ನವದೆಹಲಿ: ಗುರುವಾರದಂದು ಮುಂಬಯಿ ಶೇರುಪೇಟೆ ಹಾಗೂ ರಾಷ್ಟ್ರೀಯ ಶೇರು ಸೂಚ್ಯಂಕ ನಿಫ್ಟಿ ಭಾರಿ ಕುಸಿತವನ್ನು ಕಂಡಿದೆ.ಆ ಮೂಲಕ ಕೇವಲ ಐದು ನಿಮಿಷದೊಳಗೆ ಸುಮಾರು 4 ಲಕ್ಷ ಕೋಟಿ ಹಣವನ್ನು ಶೇರು ಹೂಡಿಕೆದಾರರು ಕಳೆದುಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಮುಂಬಯಿನ ಬಿಎಸ್‌ಇ ಸೆನೆಕ್ಸ್ 1029 ಅಂಕಗಳ ಕುಸಿತದಿಂದಾಗಿ ಈಗ  33,732ಕ್ಕೆ ಇಳಿದಿದೆ. ಇನ್ನೊಂದೆಡೆ  307 ಅಂಕ ಕಳೆದುಕೊಂಡಿರುವ ನಿಫ್ಟಿ 10,154 ಅಂಕಗಳಿಗೆ ನಿಂತಿದೆ.


ಏಷ್ಯಾ ಶೇರು ಮಾರುಕಟ್ಟೆಯಲ್ಲಿಯೂ ಕೂಡ ಕುಸಿತ ಕಂಡಿದೆ. ಅದರಲ್ಲಿ  ತೈವಾನ್ ಸೂಚ್ಯಂಕ 5.21 ಶೇಕಡಾ ರಷ್ಟು  ಕುಸಿದಿದೆ. ಜಪಾನ್ ನಿನ  ನಿಕ್ಕಿ (3.7%), ಕೊರಿಯಾದ ಕೊಸ್ಪಿ (ಶೇ. 2.9) ಮತ್ತು ಶಾಂಘೈ ಕಾಂಪೋಸಿಟ್ (2.4%). ರಷ್ಟು ಸೂಚಂಕ್ಯದ ಕುಸಿತ ಅನುಭವಿಸಿದೆ.


ಇನ್ನೊಂದೆಡೆಗೆ ಡಾಲರ್ ಎದುರು ರೂಪಾಯಿ  ಮೌಲ್ಯವೂ ಕೂಡ ನಿರಂತರ ಕುಸಿತ ಅನುಭವಿಸುತ್ತದೆ ಅದರಲ್ಲಿ ಪ್ರತಿ ಡಾಲರ್ ಗೆ 74.45 ಗೆ ತಲುಪಿದೆ.