ನವದೆಹಲಿ: ಗಾಂಧಿ  ಕುಟುಂಬದ ಬೆಂಬಲಿಗರು ಮತ್ತು ಬಂಡಾಯ ನಾಯಕರ ನಡುವೆ ಸುದೀರ್ಘ ಕಿತ್ತಾಟದ ನಂತರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ಸೋನಿಯಾ ಗಾಂಧಿ ಅವರನ್ನು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಸಲು ನಿರ್ಧರಿಸಲಾಯಿತು. ಪಕ್ಷದಲ್ಲಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವವರೆಗೂ ಅವರು ಈ ಹುದ್ದೆಯನ್ನು ಅಲಂಕರಿಸಲು ಒಪ್ಪಿಕೊಂಡರು.


COMMERCIAL BREAK
SCROLL TO CONTINUE READING

ಆದರೆ ಸೋಮವಾರ ಬೆಳಿಗ್ಗೆ ಸಿಡಬ್ಲ್ಯೂಸಿ ಸಭೆ ಪ್ರಾರಂಭವಾದಾಗ ಸೋನಿಯಾ ಗಾಂಧಿ (Sonia Gandhi) ಅವರು ತಮ್ಮ ಅಧ್ಯಕ್ಷ ಹುದ್ದೆಯನ್ನು ತೊರೆಯುವುದಾಗಿ ಹೇಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ಅದರ ನಂತರ ಕೇರಳದ ವಯನಾಡ್ ಸಂಸದ  ರಾಹುಲ್ ಗಾಂಧಿ(Rahul Gandhi) ಮತ್ತೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಲಿದ್ದಾರೆ ಎಂಬ ಊಹಾಪೋಹಗಳು ಕೇಳಿಬಂದವು. ಆದರೆ ಸಂಜೆಯ ಹೊತ್ತಿಗೆ ಬೇರೆಯೇ ನಿರ್ಧಾರ ಹೊರಬಿದ್ದಿತು.


ಏತನ್ಮಧ್ಯೆ ಟ್ವಿಟ್ಟರ್ನಲ್ಲಿ ರಾಹುಲ್ ಗಾಂಧಿ ಮತ್ತೆ ಅಧ್ಯಕ್ಷರಾಗದಿದ್ದಾಗ ಜನರು #ReimburseMyKajuKatli ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಟ್ವೀಟ್ ಮಾಡಿದ್ದು ಇದು ಶೀಘ್ರದಲ್ಲಿಯೇ ಟ್ರೆಂಡ್ ಆಗ ತೊಡಗಿತು. 


ಟ್ವಿಟ್ಟರ್ ಬಳಕೆದಾರರೊಬ್ಬರು, ಇದು ತುಂಬಾ ಅನ್ಯಾಯ... ರಾಹುಲ್ ಗಾಂಧಿ ಅಧ್ಯಕ್ಷರಾಗುತ್ತಾರೆ ಎಂದು ನಾನೂ ಬೆಳಿಗ್ಗೆಯಿಂದ "ಕಾಜು ಕಟ್ಲಿ" ಖರೀದಿಸಿ ಹಂಚಲು ಕಾದು ಕುಳಿತಿದ್ದೇನೆ. ಈಗ ಕಾಂಗ್ರೆಸ್ ನನ್ನ ಸ್ವೀಟ್ ಬಾಕ್ಸ್ ಗೆ Reimbursement ಮಾಡಬೇಕು ಎಂದು ಬರೆದಿದ್ದಾರೆ.


ರಾಹುಲ್ ಆರೋಪಕ್ಕೆ ಆಜಾದ್, ಸಿಬಲ್ ಸಿಟ್ಟು: CWC ಸಭೆಯಲ್ಲಿ ರಾಜೀನಾಮೆ ಬೆದರಿಕೆ


ಈ ಎಲ್ಲಾ ವಿಷಯಗಳ ಚರ್ಚೆಯ ಬಳಿಕವೂ ಗಾಂಧಿ ಕುಟುಂಬವು ಕಾಂಗ್ರೆಸ್‌ನಲ್ಲಿ ಮತ್ತೊಮ್ಮೆ ತಮ್ಮ ಸರ್ವೋಚ್ಚ ನಾಯಕತ್ವವನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದರೂ, ಪಕ್ಷದಲ್ಲಿ ಅವರ ವಿರುದ್ಧ ಧ್ವನಿ ಎದ್ದಿರುವುದು ಬಹಿರಂಗಗೊಂಡಿವೆ.