Maha Kumbh Stampede: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಮಾಘ ಮಾಸದ ಅಮಾವಾಸ್ಯೆ/ ಮೌನಿ ಅಮಾವಾಸ್ಯೆಯ ಇಂದು (ಜನವರಿ 29 ಬುಧವಾರ)   ಸಂಗಮ್‌ನಲ್ಲಿ 'ಪುಣ್ಯ ಸ್ನಾನ'ದ ವೇಳೆ ಭಾರೀ ನೂಕುನುಗ್ಗಲು ಉಂಟಾಗಿ ಈ ದುರ್ಘಟನೆಯಲ್ಲಿ ಹಲವಾರು ಗಾಯಗೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಭಾರತದ ಮೂರು ಪವಿತ್ರ ನದಿಗಳು ಒಟ್ಟಿಗೆ ಸೇರುವ ಈ ಸಂಗಮದಲ್ಲಿ ಮೌನಿ ಅಮಾವಾಸ್ಯೆಯಂದು  ಪುಣ್ಯ ಸ್ನಾನಕ್ಕಾಗಿ ಕೋಟ್ಯಾಂತರ ಭಕ್ತಾಧಿಗಳು ಕೂಡ ನೆರೆದಿದ್ದಾರೆ. ಈ ಸಂದರ್ಭದಲ್ಲಿ 'ಸಂಗಮ್'ನಿಂದ ಸುಮಾರು ಒಂದು ಕಿಲೋಮೀಟರ್ ವರೆಗೂ ಜನಸಂದಣಿ ಮಧ್ಯೆ ಬ್ಯಾರಿಕೇಡ್‌ಗಳು ಮುರಿದು ಕೆಲವು ಮಹಿಳೆಯರು ಪ್ರಜ್ಞಾಹೀನರಾಗಿ ಬಿದ್ದಿದ್ದು ಕಾಲ್ತುಳಿತ ಉಂಟಾಗಿದೆ. 


 ಮಹಾ ಕುಂಭ ಮೇಳದಲ್ಲಿ ಮೌನಿ ಅಮಾವಾಸ್ಯೆಯ ಅಮೃತ ಸ್ನಾನವನ್ನು ರದ್ದುಗೊಳಿಸಲಾಗಿದೆ ಎಂದು ಅಖಿಲ ಭಾರತೀಯ ಅಖಾರ ಪರಿಷತ್ ಅಧ್ಯಕ್ಷ ಮಹಂತ್ ರವೀಂದ್ರ ಪುರಿ ಸುದ್ದಿ ಸಂಸ್ಥೆ ಎಎನ್‌ಐಗೆ ಮಾಹಿತಿ ನೀಡಿದ್ದಾರೆ. 


ಯಾರಾದರೂ ಕುಂಭಮೇಳಕ್ಕೆ ಹೋಗುವವರಿದ್ದೀರಾ? ಈ ಅಂಶಗಳನ್ನು ಗಮನದಲ್ಲಿಡಿ!


ಪುಣ್ಯ ಸ್ನಾನ ಮಾಡುವುದಕ್ಕೆ ಬಹಳ ಮಹತ್ವವಿದೆ. ಈ ವರ್ಷ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ 2025 ನಡೆಯುತ್ತಿರುವುದರಿಂದ ಇಲ್ಲಿನ 'ಅಮೃತ್ ಸ್ನಾನ'ದಲ್ಲಿ ಮಿಂದೇಳಲು ಸುಮಾರು 10ಕೋಟಿ ಭಕ್ತರು ನೆರೆದಿದ್ದಾರೆ. 


ಇದನ್ನೂ ಓದಿ- Maha Kumbh: ಪ್ರಯಾಗರಾಜ್‌ನಲ್ಲಿ ಗೌತಮ್ ಅದಾನಿ, ತ್ರಿವೇಣಿ ಸಂಗಮದಲ್ಲಿ ಪ್ರಾರ್ಥನೆ, ಇಸ್ಕಾನ್ ಭಂಡಾರದಲ್ಲಿ ಪ್ರಸಾದ ವಿತರಣೆ..!


ಕುಂಭಮೇಳಸ ಸಂಪ್ರದಾಯಗಳ ಪ್ರಕಾರ, ಸನ್ಯಾರಿ, ಬೈರಾಗಿ, ಉದಾಸೀನ್ ಎಂಬ ಮೂರು ಪಂಗಡಗಳಿಗೆ ಸೇರಿದ ಅಖಾರಾಗಲು ಸಂಗಮ ಘಾಟ್‌ಗೆ ಮೆರವಣಿಗೆಯಲ್ಲಿ ತೆರಳಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.