ನವದೆಹಲಿ: ಶೀಘ್ರದಲ್ಲೇ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆ ಪ್ರಾರಂಭಿಸಲಾಗುವುದು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಇಂದಿನ ಬಜೆಟಿನಲ್ಲಿ ಘೋಷಿಸಿದರು. 2017ರ ಅಂತ್ಯದ ವೇಳೆಗೆ 400 ರೈಲು ನಿಲ್ದಾಣಗಳಲ್ಲಿ ಲಭ್ಯವಿದ್ದ ವೈ-ಫೈ ಸೇವೆಯನ್ನು ಇನ್ನು ಮುಂದೆ ದೇಶಾದ್ಯಂತ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಒದಗಿಸಲು ಸರ್ಕಾರ ತಯಾರಿ ನಡೆಸಿದೆ. Wi-Fi ಯೋಜನೆಗಾಗಿ ರೈಲ್ವೆ ಇಲಾಖೆ ಗೂಗಲ್ ನೊಂದಿಗೆ ಒಡಂಬಡಿಕೆ ಹೊಂದಿತ್ತು. ಗೂಗಲಿನ ಫೈಬರ್ ತಂತ್ರಜ್ಞಾನವನ್ನು ಇದಕ್ಕಾಗಿ ಬಳಸಲಾಗುತ್ತದೆ. ಇದರ ಮೂಲಕ ಇಂಟರ್ ನೆಟ್ ಸೇವೆ 1ಜಿಬಿಪಿಎಸ್ ವೇಗದಲ್ಲಿ ಲಭ್ಯವಾಗುತ್ತದೆ.


COMMERCIAL BREAK
SCROLL TO CONTINUE READING

ಸಣ್ಣ ನಗರಗಳಲ್ಲಿ Wi-Fi ಬೇಡಿಕೆ ಹೆಚ್ಚು 
ರೈಲ್ವೆಯ ಉಚಿತ Wi-Fi ಸೌಕರ್ಯಗಳನ್ನು ಮೆಟ್ರೊ ನಗರಗಳಿಗೆ ಹೋಲಿಸಿದರೆ ಸಣ್ಣ ನಗರಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಇದಕ್ಕೆ ಕಾರಣವೆಂದರೆ ಈ ನಗರಗಳಲ್ಲಿ ಇಂಟರ್ ನೆಟ್ ವೇಗ ಕಡಿಮೆ. ಇದಲ್ಲದೆ, ಉಚಿತ ಇಂಟರ್ ನೆಟ್ ವೇಗವು 3 ಜಿ ಗಿಂತ ಹೆಚ್ಚಾಗಿದೆ. ಇದು ಚಿಕ್ಕ ನಗರಗಳಲ್ಲಿ ಹೆಚ್ಚಾಗಿ ಬಳಸಲ್ಪಡುತ್ತದೆ.