ನವದೆಹಲಿ: ಸುಪ್ರೀಂಕೋರ್ಟ್ ಇಂದಿನ ಐತಿಹಾಸಿಕ ತೀರ್ಪಿನಲ್ಲಿ 102 ನೇ ಸಂವಿಧಾನ ತಿದ್ದುಪಡಿಯು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು (ಎಸ್‌ಇಬಿಸಿ) ಗುರುತಿಸುವ ರಾಜ್ಯಗಳ ಅಧಿಕಾರವನ್ನು ರದ್ದುಗೊಳಿಸಿದೆ ಎಂದು ತನ್ನ 3:2 ರ ಬಹುಮತದ ತೀರ್ಪಿನಲ್ಲಿ ಹೇಳಿದೆ.


COMMERCIAL BREAK
SCROLL TO CONTINUE READING

ಸಂವಿಧಾನಕ್ಕೆ ವಿಧಿ 338 ಬಿ ಮತ್ತು 342 ಎ ಅನ್ನು ಪರಿಚಯಿಸಿದ ನಂತರ ಎಸ್‌ಇಬಿಸಿಗಳ ಸೇರ್ಪಡೆ ಅಥವಾ ಹೊರಗಿಡುವಿಕೆ (ಅಥವಾ ಪಟ್ಟಿಗಳ ಮಾರ್ಪಾಡು) ಗೆ ಸಂಬಂಧಿಸಿದ ಅಧಿಕಾರ ಮೊದಲನೆಯದಾಗಿ ರಾಷ್ಟ್ರಪತಿಗೆ ಇರುತ್ತದೆ. ತದನಂತರ ಆರಂಭದಲ್ಲಿ ಪ್ರಕಟವಾದ ಪಟ್ಟಿಗಳ ತಿದ್ದುಪಡಿ ಅಥವಾ ಹೊರಗಿಡುವ ಅಧಿಕಾರ ಸಂಸತ್ತಿಗೆ ಇರಲಿದೆ" ಎಂದು ಸುಪ್ರೀಂಕೋರ್ಟ್ ನ ಬಹುಮತದ ತೀರ್ಪು ಹೇಳಿದೆ.


ಇದನ್ನೂ ಓದಿ: Supreme Court On Quota - ಎಷ್ಟು ತಲೆಮಾರಿನವರೆಗೆ ಜಾರಿಯಲ್ಲಿರಲಿದೆ ಕೋಟಾ?: ಸುಪ್ರೀಂ ಪ್ರಶ್ನೆ


ರಾಜ್ಯಗಳು ತಮ್ಮ ಅಸ್ತಿತ್ವದಲ್ಲಿರುವ ಯಾಂತ್ರಿಕ, ಅಥವಾ ಶಾಸನಬದ್ಧ ಆಯೋಗಗಳ ಮೂಲಕ, ವಿಧಿ 342ಎ (1) ಅಡಿಯಲ್ಲಿ ಪ್ರಕಟಿತವಾಗಿರುವ ಸಮುದಾಯಗಳ ಸೇರ್ಪಡೆ, ಹೊರಗಿಡುವಿಕೆ ಅಥವಾ ಜಾತಿ ಅಥವಾ ಸಮುದಾಯಗಳ ತಿದ್ದುಪಡಿ ಮಾಡುವಂತಹ ವಿಚಾರಗಳಿಗೆ ಸಂಬಂಧಿಸಿದಂತೆ ವಿಧಿ 338 ಬಿ ರ ಅಡಿಯಲ್ಲಿ ಆಯೋಗಕ್ಕೆ ರಾಜ್ಯವು  ಸಲಹೆಗಳನ್ನು ಮಾತ್ರ ನೀಡಬಹುದು ಎಂದು ತೀರ್ಪು ಹೇಳಿದೆ.


ಸುಪ್ರೀಂಕೋರ್ಟ್ ನ ಸಂವಿಧಾನ ಪೀಠವು 'ಡಾ. ಜೈಶ್ರೀ ಲಕ್ಷ್ಮಣರಾವ್ ಪಾಟೀಲ್ v/s ಮುಖ್ಯಮಂತ್ರಿ ಮತ್ತು ಇತರರು' ಈ ಪ್ರಕರಣದಲ್ಲಿ ಮರಾಠಾ ಮೀಸಲಾತಿ (Maratha Quota)  ಮತ್ತು 102 ನೇ ಸಂವಿಧಾನ ತಿದ್ದುಪಡಿಯ ಸಿಂಧುತ್ವದ ಕುರಿತಾದ ತೀರ್ಪಿನ ವೇಳೆ ಸುಪ್ರೀಂಕೋರ್ಟ್ ಈ ಘೋಷಣೆಯನ್ನು ಮಾಡಿದೆ.ಸಂವಿಧಾನದ (102 ನೇ ತಿದ್ದುಪಡಿ) ಕಾಯ್ದೆ, 2018 ರ ಸಾಂವಿಧಾನಿಕ ಸಿಂಧುತ್ವವನ್ನು ನ್ಯಾಯಪೀಠ ಸರ್ವಾನುಮತದಿಂದ ಎತ್ತಿಹಿಡಿದಿದೆ, ಆದರೆ ಇದು ಎಸ್‌ಬಿಸಿಗಳನ್ನು ಗುರುತಿಸುವ ರಾಜ್ಯಗಳ ಅಧಿಕಾರದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆ ವಿಚಾರದಲ್ಲಿ ಸುಪ್ರೀಂಕೋರ್ಟ್ ವಿಭಿನ್ನ ನಿಲುವು ತಾಳಿದೆ.


ನ್ಯಾಯಮೂರ್ತಿಗಳಾದ ಎಸ್. ರವೀಂದ್ರ ಭಟ್, ಎಲ್. ನಾಗೇಶ್ವರ ರಾವ್ ಮತ್ತು ಹೇಮಂತ್ ಗುಪ್ತಾ  ಬಹುಮತದ ತೀರ್ಪಿನ ಪರವಾಗಿ ಮತ ಹಾಕಿದ್ದಾರೆ. ಆ ಮೂಲಕ ಈಗ ರಾಜ್ಯಗಳು ಇಲ್ಲಿಯವರೆಗೆ ಬಳಸಿದ ಎಸ್‌ಬಿಸಿಗಳನ್ನು ಗುರುತಿಸುವ ಅಧಿಕಾರವು ಈಗ ರಾಷ್ಟ್ರಪತಿಗಳ ಕೈಯಲ್ಲಿ ಇರಲಿದೆ, ಮತ್ತು ಅದರ ತಿದ್ದುಪಡಿ ಅಧಿಕಾರ ಸಂಸತಿನ ಬಳಿ ಇರುತ್ತದೆ.ವಿಧಿ 342 ಎ ಯಾವುದೇ ರೀತಿಯಲ್ಲಿ ಸಂವಿಧಾನದ ಮೂಲ ರಚನೆ (Basic Structure) ಯನ್ನು ಉಲ್ಲಂಘಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.


ಇದನ್ನೂ ಓದಿ: ಏನಿದು ಮರಾಠಾ ಮೀಸಲಾತಿ ಕಾಯ್ದೆ ? ಇದನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದ್ದೇಕೆ?


'ಸಂವಿಧಾನದ 342 ಎ ವಿಧಿ ಅಡಿಯಲ್ಲಿ ಯಾವುದೇ ಹಿಂದುಳಿದ ವರ್ಗದ ನಾಗರಿಕರಿಗೆ ಸಂಬಂಧಿಸಿದಂತೆ ಶಾಸನ ಮಾಡಲು ಅಥವಾ ವರ್ಗೀಕರಿಸುವ ನಿಟ್ಟಿನಲ್ಲಿ ರಾಜ್ಯಗಳ ಅಧಿಕಾರವನ್ನು ನಿರಾಕರಿಸುವುದು ಒಕ್ಕೂಟ ರಾಜಕೀಯದ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ಅದು ಭಾರತದ ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುವುದಿಲ್ಲ ಎಂದು 3:2 ರ ಬಹುಮತದ ತೀರ್ಪು ಹೇಳಿದೆ.


ಸಂವಿಧಾನ (102 ನೇ ತಿದ್ದುಪಡಿ) ಕಾಯ್ದೆ, 2018, ವಿಧಿ 338 ಬಿ ಅನ್ನು ಪರಿಚಯಿಸಿತು, ಇದು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಎಂದು ಕರೆಯಲ್ಪಡುವ ಆಯೋಗವನ್ನು ಒದಗಿಸುತ್ತದೆ. ಇದಲ್ಲದೆ, ವಿಧಿ 342 ಎ ಪ್ರಕಾರ, ರಾಷ್ಟ್ರಪತಿಗಳು ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದಂತೆ, ಮತ್ತು ಅದು ರಾಜ್ಯವಾಗಿದ್ದರೆ, ಅದರ ರಾಜ್ಯಪಾಲರೊಂದಿಗೆ ಸಮಾಲೋಚಿಸಿದ ನಂತರ, ಸಾರ್ವಜನಿಕ ಅಧಿಸೂಚನೆಯ ಮೂಲಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ವರ್ಗಗಳೆಂದು ನಿರ್ದಿಷ್ಟಪಡಿಸಲಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.