ಅದು ಜುಲೈ 1999 ಭಾರತೀಯ ಸೈನ್ಯ  ಪಾಕಿಸ್ತಾನವನ್ನು ಕಾರ್ಗಿಲ್ ಕದನದಲ್ಲಿ ಸೆದೆಬಡಿದು ವಿಜಯಯೋತ್ಸವನ್ನು ಆಚರಿಸಿತ್ತು. ಆ ಸಂದರ್ಭದಲ್ಲಿ ದೇಶಾದ್ಯಂತ ಒಂದು ಘೋಷಣೆ ಸಾಕಷ್ಟು ಹೆಸರು ಗಳಿಸಿತ್ತು ಅದ್ಯಾವುದೆಂದರೆ 'ಯೇ ದಿಲ್ ಮಾಂಗೆ ಮೊರ್' 


COMMERCIAL BREAK
SCROLL TO CONTINUE READING

ಹೌದು, ಈ ಜಾಹಿರಾತು ಪೆಪ್ಸಿ ಕೋಕಾ ಕೋಲಾದಂತಹ ತಂಪು ಪಾನೀಯ ಕಂಪನಿಗಳು ಇದನ್ನು ಜನಪ್ರೀಯಗೊಳಿಸಿದ್ದವು. ಆದರೆ ಈಗ ನಾವು ಹೇಳ ಹೊರಟಿದ್ದು ಈ ಪಾನೀಯಗಳ ಮೂಲಕ ಜನಪ್ರೀಯವಾದದರ ಕುರಿತಾಗಿ ಅಲ್ಲ. ಬದಲಾಗಿ ಈ ಘೋಷಣೆಯನ್ನು ಯುದ್ದ ರಂಗದಲ್ಲಿ  ಜನಪ್ರಿಯಗೊಳಿಸಿದ ವ್ಯಕ್ತಿಯ ಕುರಿತು.


ಭಾರತ ಮತ್ತು ಪಾಕ್ ನಡುವೆ ನಡೆಯುತ್ತಿದ್ದ ಕಾರ್ಗಿಲ್ ಕದನದಲ್ಲಿ ಜಮ್ಮು ಕಾಶ್ಮೀರ್ ರೈಪಲ್ಸ್ ನ 13 ನೆ ಘಟಕ ಯುದ್ದದಲ್ಲಿ  ಗೆದ್ದ  ನಂತರ ಸುಮಾರು 17000 ಅಡಿ ಎತ್ತರದಲ್ಲಿದ್ದ  ವಿಕ್ರಂ ಬಾಟ್ರಾ ಎನ್ನುವ ಸೈನಿಕ ಹಲವು ಇಕ್ಕೆಲಗಳನ್ನು ದಾಟುತ್ತಿರಬೇಕಾದರೆ ಕಮಾಂಡರ್ ಗೆ 'ಯೇ ದಿಲ್ ಮಾಂಗೆ ಮೊರ್' ಎಂದು  ಹೇಳಿದ. 


ಆ ರಾತ್ರಿ ಕದನ ನಡೆಯುತ್ತಿರಬೇಕಾದರೆ ಕನಿಷ್ಟ ಐವರು ವೈರಿ ಸೈನಿಕರನ್ನು ವಿಕ್ರಂ ಬಾಟ್ರಾ ಸೇದೆಬಡಿದು ಕೊನೆಯುಸಿರೆಳೆದಿದ್ದನು. ಮುಂದೆ ಭಾರತ ಸರ್ಕಾರ ಅವನಿಗೆ  ಮರಣೋತ್ತರ ಪರಮವೀರ ಚಕ್ರ ಪ್ರಶಸ್ತಿ ನೀಡಿ ಅವನಿಗೆ ಗೌರವಿಸಿತು. ಅಂದಿನಿಂದ ಇಂದಿನವರೆಗೂ ಯೇ ದಿಲ್ ಮಾಂಗೆ ಮೊರ್ ಎನ್ನುವುದು ವಿಕ್ರಂ ಬಾಟ್ರಾ ನ ಹೆಸರಿಗೆ ತಳುಕು ಹಾಕಿಕೊಂಡಿದೆ ಎಂದರೆ ಅದು ತಪ್ಪಾಗಲಾರದು.