ನವದೆಹಲಿ : ಟೆಸ್ಲಾ (Tesla Inc) ಮತ್ತು ಸ್ಪೇಸ್ ಎಕ್ಸ್ (SpaceX) ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್ ವಿಶ್ವದ ಸಿರಿವಂತರ ಪಟ್ಟಿಯಲ್ಲಿ (World's Richest Person) ನಂಬರ್ 1 ಸ್ಥಾನಕ್ಕೇರಿದ್ದಾರೆ.  ಮೊದಲ ಸ್ಥಾನದಲ್ಲಿದ್ದಅಮೆಜಾನ್ ಮುಖ್ಯಸ್ಥ ಜೆಫ್ ಬಿಜೋಸ್ (Jeff Bezos) ಈಗ  ನಂಬರ್ 2 ಆಗಿದ್ದಾರೆ.  2020ರ ಜನವರಿಯಲ್ಲಿ ವಿಶ್ವದ ಕುಬೇರರ ಪಟ್ಟಿಯಲ್ಲಿ ಎಲಾನ್ ಮಸ್ಕ್ 35 ನೇ ಸ್ಥಾನದಲ್ಲಿದ್ದರು. ಒಂದು ವರ್ಷದಲ್ಲಿ ಅವರು ನೂರಾರು ಬಿಲಿಯನ್ ಡಾಲರ್ ಸಂಪಾದಿಸಿದ್ದಾರೆ. 


COMMERCIAL BREAK
SCROLL TO CONTINUE READING

ಮೋಡಿ ಮಾಡಿದ ಟೆಸ್ಲಾ ಎಲೆಕ್ಟ್ರಿಕ್ ಕಾರು..!
ಕಳೆದೆರಡು ದಿನಗಳಲ್ಲಿ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಎಲೆಕ್ಟ್ರಿಕ್ ಕಾರು (Electric Car) ಕಂಪನಿಯ ಷೇರುಗಳಲ್ಲಿ ಶೇ. 4.8ರಷ್ಟು  ಏರಿಕೆಯಾಗಿದೆ. ಹಾಗಾಗಿ ಅವರ ಆಸ್ತಿ ಮೌಲ್ಯ 189 ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ. ಬ್ಲೂಂಬರ್ಗ್ ಸಿರಿವಂತರ ಸೂಚ್ಯಂಕದಲ್ಲಿ (Bloomberg Billionaires Index) ಎಲಾನ್ ಮಸ್ಕ್ ಈಗ ನಂ. 1 ಸ್ಥಾನದಲ್ಲಿ ರಾರಾಜಿಸುತಿದ್ದಾರೆ


ಇದನ್ನೂ ಓದಿ : ವಿಶಿಷ್ಠ RuPay debit card ಬಿಡುಗಡೆ ಮಾಡಿದ SBI


ಒಂದೇ ವರ್ಷದಲ್ಲಿ 160 ಬಿಲಿಯನ್ ಡಾಲರ್ ಸಂಪಾದನೆ:
ಕೇವಲ ಒಂದು ವರ್ಷದಲ್ಲಿ ಮಸ್ಕ್ 160 ಬಿಲಿಯನ್ ಡಾಲರ್ ಗೂ ಹೆಚ್ಚು ಸಂಪಾದನೆ ಮಾಡಿದ್ದಾರೆ. ಅವರ ಲಾಭ ರಾಕೆಟ್ (Rocket) ಗತಿಯಲ್ಲಿ ಮೇಲಕ್ಕೇರುತ್ತಿದೆ. ಇಷ್ಟೊಂದು ಕಡಿಮೆ ಅವಧಿಯಲ್ಲಿ ಇಷ್ಟೊಂದು ದೊಡ್ಡ ಲಾಭ ಮಾಡಿರುವ  ಉದ್ಯಮಿ ಯಾರೂ ಇಲ್ಲ ಎಂದೇ ಹೇಳಲಾಗುತ್ತಿದೆ. ಟೆಸ್ಲಾ (Tesla) ಇದು ಎಲೆಕ್ಟ್ರಿಕ್ ಕಾರು ಉತ್ಪಾದನಾ ಕಂಪನಿ. ಕಳೆದ ಒಂದು ವರ್ಷದಲ್ಲಿ ಅದರ ಷೇರು ಮೌಲ್ಯದಲ್ಲಿ  ಶೇ. 746 ರಷ್ಟು ಏರಿಕೆಯಾಗಿದೆ. ಮಸ್ಕ್ ಆದಾಯ ಏರಿಕೆಗೆ ಇದೇ ಮೂಲ ಕಾರಣ.  ವಿಶೇಷವೆಂದರೆ, ಕಳೆದ ಒಂದು ವರ್ಷದಲ್ಲಿ ಟೆಸ್ಲಾ ಸರಿ ಸುಮಾರು 5 ಲಕ್ಷ ಕಾರುಗಳನ್ನು ತಯಾರಿಸಿದೆ. ಅಚ್ಚರಿಯೆಂದರೆ, ಟೆಸ್ಲಾ ಒಂದು ವರ್ಷದಲ್ಲಿ ತಯಾರಿಸುವಷ್ಟು ಕಾರುಗಳನ್ನು ಇತರ ಕಾರು ಕಂಪನಿಗಳು ಒಂದು ತಿಂಗಳಿನಲ್ಲಿ ತಯಾರಿಸುತ್ತವೆ. 


ಒಂದು ವರ್ಷದ ಹಿಂದೆ ಎಲಾನ್ ಮಸ್ಕ್ ಆಸ್ತಿ ಕೇವಲ 27  ಬಿಲಿಯನ್ ಡಾಲರ್ ಆಗಿತ್ತು. ಇದೀಗ 187 ಬಿಲಿಯನ್ ಡಾಲರ್ ಗೆ ಅವರ ಆಸ್ತಿ ಏರಿಕೆಯಾಗಿದೆ. ಅಂದರೆ ಒಂದು ವರ್ಷದ ಅವರ ಸಂಪಾದನೆ 160 ಬಿಲಿಯನ್ ಡಾಲರ್. 


ಇದನ್ನೂ ಓದಿ : Google : ಐಟಿ ಕ್ಷೇತ್ರಕ್ಕೆ ಶಾಕ್ - ಗೂಗಲ್ ನಲ್ಲಿ ಅಸ್ತಿತ್ವಕ್ಕೆ ಬಂತು ಲೇಬರ್ ಯೂನಿಯನ್ – ಶೋಷಣೆಯ ವಿರುದ್ಧ ಸಮರಕ್ಕೆ ತಯಾರಿ.


 ಬಾಹ್ಯಾಕಾಶಕ್ಕೆ ಏಣಿ ಹಾಕುವ ಕನಸುಗಾರ :
ಮಸ್ಕ್  ಸ್ಪೇಸ್ ಎಕ್ಸ್ ಎಂಬ ಕಂಪನಿಯ ಮುಖ್ಯಸ್ಥ.  ಬಾಹ್ಯಾಕಾಶಕ್ಕೆ ಏಣಿ ಹಾಕುವ ಕನಸುಗಾರ ಎಲಾನ್ ಮಸ್ಕ್. ಖಾಸಗೀ ಕಂಪನಿಯಾಗಿರುವ ಸ್ಪೇಸ್ ಎಕ್ಸ್ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡುತ್ತಿದೆ.  ಕಳೆದ ವರ್ಷ ಸ್ಪೇಸ್ ಎಕ್ಸ್  ಫಾಲ್ಕನ್ 9  (spacex falcon 9)ರಾಕೇಟ್ ಗಳು ಯಶಸ್ವಿಯಾಗಿ ನಭಕ್ಕೆ ಚಿಮ್ಮಿದ್ದವು. ನಾಸಾದ ಇಬ್ಬರು ಗಗನಯಾತ್ರಿಗಳಾದ ರಾಬರ್ಟ್ ಬೆಹ್ನ್ಕೆನ್ ಹಾಗೂ ಡೌಗ್ಲಾಸ್ ಹರ್ಲಿ ಅವರನ್ನು ಹೊತ್ತ ಫಾಲ್ಕನ್ 9 ರಾಕೆಟ್, ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ನಿಲ್ದಾಣದಿಂದ ಯಶಸ್ವಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ ಪ್ರಯಾಣ ಬೆಳೆಸಿತ್ತು.  ಸಾಹಸಗಳಿಗೆ ಕೈ ಹಾಕುವುದು ಎಲಾನ್ ಮಸ್ಕ್ ಹುಟ್ಟು ಗುಣ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.