ಲೋಕಸಭೆಯಲ್ಲಿ SPG ಭದ್ರತಾ ಮಸೂದೆ ಮಂಡನೆ!
ಹೊಸ ಮಸೂದೆಯಡಿಯಲ್ಲಿ, ಹಾಲಿ ಪ್ರಧಾನಮಂತ್ರಿಗಳ ಕುಟುಂಬವು ಪ್ರಧಾನ ಮಂತ್ರಿಯೊಂದಿಗೆ ಅವರ ಸರ್ಕಾರಿ ನಿವಾಸದಲ್ಲಿದ್ದರೆ ಮಾತ್ರ ಎಸ್‌ಪಿಜಿ ರಕ್ಷಣೆ ಪಡೆಯುತ್ತದೆ.
ನವದೆಹಲಿ: ಕೇಂದ್ರ ಸರ್ಕಾರ ಎಸ್‌ಪಿಜಿ ಭದ್ರತಾ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದೆ. ಈ ಹೊಸ ಮಸೂದೆಯ ಪ್ರಕಾರ, ಮಾಜಿ ಪ್ರಧಾನ ಮಂತ್ರಿಯ ಕುಟುಂಬಕ್ಕೆ ಎಸ್‌ಪಿಜಿ ರಕ್ಷಣೆ ನೀಡಲಾಗುವುದಿಲ್ಲ. ಈ ಪ್ರಕಾರ, ಮಾಜಿ ಪ್ರಧಾನ ಮಂತ್ರಿಗಳ ಕುಟುಂಬ ಸದಸ್ಯರನ್ನು ಉನ್ನತ ಮಟ್ಟದ ವಿಶೇಷ ಸಂರಕ್ಷಣಾ ಗುಂಪು ಕಮಾಂಡೋಗಳು ರಕ್ಷಣೆ ನೀಡುವುದಿಲ್ಲ ಎನ್ನಲಾಗಿದೆ.
ಹೊಸ ಮಸೂದೆಯಡಿಯಲ್ಲಿ, ಹಾಲಿ ಪ್ರಧಾನಮಂತ್ರಿಗಳ ಕುಟುಂಬವು ಪ್ರಧಾನ ಮಂತ್ರಿಯೊಂದಿಗೆ ಅವರ ಸರ್ಕಾರಿ ನಿವಾಸದಲ್ಲಿದ್ದರೆ ಮಾತ್ರ ಎಸ್‌ಪಿಜಿ ರಕ್ಷಣೆ ಪಡೆಯುತ್ತದೆ. ಮಾಜಿ ಪ್ರಧಾನಿ ಮತ್ತು ಅವರ ಕುಟುಂಬಕ್ಕೆ ಐದು ವರ್ಷಗಳ ಕಾಲ ಎಸ್‌ಪಿಜಿ ರಕ್ಷಣೆ ನೀಡಲಾಗುವುದು. ಆದರೆ ಮಾಜಿ ಪ್ರಧಾನ ಮಂತ್ರಿಯೊಂದಿಗೆ ವಾಸಿಸಿದರೆ ಮಾತ್ರ ಮಾಜಿ ಪ್ರಧಾನಿ ಕುಟುಂಬಕ್ಕೆ ಎಸ್‌ಪಿಜಿ ಭದ್ರತೆ ನೀಡಲಾಗುವುದು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಎಸ್‌ಪಿಜಿ ಕವರ್ ರದ್ದುಪಡಿಸಿದ ಎರಡು ವಾರಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ. 1991ರಲ್ಲಿ ಎಲ್‌ಟಿಟಿಇ ಭಯೋತ್ಪಾದಕರು ರಾಜೀವ್ ಗಾಂಧಿಯವರ ಹತ್ಯೆಯ ನಂತರ ಮಾಜಿ ಪ್ರಧಾನ ಮಂತ್ರಿಗಳು ಮತ್ತು ಅವರ ಕುಟುಂಬ ಸದಸ್ಯರನ್ನು ಎಸ್‌ಪಿಜಿ ಕವರ್ ಗೆ ಸೇರಿಸಲಾಯಿತು. ಅದಕ್ಕೂ ಮೊದಲು ಪ್ರಧಾನಿಗೆ ಮಾತ್ರ ಎಸ್ಪಿಜಿ ರಕ್ಷಣೆಯನ್ನು ನೀಡಲಾಗುತ್ತಿತ್ತು.ಈಗ ಅದನ್ನೇ ನೂತನ ಮಸೂದೆಯಲ್ಲಿ ಪುನಃ ಪರಿಚಯಿಸಲ್ಪಟ್ಟಿದೆ ಎನ್ನಲಾಗಿದೆ.
ವಿಶೇಷವೆಂದರೆ, ಕೇಂದ್ರ ಸರ್ಕಾರ ಗಾಂಧಿ ಕುಟುಂಬದ ಎಸ್‌ಪಿಜಿ ಭದ್ರತೆಯನ್ನು ಹಿಂತೆಗೆದುಕೊಂಡಿದೆ, ಆದ್ದರಿಂದ ಇತ್ತೀಚಿನ ಬೆಳವಣಿಗೆಗಳ ದೃಷ್ಟಿಯಿಂದ ಎಸ್‌ಪಿಜಿ ಮಸೂದೆ ಬಹಳ ಮುಖ್ಯವಾಗಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಯ ನಂತರ ಸೋನಿಯಾ ಗಾಂಧಿ, ಅವರ ಪುತ್ರ ರಾಹುಲ್ ಗಾಂಧಿ ಮತ್ತು ಅವರ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಎಸ್‌ಪಿಜಿ ಭದ್ರತೆ ಒದಗಿಸಲಾಗಿತ್ತು.
ಇದಲ್ಲದೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ SPG ಭದ್ರತೆ ನೀಡಲಾಗಿತ್ತು. ಆದರೆ ಭದ್ರತಾ ಪರಿಶೀಲನೆಯ ನಂತರ, ಅವರಿಂದಲೂ ಎಸ್ಪಿಜಿಯ ಭದ್ರತೆಯನ್ನು ಹಿಂತೆಗೆದುಕೊಳ್ಳಲಾಯಿತು. ಎಸ್‌ಪಿಜಿ ಭದ್ರತೆಯನ್ನು ತೆಗೆದುಹಾಕುವುದನ್ನು ಕಾಂಗ್ರೆಸ್ ವಿರೋಧಿಸಿದೆ. ಕಾಂಗ್ರೆಸ್ ಸಂಸತ್ತಿನಲ್ಲಿ ಸಹ ಈ ವಿಷಯವನ್ನು ಪ್ರಸ್ತಾಪಿಸಿತ್ತು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಈಗ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) Z ಪ್ಲಸ್ ಭದ್ರತಾ ರಕ್ಷಣೆಯನ್ನು ನೀಡಿದ್ದು, ಸರ್ಕಾರದ ಆದೇಶದ ಪ್ರಕಾರ ಗಾಂಧಿ ಕುಟುಂಬಕ್ಕೂ ಶೀಘ್ರದಲ್ಲೇ ಅದೇ ದರ್ಜೆಯಡಿಯಲ್ಲಿ ಭದ್ರತಾ ರಕ್ಷಣೆ ನೀಡಲಾಗುವುದು.