ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಸಮಾಜವಾದಿ ಪಕ್ಷ
ಲೋಕಸಭಾ ಚುನಾವಣೆಗಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಶುಕ್ರವಾರದಂದು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ನವದೆಹಲಿ: ಲೋಕಸಭಾ ಚುನಾವಣೆಗಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಶುಕ್ರವಾರದಂದು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಚುನಾವಣೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು "ಈ ಸಮಾಜದ ಪ್ರತಿಯೊಂದು ವಿಭಾಗಕ್ಕೂ ಇದು ಸಲ್ಲಲಿದೆ. ದೇಶದಲ್ಲಿ ಬಡವ ಮತ್ತು ಶ್ರೀಮಂತರ ನಡುವೆ ಭಾರಿ ಅಂತರವಿದೆ ಆದ್ದರಿಂದ ಭಾರತವನ್ನು ಸಮೃದ್ದಗೊಳಿಸುವುದು ನಮ್ಮ ಗುರಿ ಎಂದರು.ಇದೇ ವೇಳೆ ಸಾಮಾಜಿಕ ನ್ಯಾಯದ ಕುರಿತಾಗಿ ಪ್ರಸ್ತಾಪಿಸಿದ ಅವರು ಅಭಿವೃದ್ದಿ ಕೆಲವೇ ಜನರ ಕೈಯಲ್ಲಿ ಸೀಮಿತವಾಗಿದೆ.ಸಾಮಾಜಿಕ ಅಂಕಿ ಅಂಶಗಳನ್ನು ಬಹಿರಂಗಪಡಿಸಬೇಕೆಂದು ಕೇಳಿಕೊಂಡರು.ಅಲ್ಲದೆ ಸಾಮಾಜಿಕ ನ್ಯಾಯವಿಲ್ಲದೆ ಅಭಿವೃದ್ದಿಯಾಗಲು ಸಾಧ್ಯವಿಲ್ಲವೆಂದರು.
ಪ್ರಸ್ತಕ್ತ ಸರ್ಕಾರ ಅಭಿವೃದ್ದಿ ಬಗ್ಗೆ ಹೇಳುತ್ತಿದೆ, ಒಂದು ವೇಳೆ ನಿಜವಾಗಿಯೂ ಅಭಿವೃದ್ದಿ ಆದಲ್ಲಿ ನಿರುದ್ಯೋಗವಿರುತ್ತಿರಲಿಲ್ಲ. ರೈತರ ಸಂಪೂರ್ಣ ಸಾಲ ಮನ್ನಾ ನಿರ್ಧಾರಕ್ಕೆ ಸಮಾಜವಾದಿ ಪಕ್ಷ ಬದ್ದವಾಗಿದೆಎಂದು ಅಖಿಲೇಶ್ ಯಾದವ್ ಹೇಳಿದರು.
ಈ ಬಾರಿ ಉತ್ತರ ಪ್ರದೇಶದಲ್ಲಿ ಹಲವು ವರ್ಷಗಳ ನಂತರ ಮೊದಲ ಬಾರಿಗೆ ಎಸ್ಪಿ ಹಾಗೂ ಬಿಎಸ್ಪಿ ಈ ಬಾರಿ ಮೈತ್ರಿಕೂಟದ ಮೂಲಕ ಲೋಕಸಭಾ ಚುನಾವಣೆಯನ್ನು ಎದುರಿಸುತ್ತವೆ.ಆ ಮೂಲಕ ಈಗ ಬಿಜೆಪಿ ಕೋಟೆಗೆ ಲಗ್ಗೆ ಇಡಲು ತಂತ್ರ ರೂಪಿಸುತ್ತಿದೆ ಎನ್ನಲಾಗಿದೆ.