ತಾಯಿಯ ಎರಡನೇ ಮದುವೆ ಬಗ್ಗೆ ಭಾವುಕ ಪತ್ರ ಬರೆದ ಮಗ ಹೇಳಿದ್ದೇನು ಗೊತ್ತೇ!
ಗೋಕುಲ್ ಶ್ರೀಧರ್ ಮಂಗಳವಾರ ತನ್ನ ತಾಯಿಯ ಎರಡನೆಯ ವಿವಾಹದ ಬಗ್ಗೆ ಭಾವುಕರಾಗಿ ಪತ್ರ ಬರೆದಿದ್ದಾರೆ. ಈವರೆಗೂ 4 ಸಾವಿರಕ್ಕೂ ಹೆಚ್ಚು ಜನರು ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ನವದೆಹಲಿ: ತಾಯಿ ತನ್ನ ಮಕ್ಕಳಿಗಾಗಿ ಯಾವ ತ್ಯಾಗವನ್ನಾದರೂ ಮಾಡುತ್ತಾರೆ. ಜೀವನದಲ್ಲಿ ಎಷ್ಟೇ ಕಷ್ಟ ಎದುರಾದರು ತನ್ನ ಮಕ್ಕಳ ರಕ್ಷಣೆ, ಪೋಷಣೆ ಒಂದೇ ಆಕೆಯ ಗುರಿ, ಕನಸು ಎಲ್ಲವೂ ಆಗಿರುತ್ತದೆ. ತಾನು ಎಷ್ಟೇ ಕಷ್ಟ ಪಡುತ್ತಿರಲಿ, ತನ್ನ ಆಯಾಸ ಮತ್ತು ತೊಂದರೆಗಳನ್ನು ಮಕ್ಕಳ ನಗು ನೋಡುವ ಮೂಲಕ ಮರೆತು ಬಿಡುತ್ತಾಳೆ. ಅದಕ್ಕಾಗಿಯೇ ಭೂಮಿಯ ಮೇಲೆ ತಾಯಿಗೆ ದೇವರ ಸ್ಥಾನಮಾನವನ್ನು ನೀಡಲಾಗುತ್ತದೆ.
ಕೇರಳದ ಗೋಕುಲ್ ಶ್ರೀಧರ್ ಅವರ ತಾಯಿ ಕೂಡಾ ಜೀವನದಲ್ಲಿ ಹಲವು ತೊಂದರೆಗಳನ್ನು ಎದುರಿಸಿದ್ದರು. ಮೊದಲ ಮದುವೆಯಲ್ಲಿ, ಮಕ್ಕಳ ಸಂತೋಷವೇನೋ ಲಭಿಸಿತು. ಆದರೆ ಗಂಡನಿಂದ ಸಿಕ್ಕಿದ್ದು ಬರಿ ದುಃಖ. ಗೋಕುಲ್ ಶ್ರೀಧರ ತನ್ನ ತಾಯಿಯ ಎರಡನೆಯ ವಿವಾಹದ ಸಂದರ್ಭದಲ್ಲಿ, ತಾಯಿಯ ಹೆಸರಿನಲ್ಲಿ ಒಂದು ಭಾವೋದ್ರಿಕ್ತ ಪತ್ರ ಬರೆದರು, ಇದು ಈಗ ಸಾಮಾಜಿಕ ಜಾಲತಾಣದಲ್ ವೈರಲ್ ಆಗತೊಡಗಿದೆ. 4 ಸಾವಿರಕ್ಕೂ ಹೆಚ್ಚು ಜನರು ಈ ಪೋಸ್ಟ್ ಅನ್ನು ಇಲ್ಲಿಯವರೆಗೆ ಹಂಚಿಕೊಂಡಿದ್ದಾರೆ.
ಗೋಕುಲ್ ಶ್ರೀಧರ್ ಮಂಗಳವಾರ ತನ್ನ ತಾಯಿಯ ಎರಡನೆಯ ವಿವಾಹದ ಬಗ್ಗೆ ಭಾವುಕರಾಗಿ ಪತ್ರ ಬರೆದಿದ್ದಾರೆ. ಗೋಕುಲ್ ಶ್ರೀಧರ್ ಮಲಯಾಳಂನಲ್ಲಿ ಈ ಪತ್ರವನ್ನು ಬರೆದಿದ್ದಾರೆ. ಅದರಲ್ಲಿ ತಾಯಿಯ ಎರಡನೇ ವಿವಾಹಕ್ಕೆ ಅಭಿನಂದನೆ ತಿಳಿಸಿರುವ ಗೋಕುಲ್, ತನ್ನ ತಾಯಿ ಅನುಭವಿಸಿದ ಮಾನಸಿಕ, ದೈಹಿಕ ಹಿಂಸಾಚಾರದ ಬಗ್ಗೆ ಬರೆದಿದ್ದಾರೆ. ಅಮ್ಮ ಇದೆಲ್ಲವನ್ನೂ ನನ್ನ ಸುರಕ್ಷತೆ ಮತ್ತು ಭವಿಷ್ಯಕ್ಕಾಗಿ ಮಾಡಿದ್ದಾರೆ. ಅವರ ಹೊಸ ಜೀವನ ನನಗೆ ಸಂತೋಷವಾಗಿದೆ ಎಂದು ಅವರು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಈ ಪೋಸ್ಟ್ ಹಂಚಿಕೊಳ್ಳುವ ಮೊದಲು ನನಗೆ ಹಿಂಜರಿಕೆ ಇತ್ತು. ಸಮಾಜದ ಒಂದು ಭಾಗ ನನ್ನ ಈ ವಿಚಾರವನ್ನು ಸರಿಯಾಗಿ ತೆಗೆದುಕೊಳ್ಳುವುದಿಲ್ಲ ಎಂದು ನಾನು ಭಾವಿಸಿದ್ದೇನೆ. ಆದರೆ ನನಗೆ ಯಾರಿಂದಲೂ ಏನನ್ನೂ ಮುಚ್ಚಿಡುವ ಅಗತ್ಯವಿಲ್ಲ ಎಂದು ನಾನು ಅರಿತುಕೊಂಡೆ. ನಾನು ನನ್ನ ಸಂತಸವನ್ನು ಹಂಚಿಕೊಳ್ಳಲು ನಿರ್ಧರಿಸಿದೆ ಎಂದು ಅವರು ಬರೆದಿದ್ದಾರೆ.
ಗೋಕುಲ್ ಶ್ರೀಧರ್ ತಮ್ಮ ತಾಯಿಗೆ ಬರೆದಿರುವ ಭಾವನಾತ್ಮಕ ಸಾಲುಗಳಿವು. 'ಒಬ್ಬ ಮಹಿಳೆ, ನನಗೆ ತನ್ನ ಜೀವವನ್ನೇ ಅರ್ಪಿಸಿದರು. ತನ್ನ ಮೊದಲ ವಿವಾಹಿತ ಜೀವನದಲ್ಲಿ ತಾಯಿ ಬಹಳಷ್ಟು ಕಷ್ಟ ಅನುಭವಿಸಿದ್ದಾರೆ. ಆಕೆ ದೈಹಿಕವಾಗಿ ಹಿಂಸಾಚಾರಕ್ಕೊಳಗಾಗಿ ಆಕೆಯ ಹಣೆಯಲ್ಲಿ ರಕ್ತ ಸುರಿಯುವುದನ್ನು ಅದೆಷ್ಟೋ ಬಾರಿ ನಾನು ನನ್ನ ಕಣ್ಣಾರೆ ನೋಡಿದ್ದೇನೆ. ಆ ದಿನಗಳು ನನಗೆ ಇಂದಿಗೂ ಚೆನ್ನಾಗಿ ನೆನಪಿದೆ, ನಾನು ನಿಮಗಾಗಿ ಇದನ್ನು ಸಹಿಸುತ್ತಿರುವೆ ಎಂದು ನೀವು ಪ್ರತಿ ಬಾರಿ ನನಗೆ ತಿಳಿಸುತ್ತಿದ್ದಿರಿ. ನನ್ನ ತಾಯಿ ತನ್ನ ಇಡೀ ಜೀವನವನ್ನು ನನಗೆ ಸಮರ್ಪಿಸಿದರು. ಇದೀಗ ನನ್ನ ಸರದಿ, ಅವರಿಗೆ ಹಲವು ಕನಸುಗಳಿವೆ, ಅದನ್ನು ನಾನು ಪೂರೈಸಬೇಕು. ನನಗೆ ಹೇಳಲು ಹೆಚ್ಚು ಇಲ್ಲ, ಆದರೆ ಈ ಅವಕಾಶ ಅಥವಾ ನನ್ನಿಂದ ಮರೆಮಾಡಲು ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಅಮ್ಮ! ಹ್ಯಾಪಿ ಮ್ಯಾರೀಡ್ ಲೈಫ್'.