ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ (ಎಸ್‌ಬಿಐ) ಸ್ಥಿರ ಠೇವಣಿಗಳ ಕೆಲವು ಆಯ್ದ ಮೆಚುರಿಟಿ ಅವಧಿಗಳಿಗೆ ಮೇಲಿನ ಬಡ್ಡಿ ದರವನ್ನು ನವೆಂಬರ್ 28 ರಿಂದ ಜಾರಿಗೆ ಬರುವಂತೆ ಏರಿಕೆ ಮಾಡಿದೆ. 


COMMERCIAL BREAK
SCROLL TO CONTINUE READING

ಪರಿಷ್ಕೃತ ಬಡ್ಡಿ ದರಗಳು 1 ಕೋಟಿ ರೂ.ಗಿಂತಲೂ ಕಡಿಮೆ ಮೊತ್ತದ ಸ್ಥಿರ ಠೇವಣಿಗೆ ಮಾತ್ರ ಅನ್ವಯಿಸುತ್ತವೆ.


ಒಂದು ಕೋಟಿ ರೂಪಾಯಿ ಒಳಗಿನ ಮೊತ್ತದ ಮೇಲಿನ ಸ್ಥಿರ ಠೇವಣಿಗಳ ಮೇಲೆ ನೀಡುವ ಅವಧಿವಾರು ಬಡ್ಡಿದರ ಕೆಳಗಿನಂತಿದೆ


ವಯಸ್ಕರಿಗೆ ಬಡ್ಡಿದರ:


  • 1 ರಿಂದ 2 ವರ್ಷದ ಅವಧಿ ಬಡ್ಡಿದರ ಶೇ. 6.70 ರಿಂದ 6.80ಕ್ಕೆ ಏರಿಕೆ 

  • 2 ರಿಂದ 3 ವರ್ಷದ ಅವಧಿ ಬಡ್ಡಿದರ ಶೇ. 6.75 ರಿಂದ 6.80ಕ್ಕೆ ಏರಿಕೆ 

  • 3 ರಿಂದ 5 ವರ್ಷದೊಳಗಿನ ಅವಧಿ ಬಡ್ಡಿದರ ಶೇ. 6.80 ರಿಂದ 6.80ಕ್ಕೆ ಏರಿಕೆ 

  • 5 ರಿಂದ 10 ವರ್ಷದೊಳಗಿನ ಅವಧಿ ಬಡ್ಡಿದರ ಶೇ. 6.85 ರಿಂದ 6.85ಕ್ಕೆ ಏರಿಕೆ


ಹಿರಿಯ ನಾಗರಿಕರಿಗೆ ಬಡ್ಡಿದರ: 


  • 1 ರಿಂದ 2 ವರ್ಷದ ಅವಧಿ ಬಡ್ಡಿದರ ಶೇ.7.20 ರಿಂದ 7.30 ಏರಿಕೆ 

  • 2 ರಿಂದ 3 ವರ್ಷದ ಅವಧಿಗೆ ಶೇ. 7.25 ರಿಂದ 7.30 ಏರಿಕೆ 

  • 3 ರಿಂದ 5 ವರ್ಷದ ಅವಧಿಗೆ ಶೇ.7.30 ರಿಂದ 7.30 ಏರಿಕೆ 

  • 5 ರಿಂದ 10 ವರ್ಷದ ಅವಧಿಗೆ ಶೇ.7.35 ರಿಂದ 7.35ಕ್ಕೆ ಏರಿಕೆಯಾಗಿದೆ.



Chart Courtesy: sbi.co.in


ಪ್ರಸ್ತಾಪಿತ ದರಗಳು ಹೊಸ ಠೇವಣಿಗಳಿಗೆ ಮತ್ತು ನವೀಕರಣಗೊಳ್ಳುವ ಠೇವಣಿಗಳಿಗೆ ಅನ್ವಯವಾಗುತ್ತವೆ ಎಂದು ಎಸ್‌ಬಿಐ ತಿಳಿಸಿದೆ.