ಯಶವಂತಪುರ - ಹಜರತ್ ನಿಜಾಮುದ್ದೀನ್ ಗೆ ಏಕಮುಖ ವಿಶೇಷ ರೈಲು ಸೇವೆ
Yesvantpur to Nizamuddin Train: ಯಶವಂತಪುರದಿಂದ ಹಜರತ್ ನಿಜಾಮುದ್ದೀನ್ ಗೆ ಏಕಮುಖ ವಿಶೇಷ ರೈಲನ್ನು ಓಡಿಸಲು ರೈಲ್ವೆ ಮಂಡಳಿಯು ಅನುಮೋದಿಸಿದೆ.
ಬೆಂಗಳೂರು: ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಯಶವಂತಪುರದಿಂದ ಹಜರತ್ ನಿಜಾಮುದ್ದೀನ್ ಗೆ ಏಕಮುಖ ವಿಶೇಷ ರೈಲನ್ನು ಓಡಿಸಲು ರೈಲ್ವೆ ಮಂಡಳಿಯು ಅನುಮೋದಿಸಿದೆ.
ರೈಲು ಸಂಖ್ಯೆ 06519 ಯಶವಂತಪುರ - ಹಜರತ್ ನಿಜಾಮುದ್ದೀನ್ ಏಕಮುಖ ವಿಶೇಷ ರೈಲು ಜೂನ್ 23 ರಂದು ಭಾನುವಾರ ರಾತ್ರಿ 23:40 ಘಂಟೆಗೆ ಯಶವಂತಪುರದಿಂದ ಹೊರಟು, ಜೂನ್ 26 ರಂದು ಬುಧವಾರ ಬೆಳಗ್ಗೆ 06:30 ಘಂಟೆಗೆ ತನ್ನ ಗಮ್ಯಸ್ಥಾನ ಹಜರತ್ ನಿಜಾಮುದ್ದೀನ್ ತಲುಪಲಿದೆ.
ಇದನ್ನೂ ಓದಿ: ಮಶೀನ್ ಟೂಲ್ ವಲಯದ ಉತ್ಕರ್ಷಕ್ಕೆ ಒತ್ತು: ರಾಜ್ಯ ಸರ್ಕಾರದ ಮಹತ್ವದ ಸಭೆ
ಈ ವಿಶೇಷ ರೈಲು ತುಮಕೂರು, ಬಾಣಸಂದ್ರ, ಅರಸಿಕೆರೆ, ದಾವಣಗೆರೆ, ಹರಿಹರ, ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಿರಜ್, ಪುಣೆ, ಕೋಪರಗಾಂ, ಮನ್ಮಾಡ್, ಭುಸಾವಲ್, ಇಟಾರ್ಸಿ, ಭೋಪಾಲ್, ಬೀನಾ, ವೀರಾಂಗಣ ಲಕ್ಷ್ಮೀಬಾಯಿ ಝಾನ್ಸಿ ಮತ್ತು ಆಗ್ರಾ ಕ್ಯಾಂಟ್ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ.
ಈ ವಿಶೇಷ ರೈಲು 9 ಸ್ಲೀಪರ್ ಕ್ಲಾಸ್, 11 ಸಾಮಾನ್ಯ 2ನೇ ದರ್ಜೆಮತ್ತು 2 ಎಸ್ಎಲ್ಆರ್ / ಡಿ ಕ್ಲಾಸ್ ಸೇರಿದಂತೆ ಒಟ್ಟು 22 ಬೋಗಿಗಳು ಹೊಂದಿರುತ್ತದೆ.
ಇದನ್ನೂ ಓದಿ: ಭಾರತಕ್ಕೆ ಇಂಧನ ಭದ್ರತೆ ಕಲ್ಪಿಸಲು ಬದ್ಧ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.