ನವದೆಹಲಿ: ಐಐಟಿ-ಬಾಂಬೆ ನಡೆಸಿದ ಅಧ್ಯಯನವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ದೇಶದ ಹಲವಾರು ಬ್ಯಾಂಕುಗಳು ಕೆಲವು ಸೇವೆಗಳಿಗೆ ಹೆಚ್ಚಿನ ಶುಲ್ಕ ವಿಧಿಸುತ್ತಿರುವ ಮಾಹಿತಿ ಬಹಿರಂಗವಾಗಿದೆ. ಜೀರೋ ಬ್ಯಾಲೆನ್ಸ್ ಅಥವಾ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ ಖಾತೆಗಳಿಗ (ಬಿಎಸ್‌ಬಿಡಿಎ) ಹೊಂದಿರುವವರಿಗೆ ಹಣ ಚಾರ್ಜ್ ಮಾಡಲಾಗುತ್ತಿದೆ ಎಂದು ಹೇಳಲಾಗಿತ್ತಿದೆ.  ಅಧ್ಯಯನದ ಪ್ರಕಾರ, ದೇಶದ ಅತಿದೊಡ್ಡ ಸಾರ್ವಜನಿಕ ಸಾಲ ನೀಡುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಬಿಎಸ್‌ಬಿಡಿಎ ಖಾತೆದಾರರು ನಾಲ್ಕು ಬಾರಿಗಿಂತ ಹೆಚ್ಚು ಬಾರಿ ಡಿಜಿಟಲ್ ಹಣ ವರ್ಗಾವಣೆ ಮಾಡಿದರೆ ಪ್ರತಿ ಡೆಬಿಟ್ ವಹಿವಾಟಿಗೆ 17.70 ರೂ.ಗಳ ಶುಲ್ಕ ವಿಧಿಸುತ್ತಿದೆ ಎಂದು ಬಹಿರಂಗವಾಗಿದೆ.


COMMERCIAL BREAK
SCROLL TO CONTINUE READING

2015-20ರ ಅವಧಿಯಲ್ಲಿ ಎಸ್‌ಬಿಐ(State Bank of India) ಸೇವಾ ಶುಲ್ಕ ವಿಧಿಸುವ ಮೂಲಕ 300 ಕೋಟಿ ಆದಾಯಗಳಿಸಿದೆ  ಬಿಎಸ್‌ಬಿಡಿ ಖಾತೆಗಳನ್ನು ಹೊಂದಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ರೂ. 3.9 ಕೋಟಿ. ಇದೇ ಅವಧಿಯಲ್ಲಿ 9.9 ಕೋಟಿ ರೂ.ಗಳ ಸಂಗ್ರಹದೊಂದಿಗೆ ಎರಡನೇ ಸ್ಥಾನದಲ್ಲಿದೆ ಪಂಜಾಬ್ ನ್ಯಾಷನಲ್ ಬ್ಯಾಂಕ್. 


ಇದನ್ನೂ ಓದಿ : Operation All Out: ಸಿದ್ಧವಾಗಿದೆ ಟಾಪ್ -50 ನಕ್ಸಲ್ ಕಮಾಂಡರ್‌ಗಳ ಪಟ್ಟಿ


"ಕೆಲವು ಬ್ಯಾಂಕುಗಳು ಬಿಎಸ್‌ಬಿಡಿಎಗಳ ಮೇಲಿನ ಆರ್‌ಬಿಐ(Reserve Bank of India) ನಿಯಮಗಳಲ್ಲಿ ವ್ಯವಸ್ಥಿತ ನಿಯಮ  ಉಲ್ಲಂಘನೆ ಮಾಡಲಾಗಿದೆ, ಮುಖ್ಯವಾಗಿ ಎಸ್‌ಬಿಐ ಗರಿಷ್ಠ ಸಂಖ್ಯೆಯ ಬಿಎಸ್‌ಬಿಡಿಎಗಳನ್ನು ಆಯೋಜಿಸುತ್ತದೆ, ಪ್ರತಿ ಡೆಬಿಟ್ ವಹಿವಾಟಿಗೆ (ಡಿಜಿಟಲ್ ವಿಧಾನಗಳ ಮೂಲಕವೂ) ತಿಂಗಳಿಗೆ ನಾಲ್ಕು ಬಾರಿ ವಹಿವಾಟು ಮಾಡಿದರೆ 17.70 ರೂ. ಸೇವಾ ಶುಲ್ಕ ವಿಧಿಸುತ್ತಿದೆ.  2015-20ರ ಅವಧಿಯಲ್ಲಿ ಎಸ್‌ಬಿಐನ ಸುಮಾರು 12 ಕೋಟಿ ಬಿಎಸ್‌ಬಿಡಿಎ ಹೊಂದಿರುವವರಿಂದ 300 ಕೋಟಿ ರೂ.ಗಳಷ್ಟು ಆದಾಯ ಸಂಗ್ರಹವಾಗಿದೆ, ಅದರಲ್ಲಿ 2018-19ರ ಅವಧಿಯಲ್ಲಿ ಕೇವಲ 72 ಕೋಟಿ ರೂ.  2019-20  ರಲ್ಲಿ 158 ಕೋಟಿ ರೂ. ”ಎಂದು ಐಐಟಿ ಬಾಂಬೆ ಪ್ರಾಧ್ಯಾಪಕ ಆಶಿಶ್ ದಾಸ್ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ. 


ಇದನ್ನೂ ಓದಿ : COVID-19 ಏರಿಕೆ: ಉತ್ತರ ಪ್ರದೇಶದಲ್ಲಿ ಏಪ್ರಿಲ್ 30 ರವರೆಗೆ ಶಾಲೆಗಳು ಬಂದ್


ಸೆಪ್ಟೆಂಬರ್ 2013 ರಲ್ಲಿ ಬಿಡುಗಡೆಯಾದ ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ ಬಿಎಸ್‌ಬಿಡಿಎಗೆ ಶುಲ್ಕ ವಿಧಿಸುವ ಹಾಗಿಲ್ಲ. ನಿಯಮದ ಪ್ರಕಾರ ಈ ಖಾತೆದಾರರಿಗೆ(SBI Account Holders) ಒಂದು ತಿಂಗಳಲ್ಲಿ 'ನಾಲ್ಕು ವ್ಯವಹರಿಸಲು ಅನುಮತಿ ನೀಡಲಾಗಿದೆ', ಆದರೆ ಶುಲ್ಕ ವಿಧಿಸುವಂತೆ ನಿಯದಲ್ಲಿ ಇಲ್ಲ ಎಂದು ಹೇಳಲಾಗುತ್ತಿದೆ. 


ಇದನ್ನೂ ಓದಿ : Vodafone- Idea ರೀಚಾರ್ಜ್ ಯೋಜನೆ, ಕೇವಲ 2.76 ರೂ.ಗೆ ಸಿಗುತ್ತಿದೆ 1GB ಡೇಟಾ


"ಬಿಎಸ್ಬಿಡಿಎಯ ವೈಶಿಷ್ಟ್ಯಗಳ ಬಗ್ಗೆ ಹೇಳುವದಾದರೆ, ಸಾರ್ವಜನಿಕರ ಅವಶ್ಯಕತೆಗಳನ್ನು ಕಡ್ಡಾಯ ಉಚಿತ ಬ್ಯಾಂಕಿಂಗ್ ಸೇವೆಗಳ(Free Banking Services) ಜೊತೆಗೆ (ತಿಂಗಳಿಗೆ ನಾಲ್ಕು ವಹಿವಾಟ ಒಳಗೊಂಡಂತೆ), ಉಳಿತಾಯ ಖಾತೆ ಆಗಿರುವ ಬಿಎಸ್ಬಿಡಿಎ ಆಗಿರುವವರೆಗೆ, ಬ್ಯಾಂಕುಗಳು ಯಾವುದೇ ಶುಲ್ಕವಿಲ್ಲಾ ವಿಧಿಸುವುದಿಲ್ಲ   ಎಂದು ಸ್ಪಷ್ಟಪಡಿಸಿದೆ. ಮೌಲ್ಯವರ್ಧಿತ ಬ್ಯಾಂಕಿಂಗ್ ಸೇವೆಗಳಿಗಾಗಿ ಬ್ಯಾಂಕ್ ತಮ್ಮ ವಿವೇಚನೆಯಿಂದ ಶುಲ್ಕ ವಿಧಿಸಬಹುದು"ಎಂದು ಹೇಳಲಾಗಿದೆ.


ಇದನ್ನೂ ಓದಿ : 7th Pay Commission: ಸರ್ಕಾರಿ ನೌಕರರ ವೇತನ, ಪಿಂಚಣಿಯಲ್ಲೂ ಹೆಚ್ಚಳ,


ಆರ್‌ಬಿಐ ವಿಥ್ ಡ್ರಾಲ್ ಪ್ರಕಾರ, ತಿಂಗಳಿಗೆ ನಾಲ್ಕು ಬಾರಿ ಮೀರಿದರೆ ಅದನ್ನ ಮೌಲ್ಯವರ್ಧಿತ ಸೇವೆ ಎಂದು ಅಧ್ಯಯನ ಹೇಳುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.