ಬೆಂಗಳೂರು : ಶುಕ್ರವಾರ(ಜೂನ್ 10) ರಾಜ್ಯಸಭೆ ಚುನಾವಣೆ ನಡೆಯಲಿದ್ದು, ವಿಧಾನಸೌಧದ 106 ಮತದಾನಕ್ಕೆ ಕೊಠಡಿಯಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.


COMMERCIAL BREAK
SCROLL TO CONTINUE READING

ಕಣದಲ್ಲಿ ಇರುವವರು :


ನಾಳೆ ನಡೆಯಲಿರುವ ರಾಜ್ಯಸಭಾ ಚುನಾವಣೆ ಕಣದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಿಂದ ಆರು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಯ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್,ಲೆಹರ್ ಸಿಂಗ್ ಹಾಗೂ ಕಾಂಗ್ರೆಸ್ ನ ಜೈರಾಂ ರಮೇಶ್ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಅಲಿ ಖಾನ್ ಮತ್ತು ಜೆಡಿಎಸ್ ನಿಂದ ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ.


ಇದನ್ನೂ ಓದಿ : 'ಪ್ರಭುತ್ವ ನಡೆಸುತ್ತಿರುವ ನಿರಂತರ ದಾಳಿಯಿಂದ ದೇಶದ ಪ್ರಜಾಪ್ರಭುತ್ವವೇ ಅಪಾಯದಲ್ಲಿದೆ'-ಸಿದ್ಧರಾಮಯ್ಯ


ನಾಲ್ಕನೇ ಸ್ಥಾನಕ್ಕಾಗಿ ನಡೆಯುವ ಚುನಾವಣೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.ಮೂರು ಪಕ್ಷಗಳಿಗೆ ಮತಗಳ ಕೊರತೆ ಎದುರಾಗಿರುವ ಕಾರಣ ಚುನಾವಣಾ ಕಣದಲ್ಲಿ ರೋಚಕತೆ ಹೆಚ್ಚಾಗಿದೆ. ನಾಲ್ಕನೇ ಸ್ಥಾನಕ್ಕೆ ಸ್ಪರ್ಧೆ ನಡೆಸುತ್ತಿರುವ ಬಿಜೆಪಿ ಅಭ್ಯರ್ಥಿ ಲೆಹರ್ ಸಿಂಗ್, ಜೆಡಿಎಸ್ ಅಭ್ಯರ್ಥಿ ಕುಪ್ಪೇಂದ್ರ ರೆಡ್ಡಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ನಡುವೆ ಜಿದ್ದಾಜಿದ್ದಿಯ ಪೈಪೋಟಿ ಏರ್ಪಟ್ಟಿದೆ. ಮತಗಳ ಲೆಕ್ಕಾಚಾರ ನೋಡಿದರೆ ಬಿಜೆಪಿ ಲೆಹರ್ ಸಿಂಗ್ ಗೆ ಗೆಲುವಿನ ಸಾಧ್ಯತೆ ಹೆಚ್ಚಿದ್ದರೆ,ಜೆಡಿಎಸ್ ನ ಕುಪ್ಪೇಂದ್ರ ರೆಡ್ಡಿ ಗೆಲುವು ಅಸಾಧ್ಯ ಎಂದು  ಎನ್ನುವಂತಿಲ್ಲ.ಇನ್ನು ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಕೂಡಾ ಗೆಲ್ಲುವ ಪ್ರಯತ್ನ ನಡೆಸುತ್ತಿದ್ದಾರೆ. 


ಮತದಾನಕ್ಕೆ ಸಿದ್ಧತೆ ಹೇಗಿದೆ: 


ವಿಧಾನಸೌಧದ 106ನೇ ಕೊಠಡಿಯನ್ನು ಮತದಾನ ಕೇಂದ್ರವನ್ನಾಗಿ ಮಾಡಲಾಗಿದ್ದು,ಅಲ್ಲಿಯೇ ಮತ ಎಣಿಕೆಯೂ ನಡೆಯಲಿದೆ.ಈ ನಿಟ್ಟಿನಲ್ಲಿ ವಿಧಾನ ಸಭೆ ಸಚುವಾಲಯದ ಸಿಬ್ಬಂದಿಗಳು,ಚುನಾವಣೆ  ಅಧಿಕಾರಗಳು ಸಿದ್ಧತೆಯನ್ನು ಕೈಗೊಳ್ಳುತ್ತಿದ್ದಾರೆ.


 ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾಯಿಸುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗಯೂ ಸೂಚನಾಫಲಕಗಳನ್ನು ಕೊಠಡಿ ಒಳಗೂ ಹೊರಗೂ ಅಳವಡಿಸಲಾಗಿದೆ. 


ಎರಡು ವೋಟಿಂಗ್ ಕಂಪಾರ್ಟ್ ಮೆಂಟ್, ಮತಪೆಟ್ಟಿಗೆ,ಮೂರು ಪಕ್ಷಗಳ ಅಧಿಕೃತ ಏಜೆಂಟರಿಗೆ ಪ್ರತ್ಯೇಕ ಕೌಂಟರ್ ಗಳನ್ನು ಸಿದ್ಧ ಮಾಡಲಾಗಿದೆ.ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.ಸಂಜೆ 5ರಿಂದ 6 ಗಂಟೆವರೆಗೆ ಮತ ಎಣಿಕೆ ಕಾರ್ಯ ನಡೆಯಲಿದೆ. 


ಮತಗಳ ಲೆಕ್ಕಾಚಾರ ಹೀಗಿದೆ :


ಅಭ್ಯರ್ಥಿಯ ಗೆಲುವಿಗೆ 45 ಮತಗಳ ಅಗತ್ಯವಿದೆ. ಇದನ್ನು  ಮೊದಲ ಪ್ರಾಶಸ್ತ್ಯದ ಮತಗಳಾಗಿವೆ.
ಅಂತೆಯೇ ಎರಡನೆ ಪ್ರಾಶಸ್ತ್ಯದ ಮತಗಳನ್ನು ಶಾಸಕರು ಚಲಾಯಿಸಬಹುದು.


ಬಿಜೆಪಿ ಶಾಸಕರ ಸಂಖ್ಯೆ : 122


ಕಾಂಗ್ರೆಸ್ ಶಾಸಕರ ಸಂಖ್ಯೆ: 70 


ಜೆಡಿಎಸ್ ಶಾಸಕರ ಸಂಖ್ಯೆ: 32


ಬಿಜೆಪಿ‌ಯ ಮೊದಲೆರಡು ಅಭ್ಯರ್ಥಿಗಳಾದ ನಿರ್ಮಲಾ ಸೀತಾರಾಮನ್ ಹಾಗೂ ನಟ ಜಗ್ಗೇಶ್ ಗೆ ತಲಾ 45 ಮೊದಲ ಪ್ರಾಶಸ್ತ್ಯದ ಮತಗಳು ಲಭ್ಯವಾಗಲಿದೆ. ಅದೇ ರೀತಿ ಕಾಂಗ್ರೆಸ್ ನ ಜೈರಾಂ ರಮೇಶ್ ಗೆ ಮೊದಲ ಪ್ರಾಶಸ್ತ್ಯದ 45 ಮತಗಳು ಸಿಗಲಿದ್ದು,ಈ ಮೂವರು  ಅಡೆತಡೆಗಳಿಲ್ಲದೆ ಆಯ್ಕೆಯಾಗಲಿದ್ದಾರೆ.  ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿಯ ಇಬ್ಬರು ಹಾಗೂ ಕಾಂಗ್ರೆಸ್ ನ ಒಬ್ಬ ಅಭ್ಯರ್ಥಿ ನಿರಾಯಾಸವಾಗಿ ಗೆಲುವು ಸಾಧಿಸಲಿದ್ದಾರೆ.ಆದರೆ ನಾಲ್ಕನೇ ಸ್ಥಾನಕ್ಕೆ ಯಾರು ಆಯ್ಕೆಯಾಗುತ್ತಾರೆ ಎಂಬುವುದು ಸದ್ಯದ ಕುತೂಹಲ.


ಆದರೆ ಇಲ್ಲಿ ಪೈಪೋಟಿ ಇರುವುದು ನಾಲ್ಕನೇ ಸ್ಥಾನಕ್ಕಾಗಿ.ಜೆಡಿಎಸ್ ಅಭ್ಯರ್ಥಿ ಕುಪ್ಪೇಂದ್ರ ರೆಡ್ಡಿಗೆ ಸಂಖ್ಯಾಬಲದ ಕೊರತೆ ಇದೆ.ಅವರಿಗೆ ಮೊದಲ ಪ್ರಾಶಸ್ತ್ಯದ ಮತ ಕೇವಲ 32 ಇದೆ.ಜೆಡಿಎಸ್ ಗೆ ಎರಡನೇ ಪ್ರಾಶಸ್ತ್ಯದ ಮತ ಅವಕಾಶ ಇರುವುದಿಲ್ಲ ಹೀಗಾಗಿ ಬಿಜೆಪಿಯ ಅಭ್ಯರ್ಥಿ ಮುಂದೆ ಕುಪೇಂದ್ರ ರೆಡ್ಡಿ ಗೆಲ್ಲುವುದು ಸುಲಭವಲ್ಲ. ಅಂತೆಯೇ ಬಿಜೆಪಿಯ ಲೆಹರ್ ಸಿಂಗ್ ಗೆ ಮೊದಲನೆ ಪ್ರಾಶಸ್ತ್ಯದ 32 ಮತಗಳು ಹಾಗೂ ಎರಡನೆ ಪ್ರಾಶಸ್ತ್ಯದ 90 ಮತಗಳು ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಗೆ ವರವಾಗಲಿದೆ.


ಇದನ್ನೂ ಓದಿ : Hijab Row : ಹಿಜಾಬ್ ಧರಿಸಿ ಅಮಾನತಾಗಿದ್ದ 6 ವಿದ್ಯಾರ್ಥಿನಿಯರು ಇಂದು ಮರಳಿ ಕಾಲೇಜಿಗೆ!


ಮತಗಳ ಲೆಕ್ಕಾಚಾರ :


ನಿರ್ಮಲಾ ಸೀತಾರಾಮನ್ : 45
ಜಗ್ಗೇಶ್ : 45
ಲೆಹರ್ ಸಿಂಗ್ : 32 (ಮೊದಲ ಪ್ರಾಶಸ್ತ್ಯದ ಮತಗಳು)


ಮೊದಲನೆ ಮತ್ತು ಎರಡನೆ ಅಭ್ಯರ್ಥಿಗಳಿಗೆ ಚಲಾವಣೆ ಮಾಡಿದ ಶಾಸಕರು ಲೆಹರ್ ಸಿಂಗ್ ಎರಡನೆ ಪ್ರಾಶಸ್ತ್ಯದ ಮತಗಳನ್ನು ಅಂದಾಜು 90 ( ಮತಗಳು) ಅನಾಯಾಸವಾಗಿ ಬೀಳಲಿವೆ. ಉಳಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಂದ ಬಿಜೆಪಿ ಅಭ್ಯರ್ಥಿ ಲೆಹರ್ ಸಿಂಗ್ ಅಡ್ಡಮತದಾನ ನಡೆಯುವ ಸಾಧ್ಯತೆಯೂ ಇದೆ. ಹೀಗಾದ್ರೆ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆಲುವು ಸುಲಭವಲ್ಲ. ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಆಲಿ ಖಾನ್ ಗೆ 25 ಮೊದಲ ಪ್ರಾಶಸ್ತ್ಯದ ಮತಗಳು ಬೀಳಲಿವೆ. ಜೊತೆಗೆ ಎರಡನೆ ಪ್ರಾಶಸ್ತ್ಯದ ಮತಗಳು 45 ಮತಗಳು ಕೈ ಹಿಡಿಯಲಿವೆ ಎನ್ನಲಾಗಿದೆ.ಇವೆಲ್ಲದರ ನಡುವೆ ಜೆಡಿಎಸ್ ಪಕ್ಷದ 6 ಮತಗಳು ಅಡ್ಡಮತದಾನ ಮೂಲಕ ಕೈಗೆ ಒಲಿಯಲಿವೆ ಎನ್ನಲಾಗಿದೆ. ಒಂದು ವೇಳೆ ಜೆಡಿಎಸ್ ಪಕ್ಷದ ಮತಗಳು ಕಾಂಗ್ರೆಸ್   ಪಕ್ಷದ ಅಭ್ಯರ್ಥಿಗೆ ವರ್ಗಾವಣೆ ಆದರೆ ಬಿಜೆಪಿ ಅಭ್ಯರ್ಥಿ ಮತ್ತು  ಜೆಡಿಎಸ್ ಅಭ್ಯರ್ಥಿಗೆ ಗೆಲುವಿಗ ಅಡ್ಡಿಯುಂಟಾಗಲಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ