ನವದೆಹಲಿ : ಮಾನ್ಸೂನ್ ಆಗಮನದ ಹಿನ್ನೆಲೆಯಲ್ಲಿ ಸ್ಪೈಸ್ ಜೆಟ್ ತನ್ನ ಪ್ರಯಾಣಿಕರಿಗಾಗಿ ಮೆಗಾ ಮಾನ್ಸೂನ್ ಸೆಲ್ ಘೋಷಿಸಿದೆ. ಆಯ್ದ ನಗರಗಳಿಗೆ ಕೇವಲ 999 ರೂ.ಗಳ ರೆಡ್ ಹಾಟ್ ಫೇರ್ ವಾಯುಯಾನಕ್ಕೆ ಸ್ಪೈಸ್ ಜೆಟ್ ಅವಕಾಶ ಕಲ್ಪಿಸಿದೆ. 


COMMERCIAL BREAK
SCROLL TO CONTINUE READING

ಸ್ಪೈಸ್ ಜೆಟ್ ಏರ್ಲೈನ್ಸ್ ಮೆಗಾ ಮಾನ್ಸೂನ್ ಸೇಲ್ ಅಡಿಯಲ್ಲಿ ಜುಲೈ 4 ರಿಂದ ಟಿಕೆಟ್ ಬುಕ್ ಮಾಡಬಹುದಾಗಿದ್ದು, ಜುಲೈ 8ರವರೆಗೆ ಆಫರ್ ಮುಂದುವರೆಯಲಿದೆ. ಈ ಐದು ದಿನಗಳಲ್ಲಿ  ಪ್ರಯಾಣಿಕರು ಅಕ್ಟೋಬರ್ 8ರವರೆಗೆ ಪ್ರಯಾಣಿಸಲು ಟಿಕೆಟ್ ಬುಕ್ ಮಾಡಬಹುದು. 


ಸ್ಪೈಸ್ ಜೆಟ್ ಏರ್'ಲೈನ್ಸ್ ಪ್ರಕಾರ, ಈ ಆಫರ್ ಸಿಮಿತ್ ಸಿತುಗಳಿಗೆ ಮಾತ್ರ ಲಭ್ಯವಿದ್ದು ಮಾಡಲು ಟಿಕೆಟ್ ಬುಕ್ ಮಾಡಿದವರು ಈ ಸೇಲ್'ನ ಪ್ರಯೋಜನ ಪಡೆದುಕೊಳ್ಳಬಹುದು. ಈ ಆಫರ್ ಏಕ ಮುಖ ಪ್ರಯಾಣಕ್ಕೆ(One way) ಮಾತ್ರ ಅನ್ವಯಿಸಲಿದೆ. ದೆಹಲಿ-ಡೆಹ್ರಾಡೂನ್, ಡೆಹ್ರಾಡೂನ್-ದೆಹಲಿ, ದೆಹಲಿ-ಜೈಪುರ, ದೆಹಲಿ-ಚಂಡೀಘಢ, ಚೆನೈ-ಬೆಂಗಳೂರು, ಜಮ್ಮು ಮತ್ತು ಶ್ರೀನಗರ, ಅಗರ್ತಲಾ-ಕೋಲ್ಕತಾ ಹೀಗೆ ಈ ಆಫರ್ ಹತ್ತು ನಗರಗಳ ನಡುವಿನ ವಿಮಾನ ಪ್ರಯಾಣಕ್ಕೆ ಅನ್ವಯಿಸಲಿದೆ. 


ಈ ಆಫರ್ ಜೊತೆ, ಸ್ಪೈಸ್ ಜೆಟ್ 'ಆಡ್ ಆನ್ ಪ್ರಾಡಕ್ಟ್'ಗಳಲ್ಲಿ ಶೇ.20 ರಿಯಾಯಿತಿ ಘೋಷಿಸಿದೆ. ಇದರಲ್ಲಿ ಪ್ರವಾಸಿಗ ಸ್ಪೈಸ್ ಮ್ಯಾಕ್ಸ್ ಆಸನ, ಬಿಸಿ ಆಹಾರ ಮತ್ತು ಆದ್ಯತೆ ಮೇರೆಗೆ ಚೆಕ್ ಇನ್ ... ಇತರ ಸೌಲಭ್ಯಗಳನ್ನು ಪಡೆಯಬಹುದು. ಆದರೆ ಸ್ಪೈಸ್ ಜೆಟ್ ಅಧಿಕೃತ ವೆಬ್ಸೈಟ್, ಆನ್ಲೈನ್ ಟ್ರಾವಲ್ ಪೋರ್ಟಲ್, ಸ್ಪೈಸ್ ಜೆಟ್ ಮೊಬೈಲ್ ಅಪ್ಲಿಕೇಶನ್ ಮತ್ತು ಟ್ರಾವೆಲ್ ಏಜೆಂಟ್'ಗಳಲ್ಲಿ ಟಿಕೆಟ್ ಬುಕ್ ಮಾಡಿದರೆ ಮಾತ್ರ ನೀವು ಈ ಸೇಲ್'ನ ಪ್ರಯೋಜನ ಪಡೆಯಬಹುದು.