ನವದೆಹಲಿ: ದೇಶಾದ್ಯಂತ ಹರಡಿರುವ ಕೊರೊನಾ ವೈರಸ್ ಮಹಾಮಾರಿಯ ಭೀತಿಯ ನಡುವೆ ಸೋಮವಾರದ ದಿನ ಷೇರು ಮಾರುಕಟ್ಟೆಯ ಪಾಲಿಗೆ ಒಂದು ಭೀಕರ ಕನಸಾಗಿ ಅಪ್ಪಳಿಸಿದೆ. ಈ ವರ್ಷದ ಅತ್ಯಂತ ಕೆಳಮಟ್ಟದ ಕುಸಿತ ಇದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮಾರುಕಟ್ಟೆಯಲ್ಲಿ ಮುಂದುವರೆದ ಮಾರಾಟ ಪ್ರಕ್ರಿಯೆ ಹಾಗೂ ಭೀತಿಯ ವಾತಾವರಣದ ನಡುವೆ ಷೇರು ಸೂಚ್ಯಂಕ ಕೆಂಪು ನಿಶಾನೆಯಲ್ಲಿ ವ್ಯವಹಾರ ನಡೆಸುತ್ತಿದೆ. ಬೆಳಗ್ಗೆ 11.40ರ ಸುಮಾರಿಗೆ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ನ 30 ಷೇರುಗಳ ಮೇಲೆ ಆಧಾರಿತ ಪ್ರಮುಖ ಸಂವೇದಿ ಸೂಚ್ಯಂಕ SENSEX ಸುಮಾರು 3517 ಅಂಕಗಳ ಕುಸಿತ ಕಂಡು 26,398 ಅಂಕಗಳ ಮೇಲೆ ತನ್ನ ದಿನದ ವಹಿವಾಟು ಮುಂದುವರೆಸಿದೆ. ಇದೇ ರೀತಿ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ನ  50 ಷೇರುಗಳ ಮೇಲೆ ಆಧಾರಿತ ಪ್ರಮುಖ್ಸ ಸಂವೇದಿ ಸೂಚ್ಯಂಕ NIFTY ಕೂಡ  1012 ಅಂಕಗಳ ಕುಸಿತದೊಂದಿಗೆ 7,732 ಅಂಕಗಳ ಮೇಲೆ ತನ್ನ ದಿನದ ವಹಿವಾಟು ಮುಂದುವರೆಸಿದೆ. ಆದರೆ, SENSEX 3000 ಅಂಕಗಳ ಕುಸಿತ ಕಂಡ ಹಿನ್ನೆಲೆ ಲೋವರ್ ಸರ್ಕಿಟ್ ಜಾರಿಗೊಳಿಸಲಾಗಿದೆ. ಆದಾಗ್ಯೂ ಕೂಡ ಮಾರುಕಟ್ಟೆಯಲ್ಲಿ ಆರ್ಥಿಕ ಹಿನ್ನಡೆಯ ವಾತಾವರಣ ಮುಂದುವರೆದಿದೆ.


COMMERCIAL BREAK
SCROLL TO CONTINUE READING

ಮಾರುಕಟ್ಟೆಯ ತಜ್ಞರು ಹೇಳುವ ಪ್ರಕಾರ ಮುಂಬೈ ಸೇರಿದಂತೆ ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿನ ಲಾಕ್ ಡೌನ್ ಸ್ಥಿತಿ ಹಾಗೂ ದೆಹಲಿ-NCR ಗಳಲ್ಲಿಯೂ ಕೂಡ ಬಂದ್ ಘೋಷಣೆಯ ಬಳಿಕ ಮಾರುಕಟ್ಟೆಯಲ್ಲಿ ಭೀತಿ ಕಾಣಿಸಿಕೊಳ್ಳಲಾರಂಭಿಸಿದ್ದು, ಇದೆ ಕಾರಣದಿಂದ SENSEX ಹಾಗೂ NIFTY ಎರಡರಲ್ಲಿಯೂ ಕೂಡ ಮಾರಾಟ ಪ್ರಕ್ರಿಯೆ ವೇಗ ಪಡೆದುಕೊಂಡಿದೆ.


ಮಾರ್ಚ್ 13ನೇ ತಾರೀಖಿಗೂ ಕೂಡ SENSEX 3000 ಅಂಕಗಳ ಕುಸಿತ ದಾಖಲಿಸಿತ್ತು
ಮಾರುಕಟ್ಟೆಯಲ್ಲಿ ಇಂದಿನ ಕುಸಿತದ ಈ ಮೊದಲೂ ಕೂಡ ಮಾರ್ಚ್ 13ರಂದು ಷೇರು ಮಾರುಕಟ್ಟೆ ಸುಮಾರು 3000 ಅಂಕಗಳಿಂದ ಕುಸಿದಿತ್ತು. ವಿದೇಶಿ ಮಾರುಕಟ್ಟೆಯಲ್ಲಿ ಕಂಡುಬಂದ ನಿರಾಶಾದಾಯಕ ಸಂಕೇತ ಹಾಗೂ ಮಾರಾಟ ಪ್ರಕ್ರಿಯೆ ಹಿನ್ನೆಲೆ SENSEX ಆರಂಭಿಕ ವಹಿವಾಟಿನಲ್ಲಿಯೇ ಸುಮಾರು 3000 ಅಂಕಗಳ ಕುಸಿತ ಕಂಡು 29,687 ಅಂಕಗಳಿಗೆ ತಲುಪಿತ್ತು. NIFTY ಕೂಡ 989 ಅಂಕಗಳ ಕುಸಿತ ಕಂಡು 9,059 ಅಂಕಗಳಿಂದ ತನ್ನ ವಹಿವಾಟು ಆರಂಭಿಸಿತ್ತು. ಅಂದೂ ಕೂಡ ಪರಿಸ್ಥಿತಿಯನ್ನು ಅವಲೋಕಿಸಿ ಲೋವರ್ ಸರ್ಕಿಟ್ ಅಳವಡಿಸಾಲಾಗಿತ್ತು.