ನವದೆಹಲಿ: ದೇಶದ ಮೂಲಭೂತ ಸೌಕರ್ಯವನ್ನು ಸುಧಾರಿಸುವಲ್ಲಿ ರಸ್ತೆ ಸಾರಿಗೆ ಸಚಿವ ನೀತಿನ್ ಗಡ್ಕರಿ ಮಾಡುತ್ತಿರುವ ಅದ್ಬುತ ಕೆಲಸ ಈಗ ಪಕ್ಷಾತೀತವಾಗಿ ಪ್ರಶಂಸೆಗೆ ಪಾತ್ರವಾಗಿದೆ.


COMMERCIAL BREAK
SCROLL TO CONTINUE READING

ನಿತಿನ್ ಗಡ್ಕರಿ ಪ್ರಶ್ನಾವಳಿ ಸಮಯದಲ್ಲಿ ತಮ್ಮ ಸಚಿವಾಲಯಕ್ಕೆ ಸಂಬಂಧಿಸಿದ ಎರಡು ಪ್ರಶ್ನೆಗಳಿಗೆ ಅವರು ವಿಸ್ತೃತ ವಿವರಣೆ ನೀಡಿದ್ದಲ್ಲದೆ ಇಡೀ ದೇಶಾದ್ಯಂತ ರಸ್ತೆ ಜಾಲವನ್ನು ನಿರ್ಮಾಣ ಮಾಡುತ್ತಿರುವ ಬಗ್ಗೆ ತಿಳಿಸಿದರು."ತಾವು ಮಾಡುತ್ತಿರುವ ಕಾರ್ಯಕ್ಕೆ ಪಕ್ಷಾತೀತವಾಗಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಲು ನಾನು ಇಚ್ಚಿಸುತ್ತೇನೆ" ಎಂದು ನಿತಿನ್ ಗಡ್ಕರಿ ತಿಳಿಸಿದರು. ಅಚ್ಚರಿಯೆಂದರೆ ಈ ಎಲ್ಲ ಹೊಗಳಿಕೆಗಳ ಮಧ್ಯದಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಗಡ್ಕರಿ ಕಾರ್ಯಕ್ಕೆ ಮೇಜನ್ನು ತಟ್ಟುವ ಮೂಲಕ ಮೆಚ್ಚುಗೆ ಸೂಚಿಸಿದರು.ಇದನ್ನು ನೋಡಿ ಮಲ್ಲಿಕಾರ್ಜುನ ಖರ್ಗೆ ಕೂಡ ಗಡ್ಕರಿಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.


ಇನ್ನೊಂದೆಡೆ ಗಡ್ಕರಿ ಉತ್ತರಗಳನ್ನು ಪೂರ್ಣಗೊಳಿಸಿದಾಗ ಮಧ್ಯಪ್ರದೇಶದ ಗಣೇಶ್ ಸಿಂಗ್ ಎದ್ದು ನಿಂತು ಮತ್ತು ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ರಸ್ತೆ ಸಾರಿಗೆ ಸಚಿವ ಗಡ್ಕರಿ ಮಾಡಿರುವ ಅದ್ಭುತ ಕೆಲಸಕ್ಕೆ ಪ್ರಶಂಸೆ ವ್ಯಕ್ತಪಡಿಸಬೇಕೆಂದು ಹೇಳಿದರು.ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗಡ್ಕರಿ ಅವರ ಹೇಳಿಕೆಗಳಿಗಾಗಿ ಮೆಚ್ಚುಗೆ ಸೂಚಿಸುತ್ತಾ ಬಿಜೆಪಿಯಲ್ಲಿ ಧೈರ್ಯವಿರುವ ವ್ಯಕ್ತಿ ಇದ್ದರೆ ಅದು ನೀವು ಮಾತ್ರ, ಆದ್ದರಿಂದ ತಾವು ರಫೇಲ್ ಹಗರಣ ಹಾಗೂ ರೈತರ ಸಮಸ್ಯೆಗಳ ಕುರಿತಾಗಿ ಮಾತನಾಡಬೇಕೆಂದು ಕೇಳಿಕೊಂಡಿದ್ದರು.