನಿಕರ ವೇಷ ಧರಿಸಿರುವ  ಆರ್ಎಸ್ಎಸ್ ಕಾರ್ಯಕರ್ತರಿದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದು ದಕ್ಷಿಣ 24 ಪರಗಾನಸ್ ಜಿಲ್ಲೆಯ ಬಸಂತಿ ಪ್ರದೇಶದ ರ್ಯಾಲಿಯಲ್ಲಿನ ಭಾಷಣದಲ್ಲಿ ಮಮತಾ ಆರೋಪಿಸಿದ್ದಾರೆ.


ಕೇಂದ್ರ ಚುನಾವಣಾ ಆಯೋಗದ ನಿರ್ದೇಶನಕ್ಕೆ ಅನುಗುಣವಾಗಿ ಎಲ್ಲ ಮತಗಟ್ಟೆಗಳನ್ನೂ ನಿಯಂತ್ರಿಸುತ್ತಿರುವ ಕೇಂದ್ರೀಯ ಪಡೆ ಸಿಬ್ಬಂದಿಗಳ ವಿರುದ್ಧ ಕಿಡಿಕಾರಿದ ಮಮತಾ ಬ್ಯಾನರ್ಜೀ "ಅವರು ಜನರಿಗೆ ಬಿಜೆಪಿ ಪಕ್ಷದ ಪರವಾಗಿ ಮತ ಚಲಾಯಿಸುವಂತೆ ಕೇಳುತ್ತಿದ್ದಾರೆ. ಅದನ್ನು ಹೇಗೆ ಮಾಡಬಹುದು? ಮತಗಳು ಬಿಜೆಪಿಗೆ ಬಂದಿವೆಯೇ ಇಲ್ಲವೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಕೇಂದ್ರ ಪಡೆಗಳ ಕೆಲಸವೇ? ಮೋದಿ ಸರಕಾರವು ಕೆಲವು ನಿವೃತ್ತ ಅಧಿಕಾರಿಗಳನ್ನು ಇಲ್ಲಿ ಮತದಾನಕ್ಕಾಗಿ  ಬಳಸುತ್ತಿದೆ." ಎಂದು ಮಮತಾ ಬಿಜೆಪಿ ವಿರುದ್ಧ ಹರಿಹಾಯ್ದರು 


ರಾಜಕೀಯ ಅಧಿಕಾರವು ಕ್ಷಣಿಕವಾಗಿದೆ ಎಂದು ಕೇಂದ್ರೀಯ ಸಿಬ್ಬಂದಿ ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಕೆಲಸ ಮಾಡುವ ಬಗ್ಗೆ ನಾಚಿಕೆಯಾಗಬೇಕು  (ಮೋದಿಗಾಗಿ ಮತ ಚಲಾಯಿಸಲು ಜನರನ್ನು ಕೇಳಿಕೊಳ್ಳುವುದು) ... ನೀವು ಕೆಲಸ ಮಾಡಲು ಇಲ್ಲಿದ್ದೀರಿ. ಇಂದು ಮೋದಿ ನೇತೃತ್ವದಲ್ಲಿ, ಆದರೆ ನಾಳೆ ಇನ್ನೊಬ್ಬರ ಅಡಿಯಲ್ಲಿ ನೀವು ಇರುತ್ತೀರಿ. ಆಗ ನೀವು ಏನು ಮಾಡುತ್ತೀರಿ? "ಎಂದು ಅವರು ಪ್ರಶ್ನಿಸಿದರು.