ಅಂತಾರಾಷ್ಟ್ರೀಯ ಜಲಗಡಿ ನಿಯಮವನ್ನು ಉಲ್ಲಂಘಿಸಿದ ಆರೋಪದ ಮೇಲೆ 11 ಭಾರತೀಯ ಮೀನುಗಾರರನ್ನು ಭಾನುವಾರ ಬೆಳಿಗ್ಗೆ ಶ್ರೀಲಂಕಾ ನೌಕಾಪಡೆ ಅಧಿಕಾರಿಗಳು ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ತಮಿಳುನಾಡಿನ ರಾಮೇಶ್ವರಂ ಮೂಲದ ಮೀನುಗಾರರನ್ನು ನೆಡುಂತೇವು ಬಳಿ ಬಂಧಿಸಲಾಗಿದ್ದು, ಕಾರೈನಗರ್ ನೌಕಾಪಡೆ ಶಿಬಿರದಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ಮೀನುಗಾರ ಬಳಿಯಿದ್ದ ಎರಡು ದೋಣಿ, ಜಿಪಿಎಸ್ ಸಾಧನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, 50 ಬಲೆಗಳನ್ನು ಹಾನಿಗೊಳಿಸಿದ್ದಾರೆ ಎನ್ನಲಾಗಿದೆ.


ಈ ಘಟನೆಯಿಂದಾಗಿ ಮೀನು ಹಿಡಿಯಲು ತೆರಳಿದ್ದ ಇತರ 500ಕ್ಕೂ ಅಧಿಕ ಮೀನುಗಾರರು ಹಿಂದಿರುಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.