ನವದೆಹಲಿ: ರಾಷ್ಟ್ರದ ರಾಜಧಾನಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 20 ಕೋಟಿ ರೂ.ಗಳ ಮೌಲ್ಯದ ಹೆರಾಯಿನ್ ಹೊಂದಿದ್ದ ದಕ್ಷಿಣ ಆಫ್ರಿಕಾದ ಮಹಿಳೆಯನ್ನು ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ದಕ್ಷಿಣ ಆಫ್ರಿಕಾದ ಪಾಸ್‌ಪೋರ್ಟ್‌ನಲ್ಲಿ ಪ್ರಯಾಣಿಸುತ್ತಿದ್ದ ಈ ಮಹಿಳೆಯ ಬಳಿ ಸುಮಾರು 4900 ಗ್ರಾಂ ಹೆರಾಯಿನ್ ಪತ್ತೆಯಾಗಿದ್ದು, ಅವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಆಯುಕ್ತರ (ವಿಮಾನ ನಿಲ್ದಾಣ ಮತ್ತು ಜನರಲ್) ಕಚೇರಿ ಪ್ರಕಟಣೆ ತಿಳಿಸಿದೆ.


ದಕ್ಷಿಣ ಆಫ್ರಿಕಾದಿಂದ ಕತಾರ್ ಮೂಲಕ ನವದೆಹಲಿಯ ಐಜಿಐ ವಿಮಾನ ನಿಲ್ದಾಣದ ಟರ್ಮಿನಲ್ 3 ಗೆ ಪ್ರಯಾಣಿಸುತ್ತಿದ್ದ ಮಹಿಳೆಯನ್ನು ಗ್ರೀನ್ ಚಾನೆಲ್ ದಾಟಿದ ಬಳಿಕ ಅಧಿಕಾರಿಗಳು ತಡೆದಿದ್ದಾರೆ. ಈಕೆ ಕತಾರ್ ಏರ್ಲೈನ್ಸ್ ಫ್ಲೈಟ್ ನಂಬರ್ ಕ್ಯೂಆರ್ 570ರಲ್ಲಿ  ನವದೆಹಲಿಗೆ ಬಂದಿಳಿದಿದ್ದಾಗಿ ಎಂದು ಪ್ರಕಟಣೆ ತಿಳಿಸಿದೆ.


ಮಹಿಳೆಯ ಬ್ಯಾಗೇಜ್ ಪರಿಶೀಲನೆ ವೇಳೆ ಆಕೆಯ ಲಗೇಜಿನಲ್ಲಿ "ಹೆರಾಯಿನ್ ನ ಸಣ್ಣ ಪೊಟ್ಟಣಗಳು ಪತ್ತೆಯಾಗಿದೆ. ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ಎನ್‌ಡಿಪಿಎಸ್) ಕಾಯ್ದೆ, 1985 ರ ನಿಬಂಧನೆಗಳ ಪ್ರಕಾರ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಮಹಿಳೆಯನ್ನು ಸೆಕ್ಷನ್ 43 (ಬಿ) ಅಡಿಯಲ್ಲಿ ಬಂಧಿಸಲಾಗಿದೆ ಎಂದು ಕಸ್ಟಮ್ಸ್ ಇಲಾಖೆ ಪ್ರಕರಣೆ ತಿಳಿಸಿದೆ.