PM Modi: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ 'ಕುಟುಂಬ ಆಧಾರಿತ' ರಾಜಕೀಯ ಪಕ್ಷಗಳು ಸರ್ಕಾರಿ ಉದ್ಯೋಗಗಳ ನೇಮಕಾತಿಗಳಲ್ಲಿ 'ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರ'ವನ್ನು ಉತ್ತೇಜಿಸುತ್ತಿವೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ . ವಾಸ್ತವವಾಗಿ, ಪ್ರಧಾನಿ ಮೋದಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಯಾದವ್ ಅವರ ಹೆಸರನ್ನು ಹೇಳದೇ ಅವರನ್ನು ಗುರಿಯಾಗಿಸಿದ್ದಾರೆ. ರೈಲ್ವೇ ಸಚಿವರಾಗಿದ್ದ ಲಾಲು ಯಾದವ್ ಅವರು ಹುದ್ದೆಗೆ ಬದಲಾಗಿ ಜಮೀನು ಬರೆಸಿಕೊಂಡಿರುವ ವಿಚಾರದಲ್ಲಿ ಪ್ರಸ್ತುತ ತನಿಖೆ ನಡೆಯುತ್ತಿದೆ ಎಂಬುದು ಇಲ್ಲಿ ಗಮನಾರ್ಹ. 


COMMERCIAL BREAK
SCROLL TO CONTINUE READING

ತಮ್ಮ ಸರ್ಕಾರವು ಯುವಕರ ಉಜ್ವಲ ಭವಿಷ್ಯವನ್ನು 'ಭದ್ರಪಡಿಸುವ' ಕೆಲಸ ಮಾಡುತ್ತಿರುವಾಗ ಅಂತಹ ಪಕ್ಷಗಳು ವಿವಿಧ ಹುದ್ದೆಗಳಿಗೆ ತಮ್ಮ 'ರೇಟ್ ಕಾರ್ಡ್' ಮೂಲಕ ಯುವಕರನ್ನು 'ಲೂಟಿ' ಮಾಡಿವೆ ಎಂದು ಅವರು ಹೇಳಿದ್ದಾರೆ.
ಉದ್ಯೋಗ ಮೇಳದಡಿ ನೇಮಕಾತಿ ಪತ್ರಗಳನ್ನು ವಿತರಿಸಿದ ನಂತರ ವೀಡಿಯೋ ಕಾನ್ಫರೆನ್ಸ್ ಮೂಲಕ ಹೊಸದಾಗಿ ನೇಮಕಗೊಂಡ 70,126 ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತವನ್ನು ಉತ್ತೇಜಿಸುವ ಮೂಲಕ ಕುಟುಂಬ ರಾಜಕಾರಣದಲ್ಲಿ ನಿರತ  ಪಕ್ಷಗಳು ಯುವಕರ ಕನಸುಗಳನ್ನು 'ಛಿದ್ರಗೊಳಿಸಿವೆ' ಎಂದು ಹೇಳಿದ್ದಾರೆ. ಇನ್ನೊಂದೆಡೆ ತಮ್ಮ ಸರ್ಕಾರ ಯುವಕರ ಸಂಕಲ್ಪಗಳನ್ನು ಸಾಕಾರಗೊಳಿಸುವಲ್ಲಿ ಕಾರ್ಯನಿರತವಾಗಿದೆ ಎಂದು ಅವರು ಹೇಳಿದ್ದಾರೆ. 


'ಈಗ ಕೆಲವೇ ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ'
ಈ ಹಿಂದೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲು ಒಂದರಿಂದ ಒಂದೂವರೆ ವರ್ಷ ಕಾಲಾವಕಾಶ ಬೇಕಾಗುತ್ತಿತ್ತು, ಆದರೆ ಇಂದು ಕೆಲವೇ ತಿಂಗಳಲ್ಲಿ ಅದು ಪಾರದರ್ಶಕವಾಗಿ ಪೂರ್ಣಗೊಳ್ಳುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಒಂದೆಡೆ ಕುಟುಂಬ ರಾಜಕಾರಣ ಮಾಡುವ ಪಕ್ಷಗಳಿವೆ, ಭ್ರಷ್ಟಾಚಾರ ನಡೆಸುವ  ಪಕ್ಷಗಳಿವೆ, ದೇಶದ ಯುವಕರನ್ನು ಲೂಟಿ ಮಾಡುವ ಪಕ್ಷಗಳಿವೆ... ಅವರ ದಾರಿ ‘ರೇಟ್ ಕಾರ್ಡ್’... ಆದರೆ ನಾವು ಈ ದೇಶದ ಯುವಕರ ಭವಿಷ್ಯವನ್ನು 'ಸೇಫ್ ಗಾರ್ಡ್' ಮಾಡುವ ಕೆಲಸದಲ್ಲಿ ನಿರತರಾಗಿದ್ದೇವೆ ಎಂದು ಅವರು ಹೇಳಿದ್ದಾರೆ.


ರೇಟ್ ಕಾರ್ಡ್‌ಗಳು ನಿಮ್ಮ ಕನಸುಗಳನ್ನು ಛಿದ್ರಗೊಳಿಸುತ್ತವೆ ಆದರೆ ನಿಮ್ಮ ನಿರ್ಣಯಗಳನ್ನು ಸಾಕಾರಗೊಳಿಸುವಲ್ಲಿ ನಾವು ನಿರತರಾಗಿದ್ದೇವೆ ಎಂದು ಪ್ರಧಾನಿ ಹೇಳಿದ್ದಾರೆ. ನಿಮ್ಮ ಮತ್ತು ನಿಮ್ಮ ಕುಟುಂಬದ ಎಲ್ಲಾ ಆಶಯಗಳು ಮತ್ತು ಆಕಾಂಕ್ಷೆಗಳನ್ನು ನಾವು 'ಸೆಫ್ ಗಾರ್ಡ್'  ಮಾಡುವಲ್ಲಿ ತೊಡಗಿದ್ದೇವೆ.


ದೇಶದ ಕೋಟ್ಯಾಂತರ ಜನರಿಗೆ ಈ ಪಕ್ಷಗಳು ದ್ರೋಹ ಬಗೆದಿವೆ.
ಕೇಂದ್ರ ಸರ್ಕಾರವು ಆಯೋಜಿಸಿರುವ ಉದ್ಯೋಗ ಅಭಿಯಾನವನ್ನು ಪಾರದರ್ಶಕತೆ ಮತ್ತು ಉತ್ತಮ ಆಡಳಿತದ ಪುರಾವೆ ಎಂದು ಬಣ್ಣಿಸಿದ ಪ್ರಧಾನಿ, 'ಕುಟುಂಬ' ರಾಜಕೀಯ ಪಕ್ಷಗಳು ಪ್ರತಿಯೊಂದು ವ್ಯವಸ್ಥೆಯಲ್ಲಿ ಸ್ವಜನಪಕ್ಷಪಾತವನ್ನು ಉತ್ತೇಜಿಸುತ್ತವೆ ಮತ್ತು ಸರ್ಕಾರಿ ಉದ್ಯೋಗಗಳ ವಿಷಯದಲ್ಲಿ ಭ್ರಷ್ಟಾಚಾರ ಮಾಡುವಲ್ಲಿ ತೊಡಗಿವೆ ಎಂದು ಅವರು ಆರೋಪಿಸಿದ್ದಾರೆ.  ಈ ಪಕ್ಷಗಳು ದೇಶದ ಕೋಟಿ ಕೋಟಿ ಜನರಿಗೆ ದ್ರೋಹ ಬಗೆದಿವೆ. ನಮ್ಮ ಸರ್ಕಾರ ಪಾರದರ್ಶಕತೆಯನ್ನು ತಂದಿದೆ ಮತ್ತು ನಾವು ಸ್ವಜನಪಕ್ಷಪಾತವನ್ನೂ ಕೂಡ ಮಟ್ಟಹಾಕುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಮೋದಿ ಹೇಳಿದ್ದಾರೆ. 


ಉದ್ಯೋಗ ಮೇಳಗಳು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರಗಳ ವಿಶಿಷ್ಟ ಲಕ್ಷಣಗಳಾಗಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇಂದು ಖಾಸಗಿ ಮತ್ತು ಸರ್ಕಾರಿ ವಲಯದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿದ್ದು, ಯುವಕರಿಗೆ ಉದ್ಯೋಗ ನೀಡಿದ ಪ್ರಮಾಣ 'ಅಭೂತಪೂರ್ವ' ಎಂದಿದ್ದಾರೆ.


ಪ್ರಧಾನ ಮಂತ್ರಿ ಮೋದಿ, 'ಪ್ರಮುಖ ಸರ್ಕಾರಿ ಉದ್ಯೋಗ ನೀಡುವ ಸಂಸ್ಥೆಗಳು - ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ), ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ಮತ್ತು ರೈಲ್ವೇ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಮೊದಲಿಗಿಂತ ಹೆಚ್ಚು ಯುವಕರಿಗೆ ಉದ್ಯೋಗ ನೀಡುತ್ತಿವೆ. ಪರೀಕ್ಷಾ ಪ್ರಕ್ರಿಯೆಯನ್ನು ಪಾರದರ್ಶಕ ಮತ್ತು ಸರಳವಾಗಿಸಲು ಈ ಸಂಸ್ಥೆಗಳು ಒತ್ತು ನೀಡಿವೆ.


ಭಾರತದ ಮೇಲಿನ ನಂಬಿಕೆ ಮತ್ತು ಇಂದು ಅದರ ಆರ್ಥಿಕತೆಯ ಮೇಲಿನ ನಂಬಿಕೆ ಹಿಂದೆಂದೂ ಇರಲಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ. ನಮ್ಮ ಅಭಿವೃದ್ಧಿ ಪಯಣದಲ್ಲಿ ಇಂದು ಇಡೀ ಜಗತ್ತು ನಮ್ಮೊಂದಿಗೆ ನಡೆಸಿಕೊಂಡು ಹೋಗಲು ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ.  ಹಿಂದೆಂದೂ ಭಾರತದ ಮೇಲೆ ಇಷ್ಟೊಂದು ನಂಬಿಕೆ ಮತ್ತು ನಮ್ಮ ಆರ್ಥಿಕತೆಯ ಮೇಲೆ ನಂಬಿಕೆ ಇರಲಿಲ್ಲ. ಎಲ್ಲ ಕಷ್ಟಗಳ ನಡುವೆಯೂ ಭಾರತ ತನ್ನ ಆರ್ಥಿಕತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ. ಪ್ರಪಂಚದ ದೊಡ್ಡ ಕಂಪನಿಗಳು ಉತ್ಪಾದನೆಗಾಗಿ ಭಾರತಕ್ಕೆ ಬರುತ್ತಿವೆ.


'ಇಂದು ಭಾರತ ಬಲಿಷ್ಠ ರಾಷ್ಟ್ರ'
ಜಾಗತಿಕ ಆರ್ಥಿಕ ಹಿಂಜರಿತ, ಕರೋನಾ ಸಾಂಕ್ರಾಮಿಕ ಮತ್ತು ಉಕ್ರೇನ್-ರಷ್ಯಾ ಯುದ್ಧದ ಹೊರತಾಗಿಯೂ ಭಾರತವು ತನ್ನ ಆರ್ಥಿಕತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.  'ಇಂದಿನ ಭಾರತ ಒಂದು ದಶಕದ ಹಿಂದಿನ ಭಾರತಕ್ಕೆ ಹೊಸಿಸಿದರೆ, ಹಿಂದೆ ಹೆಚ್ಚು ಸ್ಥಿರ, ಹೆಚ್ಚು ಸುರಕ್ಷಿತ ಮತ್ತು ಬಲವಾದ ದೇಶವಾಗಿ ಹೊರಹೊಮ್ಮಿದೆ. ರಾಜಕೀಯ ಭ್ರಷ್ಟಾಚಾರ, ಯೋಜನೆಗಳಲ್ಲಿನ ಅಡಚಣೆಗಳು ಮತ್ತು ಸಾರ್ವಜನಿಕ ಹಣದ ದುರುಪಯೋಗ ... ಇದು ಹಳೆಯ ಸರ್ಕಾರಗಳ ಗುರುತಾಗಿ ಮಾರ್ಪಟ್ಟಿದೆ, ಆದರೆ ಇಂದು ಭಾರತ ಸರ್ಕಾರವು ತನ್ನ ಸ್ಥಿರ ಸರ್ಕಾರದಿಂದ, ಅದರ ನಿರ್ಣಾಯಕ ನಿರ್ಧಾರಗಳಿಂದ ಗುರುತಿಸಲ್ಪಟ್ಟಿದೆ. ಇಂದು ಭಾರತ ಸರ್ಕಾರವು ತನ್ನ ಆರ್ಥಿಕ ಮತ್ತು ಪ್ರಗತಿಪರ ಸಾಮಾಜಿಕ ಸುಧಾರಣೆಗಳಿಗಾಗಿ ಗುರುತಿಸಲ್ಪಟ್ಟಿದೆ.


ಇದನ್ನೂ ಓದಿ-Biparjoy Cyclone Update: ಪ್ರಭಾವ ಬೀರಲಾರಂಭಿಸಿದ ಬಿಪರ್ಜೋಯ್, 67 ರೈಲುಗಳ ಪ್ರಯಾಣ ರದ್ದು


ದೇಶಾದ್ಯಂತ 43 ಸ್ಥಳಗಳಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಲಾಗಿದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಾಗೂ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದ ನೇಮಕಾತಿಗಳನ್ನು ನಡೆಸಲಾಗುತ್ತಿದೆ. ಹಣಕಾಸು ಸೇವೆಗಳ ಇಲಾಖೆ, ಅಂಚೆ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ರಕ್ಷಣಾ ಸಚಿವಾಲಯ, ಕಂದಾಯ ಇಲಾಖೆ, ಆರೋಗ್ಯ ಸಚಿವಾಲಯ, ಅಣುಶಕ್ತಿ ಇಲಾಖೆ, ರೈಲ್ವೆ ಸಚಿವಾಲಯ, ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಹೊಸ ನೌಕರರನ್ನು ನೇಮಕ ಮಾಡಲಾಗಿದೆ. ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಮತ್ತು ಗೃಹ ವ್ಯವಹಾರಗಳ ಸಚಿವಾಲಯ ಇತ್ಯಾದಿಗಳಲ್ಲಿಯೂ ಕೂಡ ನೇಮಕಾತಿಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ. 


ಇದನ್ನೂ ಓದಿ-Biparjoy Cyclone: ಅಪಾಯಕಾರಿ ಸ್ವರೂಪ ಪಡೆದುಕೊಳ್ಳುತ್ತಿದೆ ಬಿಪರ್ಜಾಯ್, ಅಧಿಕಾರಿಗಳಿಗೆ ಪ್ರಧಾನಿ ಮೋದಿ ನಿರ್ದೇಶನ


ಹೊಸದಾಗಿ ನೇಮಕಗೊಂಡ ಉದ್ಯೋಗಿಗಳು IGOT ಕರ್ಮಯೋಗಿ ಪೋರ್ಟಲ್‌ನಲ್ಲಿ ಆನ್‌ಲೈನ್ ಮಾಡ್ಯೂಲ್ 'ಕರ್ಮಯೋಗಿ ಪ್ರಧಾನ್' ಮೂಲಕ ತರಬೇತಿ ಪಡೆಯಲು ಅವಕಾಶವನ್ನು ಪಡೆಯುತ್ತಿದ್ದಾರೆ. ಎಲ್ಲಿಂದ ಬೇಕಾದರೂ ಯಾವುದೇ ಸಾಧನದ ಮೂಲಕ ಅಧ್ಯಯನ ಮಾಡಲು 400 ಕ್ಕೂ ಹೆಚ್ಚು ಇ-ಲರ್ನಿಂಗ್ ಕೋರ್ಸ್‌ಗಳು ಲಭ್ಯವಿದೆ ಎಂದು ಪ್ರದಾನಿ ಹೇಳಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.