ಏಕತಾ ಮೂರ್ತಿ ಸರ್ದಾರ್ ಪಟೇಲ್ ರಿಗೆ ಸಲ್ಲಿಸುವ ನಿಜವಾದ ಗೌರವ-ಪ್ರಧಾನಿ ಮೋದಿ
49ನೇ ಮಾಸಿಕ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಏಕಾತಾ ಮೂರ್ತಿ ಸರ್ದಾರ್ ಪಟೇಲ್ ರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ತಿಳಿಸಿದರು.
ನವದೆಹಲಿ: 49ನೇ ಮಾಸಿಕ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಏಕಾತಾ ಮೂರ್ತಿ ಸರ್ದಾರ್ ಪಟೇಲ್ ರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ತಿಳಿಸಿದರು.
ಭಾರತದ ಮೊದಲ ಗೃಹಮಂತ್ರಿ ಹಾಗೂ ಉಕ್ಕಿನ ಮನುಷ್ಯರೆಂದೇ ಖ್ಯಾತರಾಗಿದ್ದ ಸರ್ದಾರ್ ಪಟೇಲ್ ಅವರು ಸ್ವಾತಂತ್ರದ ನಂತರ ದೇಶದ ಎಲ್ಲ ಸಂಸ್ಥಾನಗಳ ಒಗ್ಗೂಡುವಿಕೆಯಲ್ಲಿನ ಪಾತ್ರದ ಬಗ್ಗೆ ಪ್ರಧಾನಿ ಮೋದಿ ಸ್ಮರಿಸಿದರು.ಇದೇ ಸಂದರ್ಭದಲ್ಲಿ ಅಕ್ಟೋಬರ್ 31 ರಂದು ಅವರ ಜನ್ಮದಿನಾಚರಣೆ ಇರುವುದರಿಂದ ಯುವಕರೆಲ್ಲರು ಸಹಿತ ರನ್ ಫಾರ್ ಯುನಿಟಿಯಲ್ಲಿ ಭಾಗವಹಿಸಬೇಕೆಂದು ಕೇಳಿಕೊಂಡರು.
ಅಕ್ಟೋಬರ್ 31 ರಂದು ಸರ್ದಾರ್ ಪಟೇಲ್ ರ ಜನ್ಮದಿನ ಪ್ರತಿ ವರ್ಷವೂ ನಮ್ಮ ದೇಶದ ಯುವಕರು 'ರನ್ ಫಾರ್ ಯೂನಿಟಿಗಾಗಿ' ಸಿದ್ದವಾಗುತ್ತಾರೆ.ಈ ಬಾರಿ ದೊಡ್ಡ ಸಂಖ್ಯೆಯಲ್ಲಿ ರನ್ ಫಾರ್ ಯೂನಿಟಿಯಲ್ಲಿ ಪಾಲ್ಗೊಳ್ಳಲು ನಾನು ಪ್ರತಿಯೊಬ್ಬರಿಗೂ ಮನವಿ ಮಾಡುತ್ತೇನೆ '' ಎಂದು ಮನ್ ಕಿ ಬಾತ್ ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿದರು.
ಇದೇ ಸಂದರ್ಭದಲ್ಲಿ ಸರ್ದಾರ್ ಪಟೇಲ್ ರನ್ನು ಮಹಾನ್ ದಾರ್ಶನಿಕ ಎಂದು ಪ್ರಧಾನಿ ಕರೆದರು.ಅಮೆರಿಕ ಸ್ಟ್ಯಾಚ್ಯು ಆಫ್ ಲಿಬಿರ್ಟಿಗಿಂತಲೂ ಎರಡು ಪಟ್ಟು ಎತ್ತರವನ್ನು ಹೊಂದಿದೆ.ಸರ್ದಾರ್‌ರಂತೆ ಅವರ ಪ್ರತಿಮೆ ಕೂಡ ಭಾರತದ ಹೆಮ್ಮೆಯಾಗಲಿದೆ ಎಂದು ಮೋದಿ ತಿಳಿಸಿದರು.