ಅಜಮ್ ಘಡ್: ಲೋಕಸಭಾ ಚುನಾವಣೆಗಾಗಿ ಸಮಾಜವಾದಿ ಪಕ್ಷದ ಅಧ್ಯಕ ಅಖಿಲೇಶ್ ಯಾದವ್ ಅಜಮ್ ಘಡ್ ಲೋಕಸಭಾ ಕ್ಷೇತ್ರದಿಂದ ಇಂದು ನಾಮಪತ್ರ ಸಲ್ಲಿಸಿದರು. ನಂತರ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಖಿಲೇಶ್, ಯೋಗಿ ಆದಿತ್ಯನಾಥ್ ಮತ್ತು ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು. ಉತ್ತರಪ್ರದೇಶದಲ್ಲಿ ನಮ್ಮ ಸರ್ಕಾರ ಮಾಡಿದ ಎಲ್ಲಾ ಕೆಲಸಗಳನ್ನು ಯೋಗಿ ಸರ್ಕಾರ ಹಾಳು ಮಾಡಿದೆ ಎಂದರು. 


COMMERCIAL BREAK
SCROLL TO CONTINUE READING

'ಅವರು ಚಾಯ್ ವಾಲಾ ಆದರೆ ನಾವು ಧೂದ್ ವಾಲಾ':
2014ರಲ್ಲಿ ನೀವೂ ಚಾಯ್ ವಾಲಾ ನನ್ನು ನಂಬಿ ಕೈ ಹಿಡಿದಿರಿ, ಆದರೆ ಒಳ್ಳೆಯ ಚಹಾ ಸಿಗಲಿಲ್ಲ. ಏಕೆಂದರೆ, ಹಾಲು ಇಲ್ಲದೆ ಚಹಾ ಚೆನ್ನಾಗಿ ಆಗಲು ಸಾಧ್ಯವಿಲ್ಲ. ಆದ್ದರಿಂದ ನಾವು ಹಾಲು ಕರೆಯುವವರು. 'ಅವರು ಚಾಯ್ ವಾಲಾ ಆದರೆ ನಾವು ಧೂದ್ ವಾಲಾ' ನಮ್ಮ ವಿನಃ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಹೇಳಿದರು.


ನಾಮಪತ್ರ ಸಲ್ಲಿಕೆಗೂ ಮೊದಲು ನಾನು ಪೂಜ್ಯ ಮಾಯಾವತಿ ಮತ್ತು ನೇತಾಜಿಯಿಂದ ಆಶೀರ್ವಾದ ಪಡೆದಿದ್ದೇನೆ ಎಂದು ಅಖಿಲೇಶ್ ಯಾದವ್ ರ‍್ಯಾಲಿಯಲ್ಲಿ ಮಾತನಾಡುತ್ತಾ ತಿಳಿಸಿದರು. ನಾಮಪತ್ರ ಸಲ್ಲಿಕೆಗಾಗಿ ಅಖಿಲೇಶ್ ಯಾದವ್ ಆಗಮನಕ್ಕೂ ಮೊದಲು ಬಹಳ ಉತ್ಸುಕರಾಗಿ ಸೇರಿದ್ದ ಸಮಾಜವಾದಿ ಪಕ್ಷದ ಸಾವಿರಾರು ಕಾರ್ಯಕತ್ರರನ್ನು ಉದ್ದೇಶಿಸಿ ಮಾತನಾಡಿದ ಅವರು, ಮೊದಲ ಮತ್ತು ಎರಡನೇ ಹಂತದ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಪರವಾಗಿ ಮತದ ಮಳೆ ಸುರಿಯುತ್ತಿದೆ. ಏಳನೇ ಹಂತದ ಮತದಾನದವರೆಗೆ ಎಷ್ಟು ಮಳೆ ಬರುತ್ತದೆ(ಮೈತ್ರಿ ಪರವಾಗಿ ಮತ) ಎಂಬುದನ್ನು ಅಂದಾಜಿಸುವುದು ಕಷ್ಟ ಎಂದು ಹೇಳಿದರು.