13 ವಿದ್ಯಾರ್ಥಿಗಳ ಸಾವು: ಪ್ರತಿಭಟನಾಕಾರರಿಗೆ `ನಾಟಕ ನಿಲ್ಲಿಸಿ` ಎಂದ ಯೋಗಿ ಆದಿತ್ಯನಾಥ
ಗೊರಖಪುರ್ : ಉತ್ತರಪ್ರದೇಶದ ಕುಶಿನಗರದ ರೇಲ್ವೆ ಕ್ರಾಸಿಂಗ್ ಬಳಿ ಶಾಲಾವಾಹನಕ್ಕೆ ಟ್ರೈನ್ ಡಿಕ್ಕಿ ಹೊಡೆದು 13 ವಿಧ್ಯಾರ್ಥಿಗಳು ಮೃತಪಟ್ಟಿದ್ದಾರೆ.
ಇದೆ ವೇಳೆ ಇದನ್ನು ಖಂಡಿಸಿ ಮುಖ್ಯಮಂತ್ರಿಗಳ ಎದುರು ಪ್ರತಿಭಟನೆ ಮಾಡುತ್ತಿದ್ದಕ್ಕೆ ಪ್ರತಿಭಟನಾಕಾರರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ನಾಟಕ ನಿಲ್ಲಿಸಿ, ಎಂದು ಹೇಳಿದ್ದಾರೆ. ಡಿವೈನ್ ಪಬ್ಲಿಕ್ ಸ್ಕೂಲ್ನ ಹಳದಿ ಶಾಲಾ ವಾಹನವು ಸುಮಾರು 25 ವಿದ್ಯಾರ್ಥಿಗಳಿದ್ದ ಗುರುವಾರ ಬೆಳಿಗ್ಗೆ ರೈಲ್ವೇ ಕ್ರಾಸಿಂಗ್ ಬಳಿ ಅಪಘಾತ ಸಂಭವಿಸಿ 13 ವಿದ್ಯಾರ್ಥಿಗಳು ಮೃತಪಟ್ಟಿದ್ದರು.
ಈ ಅಪಘಾತವಾದ ಸ್ಥಳವು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರ ಲೋಕಸಭಾ ಕ್ಷೇತ್ರವಾಗಿದ್ದ ಗೊರಖಪುರ್ ಕುಶಿನಗರದಿಂದ 50 ಕಿ.ಮೀ. ದೂರದಲ್ಲಿದೆ. ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಅವರು ಲೋಕಸಭಾ ಕ್ಷೇತ್ರವನ್ನು ತೊರೆದಿದ್ದರು. ಆದರೆ ಈ ಬಾರಿಯ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ಇಲ್ಲಿ ಗೆಲುವು ಸಾಧಿಸಿತ್ತು .