ಬಿಜೆಪಿ ತೊರೆದ ಬೆಂಗಾಳಿ ನಟಿ ಸ್ರಬಂತಿ ಚಟರ್ಜಿ
ಜನಪ್ರಿಯ ನಟಿ ಮತ್ತು ರಾಜಕಾರಣಿ ಶ್ರಬಂತಿ ಚಟರ್ಜಿ ಅವರು ಗುರುವಾರದಂದು ಬಿಜೆಪಿಯನ್ನು ತೊರೆಯುವುದಾಗಿ ಘೋಷಿಸಿದರು.
ನವದೆಹಲಿ: ಜನಪ್ರಿಯ ನಟಿ ಮತ್ತು ರಾಜಕಾರಣಿ ಶ್ರಬಂತಿ ಚಟರ್ಜಿ ಅವರು ಗುರುವಾರದಂದು ಬಿಜೆಪಿಯನ್ನು ತೊರೆಯುವುದಾಗಿ ಘೋಷಿಸಿದರು.
ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು ಬಿಜೆಪಿಯೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳಲಾಗುತ್ತಿದೆ, ಬಂಗಾಳದ ವಿಚಾರವಾಗಿ ಪಕ್ಷದ ಉಪಕ್ರಮ ಮತ್ತು ಪ್ರಾಮಾಣಿಕತೆಯ ಕೊರತೆಯೇ ಅವರು ಬಿಜೆಪಿಯನ್ನು ತೊರೆಯಲು ಕಾರಣ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ-ಕನ್ನಡಿಗ ಕೆ.ಎಲ್.ರಾಹುಲ್ ಪಾಕ್ ಗೆ ಅಪಾಯಕಾರಿಯಾಗಲಿದ್ದಾರೆ ಎಂದ ಮ್ಯಾಥ್ಯೂ ಹೇಡನ್
ಮಾರ್ಚ್ 1, 2021 ರಂದು ಪಶ್ಚಿಮ ಬಂಗಾಳದ ಅಸೆಂಬ್ಲಿ ಚುನಾವಣೆಗೆ ಮುಂಚಿತವಾಗಿ ಚಟರ್ಜಿ ಬಿಜೆಪಿಗೆ ಸೇರ್ಪಡೆಗೊಂಡರು. ಅವರ ಸೇರ್ಪಡೆಗೆ ಆಗಿನ ಪಕ್ಷದ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್,ಕೈಲಾಶ್ ವಿಜಯವರ್ಗಿಯಾ ಮತ್ತು ಅಮಿತ್ ಮಾಳವೀಯರಂತಹ ಹಿರಿಯ ಬಿಜೆಪಿ ನಾಯಕರು ಅನುಕೂಲ ಮಾಡಿಕೊಟ್ಟರು.
ICC T20 World Cup 2021: ರೋಹಿತ್ ಶರ್ಮಾ ನಿರ್ಮಿಸಿದ ಈ ವಿಶ್ವದಾಖಲೆ ಏನು ಗೊತ್ತೇ?
ಅವರು ಪಕ್ಷವನ್ನು ಸೇರ್ಪಡೆಯಾಗುವ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಜನರಿಗಾಗಿ ಕೆಲಸ ಮಾಡಲು ಬಯಸುತ್ತೇನೆ. ಸೋನಾರ್ ಬಾಂಗ್ಲಾ ಕುರಿತ ಬಿಜೆಪಿಯ ದೃಷ್ಟಿಯನ್ನು ನಾನು ಮುಂದಕ್ಕೆ ಕೊಂಡೊಯ್ಯುತ್ತೇನೆ ಎಂದು ಹೇಳಿದ್ದರು. ಇದಾದ ನಂತರ ಅವರಿಗೆ ಬೆಹಾಲಾ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಮೂಲಕ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಪಾರ್ಥ ಚಟರ್ಜಿ ವಿರುದ್ಧ ಸ್ಪರ್ಧಿಸಿದ್ದರು.ಆದಾಗ್ಯೂ, ಅವರು ಬೆಹಾಲಾ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಪಾರ್ಥ ಚಟರ್ಜಿ ವಿರುದ್ಧ 50,000 ಕ್ಕೂ ಹೆಚ್ಚು ಮತಗಳಿಂದ ಸೋತರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.