ಪುಣೆ-ಕೋಲ್ಕತಾ ಮಾರ್ಗದಲ್ಲಿ ಸ್ಪೈಸ್‌ಜೆಟ್ ವಿಮಾನವು ಮಂಗಳವಾರ ಲ್ಯಾಂಡ್ ಆಗುವ ವೇಳೆ ರನ್‌ವೇ ಸೆಂಟರ್ ಲೈನ್‌ನಿಂದ ಬಲಕ್ಕೆ ಸಾಗಿತು. ಘಟನೆಯಲ್ಲಿ ನಾಲ್ಕು ರನ್‌ವೇ ಎಡ್ಜ್  ದೀಪಗಳು ಹಾನಿಗೊಳಗಾದವು. ಆದಾಗ್ಯೂ, ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ಬೋಯಿಂಗ್ 737-800 ವಿಮಾನ, ಎಸ್‌ಜಿ -275 ವಿಮಾನವು ಲ್ಯಾಂಡಿಂಗ್ ಸಮಯದಲ್ಲಿ ರನ್‌ವೇ ಸೆಂಟರ್ ಲೈನ್‌ನಿಂದ ಬಲಕ್ಕೆ ಸಾಗಿತು. ಭಾರೀ ಮಳೆಯಿಂದಾಗಿ ರನ್‌ವೇ ಒದ್ದೆಯಾಗಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಸ್ಪೈಸ್ ಜೆಟ್ ವಕ್ತಾರರು ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ಎಎನ್ಐ ಉಲ್ಲೇಖಿಸಿದೆ.


ಇದಕ್ಕೂ ಮೊದಲು ಜೈಪುರದಿಂದ ಬರುತ್ತಿದ್ದ ಸ್ಪೈಸ್‌ಜೆಟ್ ವಿಮಾನವು ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇಯಲ್ಲಿ ಓವರ್‌ಶಾಟ್ ಆಗಿ ಅಪಘಾತಕ್ಕೀಡಾಗಿತ್ತು. ಮುಂಬೈನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಎಸ್‌ಜಿ -6237 ಎಂಬ ಬೋಯಿಂಗ್ ವಿಮಾನವೊಂದು ಸೋಮವಾರ ರಾತ್ರಿ 11.51 ರ ಸುಮಾರಿಗೆ ಮುಂಬೈಗೆ ಬಂದಿಳಿದ ವೇಳೆ ಈ ಅಪಘಾತ ಸಂಭವಿಸಿತ್ತು.