ವಾರ್ಧಾ: ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರೊಂದಿಗೆ ಮಂಗಳವಾರದಂದು ಮಹಾರಾಷ್ಟ್ರ ವಾರ್ಧಾದ ಸೇವಾಗ್ರಾಂನಲ್ಲಿ ಊಟ ಮಾಡಿದ ನಂತರ ತಮ್ಮ ತಟ್ಟೆಗಳನ್ನು ತೊಳೆದಿದ್ದಾರೆ . 


COMMERCIAL BREAK
SCROLL TO CONTINUE READING

ಈಗ ಈ ಇಬ್ಬರು ಊಟದ ನಂತರ ತಟ್ಟೆ ತೊಳೆಯಲು ನಲ್ಲಿಯಲ್ಲಿ ಬಾಗುತ್ತಿರುವ ವೀಡಿಯೋ ವೈರಲ್ ಆಗಿದೆ.



ಮಹಾತ್ಮಗಾಂಧಿಯವರ 149 ನೇ ಜನ್ಮದಿನದಂದು ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಲು ಇಲ್ಲಿನ ಸೇವಾಶ್ರಮಕ್ಕೆ ಸೋನಿಯಾ ಮತ್ತು ರಾಹುಲ್ ಆಗಮಿಸಿದ್ದರು. ಜೊತೆಗೆ  ಕಾಂಗ್ರೆಸ್ ನ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಲು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬಾಪು ಕುಟಿಗೆ ಆಗಮಿಸಿದ್ದರು.


 1986 ರಲ್ಲಿ ರಾಹುಲ್ ಗಾಂಧಿಯವರ ತಂದೆ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಇದೆ ದಿನದಂದು ನೆಟ್ಟಿದ್ದ ಮರದ ಪಕ್ಕದಲ್ಲಿ ರಾಹುಲ್ ಸಸಿ ನೆಟ್ಟಿದ್ದಾರೆ. ಇದು ರಾಹುಲ್  ಆಶ್ರಮಕ್ಕೆ ನೀಡುತ್ತಿರುವ ಎರಡನೇ ಭೇಟಿಯಾಗಿದೆ. ಅವರು ಹಿಂದೆ ಜನವರಿ 24, 2014 ರಂದು ಸಹ ಅವರು ಒಂದು ಸಸಿ ನೆಟ್ಟಿದ್ದರು.


ಸುಮಾರು 70 ವರ್ಷಗಳ ನಂತರ ಇದೆ ಮೊದಲ ಬಾರಿಗೆ  ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಭೆ ಸೇವಾಗ್ರಾಮದಲ್ಲಿ ನಡೆಯಿತು.