ನವದೆಹಲಿ: ಕಾಂಗ್ರೆಸ್‍ನ ಯುವ ನಾಯಕ ರಾಹುಲ್ ಗಾಂಧಿ ಅವರ ಮದುವೆ ವಿಚಾರ ಮತ್ತೊಮ್ಮೆ ಚರ್ಚೆಯಾಗುತ್ತಿದೆ. 53 ವರ್ಷವಾದರೂ ಒಂಟಿಯಾಗಿರುವ ರಾಹುಲ್‍ಗೆ ಮದುವೆ ಯಾವಾಗ? ಎಂದು ಕೇಳುವವರೇ ಹೆಚ್ಚು. ಇತ್ತೀಚೆಗಷ್ಟೇ ಹರಿಯಾಣದ ಮಹಿಳಾ ರೈತರು ಗಾಂಧಿ ಕುಟುಂಬವನ್ನು ಭೇಟಿಯಾಗಲು ಬಂದ ವೇಳೆ ರಾಹುಲ್ ಮದುವೆಯ ಬಗ್ಗೆ ಮತ್ತೆ ಮಾತುಕತೆ ನಡೆದಿದೆ.


COMMERCIAL BREAK
SCROLL TO CONTINUE READING

ಭಾರತ್ ಜೋಡೋ ಯಾತ್ರೆ’ಯ ವೇಳೆ ಭೇಟಿಯಾಗಿದ್ದ ಹರಿಯಾಣದ ಸೋನಿಪತ್‌ನ ಮಹಿಳಾ ರೈತರಿಗೆ ಕೊಟ್ಟ ಮಾತಿನಂತೆ ರಾಹುಲ್ ಗಾಂಧಿ ಅವರು  ದೆಹಲಿಯಲ್ಲಿ ಆತಿಥ್ಯ ನೀಡಿದ್ದಾರೆ. ಬಳಿಕ ಮಾತನಾಡಿದ ರಾಹುಲ್, ‘ಇದು ನನ್ನ ತಾಯಿ, ಪ್ರಿಯಾಂಕಾ ಮತ್ತು ನನಗೆ' ನೆನಪಿಡುವ ದಿನವೆಂದು ಹೇಳಿದ್ದಾರೆ. ತಮ್ಮ ಮನೆಗೆ ಬಂದಿದ್ದ ಮಹಿಳಾ ರೈತರಿಗೆ ದೆಹಲಿ ದರ್ಶನ ಮಾಡಿಸುವುದರ ಜೊತೆಗೆ ರಾತ್ರಿಯ ಭೋಜನದ ಮೂಲಕ ಉತ್ತಮ ಆತಿಥ್ಯ ನೀಡಲಾಯಿತು’ ಎಂದು ಹೇಳಿದ್ದಾರೆ.  


ಇದನ್ನೂ ಓದಿ: LAC ಮೇಲೆ ಚೀನಾ ದರ್ಪ: ತಕ್ಕ ಪ್ರತ್ಯುತ್ತರ ನೀಡಲು ಈ ವಿಶೇಷ 'ಯೋಜನೆ' ರೂಪಿಸಿದ ಭಾರತೀಯ ಸೇನೆ


ಪ್ರತಿಪಕ್ಷಗಳ ಒಗ್ಗಟ್ಟಿಗೆ ಶಾಕ್! ಪ್ರಧಾನಿ ಮೋದಿ ಜೊತೆ ಸೇರಲಿದ್ದಾರೆ INDIA ಮೈತ್ರಿಯ ಪ್ರಮುಖ ವ್ಯಕ್ತಿ..?


ವಿಡಿಯೋ ಹಂಚಿಕೊಂಡಿರುವ ರಾಹುಲ್ ಗಾಂಧಿ: ‘ಭಾರತ್ ಜೋಡೋ ಯಾತ್ರೆ’ಯ ವೇಳೆ ನಾನು ಹರಿಯಾಣದ ರೈತರ ಮನೆಯಲ್ಲಿಯೇ ಊಟ ಮಾಡಿದ್ದೆ. ಈ ವೇಳೆ ನನ್ನ ಜೊತೆ ಮಾತನಾಡಿದ್ದ ಅವರು ದೆಹಲಿ ನೋಡುವ ಆಸೆಯನ್ನು ವ್ಯಕ್ತಪಡಿಸಿದ್ದರು. ಹೀಗಾಗಿ ಅವರಿಗೆ ದೆಹಲಿಗೆ ಆಹ್ವಾನಿಸಿ ರಾಷ್ಟ್ರ ರಾಜಧಾನಿಯ ದರ್ಶನ ಮಾಡಿಸಲಾಯಿತು. ರಾತ್ರಿ ಅವರಿಗಾಗಿ ನಮ್ಮ ಮನೆಯಲ್ಲಿ ಭೋಜನ ಕೂಟ ಏರ್ಪಡಿಸಲಾಗಿತ್ತು. ಅಂದು ಅವರ ಮನೆಯಲ್ಲಿ ಮಾಡಿದ ಊಟದ ಋಣ ತಿರಿಸಲು ಸಾಧ್ಯವಿಲ್ಲ. ಹೀಗಾಗಿ ಇಂದು ನಾವು ಅವರಿಗೆ ಆತಿಥ್ಯ ನೀಡಿದ್ದೇವೆ’ ಎಂದು ರಾಹುಲ್ ವಿಡಿಯೋ ಹಂಚಿಕೊಂಡಿದ್ದಾರೆ.  


ನೀವೇ ಹೆಣ್ಣು ನೋಡಿ ಎಂದ ಸೋನಿಯಾ!: ಹರಿಯಾಣದ ಮಹಿಳಾ ರೈತರ ಜೊತೆಗೆ ರಾಹುಲ್, ಪ್ರಿಯಾಂಕಾ ಮತ್ತು ಸೋನಿಯಾ ಗಾಂಧಿ ಕೂಡ ಭೋಜನ ಮಾಡಿದರು. ಇದೇ ವೇಳೆ ಆತ್ಮೀಯ ಮಾತುಕತೆ ನಡೆದಿತ್ತು. ಈ ಸಂದರ್ಭದಲ್ಲಿ ಸೋನಿಯಾ ಗಾಂಧಿಯವರ ಕಿವಿಯಲ್ಲಿ ಮಹಿಳೆಯೊಬ್ಬರು ‘ರಾಹುಲ್ ಅವರ ಮದುವೆ ಯಾವಾಗ?’ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಅವರು, ‘ನೀವೇ ಒಂದು ಒಳ್ಳೆಯ ಹುಡುಗಿಯನ್ನು ನೋಡಿ, ಮದುವೆ ಆಗುತ್ತದೆ’ ಎಂದು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.