ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿರುವ ಸಮಾಜವಾದಿ ಪಕ್ಷದ ಕಚೇರಿಯಿಂದ ಪಕ್ಷದ ಜಿಲ್ಲಾಧ್ಯಕ್ಷರ ಮನೆಗೆ ತೆರಳುತ್ತಿದ್ದ ವಾಹನಕ್ಕೆ ಹಲವು ಬಾರಿ ಟ್ರಕ್‌ ಡಿಕ್ಕಿ ಹೊಡೆದಿದೆ. ಬಳಿಕ ಕಾರನ್ನು ಸುಮಾರು 500 ಮೀಟರ್‍ವರೆಗೆ ಎಳೆದೊಯ್ದಿದ್ದು, ಕಾರಿನ ಸಮೀಪದಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಇಬ್ಬರು ಸ್ವಲ್ಪದರಲ್ಲೇ ಪಾರಾಗಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರಾಜಸ್ಥಾನ ಖತುಶ್ಯಾಮ್ ದೇವಸ್ಥಾನದಲ್ಲಿ ಕಾಲ್ತುಳಿತ, ಮೂವರು ಭಕ್ತರ ಸಾವು ಹಲವರು ಗಂಭೀರ


ಇದೇ ವೇಳೆ ಸ್ಥಳೀಯರ ಜಾಗರೂಕತೆಯಿಂದ ಎಸ್ಪಿ ಜಿಲ್ಲಾಧ್ಯಕ್ಷರನ್ನು ಸುರಕ್ಷಿತವಾಗಿ ಕಾಪಾಡಲಾಗಿದೆ. ಸ್ಥಳೀಯರೆಲ್ಲಾ ಸೇರಿ ಹರಸಾಹಸಪಟ್ಟು ಟ್ರಕ್ ನಿಲ್ಲಿಸಿ ವಾಹನದಿಂದ ಜಿಲ್ಲಾಧ್ಯಕ್ಷರನ್ನು ರಕ್ಷಣೆ ಮಾಡಿದ್ದಾರೆ. ಸ್ಥಳೀಯರು ಲಾರಿ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಎಸ್ಪಿ ಜಿಲ್ಲಾಧ್ಯಕ್ಷರಿಂದಲೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಘಟನೆಯ ವಿಡಿಯೋ ಕೂಡ ವೈರಲ್ ಆಗಿದೆ.


ಏನಿದು ಘಟನೆ:


ಮೈನ್‌ಪುರಿಯಲ್ಲಿ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ದೇವೇಂದ್ರ ಸಿಂಗ್ ಯಾದವ್ ಅವರು ತಮ್ಮ ವಿಟಾರಾ ಬ್ರಿಜಾ ಕಾರಿನಲ್ಲಿ ಕಚೇರಿಯಿಂದ ಕರ್ಹಾಲ್ ರಸ್ತೆಯಲ್ಲಿರುವ ತಮ್ಮ ನಿವಾಸಕ್ಕೆ ಹೋಗುತ್ತಿದ್ದರು. ನಗರದ ಮಾಧವ್ ಅತಿಥಿ ಗೃಹದ ಮುಂಭಾಗ ತಲುಪುತ್ತಿದ್ದಂತೆಯೇ ಹಿಂದಿನಿಂದ ಬಂದ ಲಾರಿಯೊಂದು ಎಸ್ಪಿ ಜಿಲ್ಲಾಧ್ಯಕ್ಷರ ಕಾರಿಗೆ ಗುದ್ದಿದೆ. ಜಿಲ್ಲಾಧ್ಯಕ್ಷರು ಹಿಂತಿರುಗಿ ನೋಡುವಷ್ಟರಲ್ಲಿ ಟ್ರಕ್ ಚಾಲಕ ಮತ್ತೊಮ್ಮೆ ಅವರಿಗೆ ಡಿಕ್ಕಿ ಹೊಡೆದು ವಾಹನವನ್ನು 500 ಮೀಟರ್ ದೂದವರೆಗೆ ಎಳೆದುಕೊಂಡು ಹೋಗಿದ್ದಾನೆ.  


ಟ್ರಕ್ ಅನ್ನು ನಿಲ್ಲಿಸಲು ಪ್ರಯತ್ನಿಸುತ್ತಿರುವಾಗ, ಬೈಕ್ ಸವಾರರು ಟ್ರಕ್ ಮುಂದೆ ಕಾರನ್ನು ಇಟ್ಟು ವಾಹನವನ್ನು ನಿಲ್ಲಿಸಲು ಪ್ರಯತ್ನಿಸಿದರು, ಆದರೆ ಚಾಲಕನು ಟ್ರಕ್ ಅನ್ನು ಅವರ ಮೇಲೂ ಹತ್ತಿಸಲು ಪ್ರಯತ್ನಿಸಿದ್ದಾನೆ. ಆದರೆ ಅವರರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಇದಾದ ನಂತರ ಸ್ಥಳೀಯರು ಬೆನ್ನಟ್ಟಿ ಲಾರಿಯನ್ನು ತಡೆದು ಜಿಲ್ಲಾಧ್ಯಕ್ಷರನ್ನು ಸುರಕ್ಷಿತವಾಗಿ ಕಾರಿನಿಂದ ಹೊರಕ್ಕೆ ಕರೆತಂದಿದ್ದಾರೆ.


ಇದನ್ನೂ ಓದಿ: IAF Recruitment 2022 : ಭಾರತೀಯ ವಾಯುಪಡೆಯಲ್ಲಿ 152 ಹುದ್ದೆಗಳಿಗೆ ಅರ್ಜಿ : ಇಲ್ಲಿದೆ ಸಂಪೂರ್ಣ ಮಾಹಿತಿ


ಸ್ಥಳದಲ್ಲಿದ್ದ ಜನರು ಲಾರಿ ಚಾಲಕ ಮತ್ತು ನಿರ್ವಾಹಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಜಿಲ್ಲಾಧ್ಯಕ್ಷರು ಇದೊಂದು ಕೊಲೆಯ ಸಂಚು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಿಒ ಸಿಟಿ ವಿಜಯಪಾಲ್ ಸಿಂಗ್ ಮಾತನಾಡಿ, ಎಸ್ಪಿ ಜಿಲ್ಲಾಧ್ಯಕ್ಷರ ಕಾರಿಗೆ ಟ್ರಕ್ ಹಲವು ಬಾರಿ ಡಿಕ್ಕಿ ಹೊಡೆದಿದ್ದು, ಅವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಅವರು ನೀಡಿದ ದೂರುಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು. ಚಾಲಕ ವಿನಯ್ ಯಾದವ್ ಚೌಬಿಯಾ ಇಟಾವಾ ನಿವಾಸಿಯಾಗಿದ್ದಾನೆ ಎಂದು ಹೇಳಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.