SSC CGL Tier 1 Result : ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಟೈರ್ 1 2022 ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು SSC ಯ ಅಧಿಕೃತ ವೆಬ್‌ಸೈಟ್ ssc.nic.in ಗೆ ಭೇಟಿ ನೀಡುವ ಮೂಲಕ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು.


COMMERCIAL BREAK
SCROLL TO CONTINUE READING

SSC CGL ನ ಶ್ರೇಣಿ 1 ರ ಪರೀಕ್ಷೆಯನ್ನು ಡಿಸೆಂಬರ್ 1 ರಿಂದ ಡಿಸೆಂಬರ್ 13, 2022 ರವರೆಗೆ ನಡೆಸಲಾಗಿತ್ತು. ಪರೀಕ್ಷೆಯನ್ನು CBT ವಿಧಾನದಲ್ಲಿ ನಡೆಸಲಾಗಿತ್ತು. ಈಗ ಆಯೋಗವು ಬಿಡುಗಡೆ ಮಾಡಿದ ಶ್ರೇಣಿ 1 ಫಲಿತಾಂಶದ ಅಂಕಗಳ ಆಧಾರದ ಮೇಲೆ, ಅಭ್ಯರ್ಥಿಗಳನ್ನು ಶ್ರೇಣಿ 2 ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ. ಸರಳವಾಗಿ ಹೇಳುವುದಾದರೆ, ಶ್ರೇಣಿ 1 ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು SSC CGL ಶ್ರೇಣಿ 2 ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ. 


ಇದನ್ನೂ ಓದಿ :  Video : ಸಂಸತ್ತಿನಲ್ಲಿ ಅವಾಚ್ಯ ಶಬ್ದ ಬಳಿಸಿ ಟೀಕೆಗೆ ಗುರಿಯಾದ ಟಿಎಂಸಿ ಸಂಸದೆ!


Direct Link: SSC CGL 2022 Tier 1 Exam Result


SSC CGL 2022 ಶ್ರೇಣಿ 1 ಪರೀಕ್ಷೆಯ ಫಲಿತಾಂಶವನ್ನು ಈ ಹಂತಗಳ ಮೂಲಕ  ಚೆಕ್ ಮಾಡಿಕೊಳ್ಳಿ :
1. ಅಭ್ಯರ್ಥಿಗಳು ಮೊದಲು ಈ ಅಧಿಕೃತ ವೆಬ್‌ಸೈಟ್ ssc.nic.in ಗೆ ಹೋಗಿ.
2. ಇದರ ನಂತರ ಮುಖಪುಟದಲ್ಲಿ ನೀಡಲಾದ Resultsವಿಭಾಗದ ಮೇಲೆ ಕ್ಲಿಕ್ ಮಾಡಿ.
3. ಈಗ ನಿಮ್ಮ ಮುಂದೆ ಹೊಸ ಪುಟ ತೆರೆದುಕೊಳ್ಳುತ್ತದೆ, ಇಲ್ಲಿ ನೀವು SSC CGL Tier I Result ಲಿಂಕ್ ಅನ್ನು ಕ್ಲಿಕ್ ಮಾಡಿ.
4. ಹೀಗೆ ಮಾಡುವುದರಿಂದ PDF ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ.
5. ಈ PDF ನಲ್ಲಿ ನಿಮ್ಮ ಫಲಿತಾಂಶವನ್ನು ನೀವು ಪರಿಶೀಲಿಸಬಹುದು.


ಇದನ್ನೂ ಓದಿ : Cow hug day : ಕೇಳಿ ಪ್ರೇಮಿಗಳೇ.. ʼವ್ಯಾಲೆಂಟೈನ್ಸ್ ಡೇʼ ಬಿಟ್ಟು ʼಹಸು ಅಪ್ಪುಗೆ ದಿನʼ ಆಚರಿಸಿ..!


SSC CGL Tier ಶ್ರೇಣಿ 2ರ  ಪರೀಕ್ಷೆ ಮಾರ್ಚ್ 2 ರಿಂದ ಮಾರ್ಚ್ 7, 2023 ರವರೆಗೆ ನಡೆಯಲಿದೆ. ಶ್ರೇಣಿ 2ರ  ಪರೀಕ್ಷೆಯ ಪ್ರವೇಶ ಕಾರ್ಡ್‌ಗಳನ್ನು ಆಯೋಗವು ಶೀಘ್ರದಲ್ಲೇ  ಬಿಡುಗಡೆ ಮಾಡಲಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಿಂದ ಇದನ್ನೂ ಡೌನ್‌ಲೋಡ್ ಮಾಡಿಕೊಳ್ಳಬಹುದು.  


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.