ಈ ಜಾಣ ಕತ್ತೆಯ ಕಥೆ ಕೇಳಿ ನೀವು ನಿಬ್ಬೇರಗಾಗುವಿರಿ
ಸಾಮಾನ್ಯವಾಗಿ ಕತ್ತೆಗೆ ಬುದ್ಧಿ ಇಲ್ಲದ ಪ್ರಾಣಿ ಎಂದು ಹೇಳಲಾಗುತ್ತದೆ. ಆದರೆ, ಇಂದು ನಾವು ನಿಮ್ಮ ಈ ಅನಿಸಿಕೆಯನ್ನು ದೂರಗೊಳಿಸುತ್ತಿದ್ದೇವೆ. ಯಾಕೆಂದರೆ, ಇಂದು ನಾವು ನಿಮಗೆ ಒಂದು ಜಾಣ ಕತ್ತೆಯ ಕಥೆ ಹೇಳಲು ಹೊರಟಿದ್ದೇವೆ.
ಪಟಿಯಾಲಾ: ಸಾಮಾನ್ಯವಾಗಿ ಬುದ್ಧಿ ಇಲ್ಲದ ವ್ಯಕ್ತಿಗಳನ್ನು ಕತ್ತೆಗೆ ಹೋಲಿಸಲಾಗುತ್ತದೆ. ಆದರೆ, ಇಂದು ನಾವು ನಿಮ್ಮ ಈ ಅನಿಸಿಕೆಯನ್ನು ದೂರಗೊಳಿಸಲು ಹೊರಟಿದ್ದೇವೆ. ಏಕೆಂದರೆ, ಇಂದು ನಾವು ನಿಮಗೆ ಒಂದು ಜಾಣ ಕತ್ತೆಯ ಕಥೆಯನ್ನು ಹೇಳಲು ಹೊರಟಿದ್ದೇವೆ. ಈ ಕತ್ತೆ ಜನರ ಮುಖವನ್ನು ನೋಡಿ ಅವರನ್ನು ಗುರುತು ಪತ್ತೆಹಚ್ಚುತ್ತದೆ. ನೀವು ಎಷ್ಟೇ ಜನಸಂದಣಿಯಲ್ಲಿದ್ದರೂ ಕೂಡ ಈ ಕತ್ತೆ ನಿಮ್ಮನ್ನು ಗುರುತು ಹಿಡಿಯಬಲ್ಲದು.
ಪಟಿಯಾಲಾದಲ್ಲಿ ಒಂದು ಸರ್ಕಸ್ ಬಂದಿದೆ. ಇದರಲ್ಲಿ ಪಾನ್ ಲಾಲ್ ಹೆಸರಿನ ಕತ್ತೆ ವೀಕ್ಷಕರಿಗೆ ಭಾರಿ ಮನರಂಜನೆಯನ್ನು ನೀಡುತ್ತಿದೆ. ಸರ್ಕಸ್ ನ ಜನ ಸಂದಣಿಯಲ್ಲಿ ನೀವು ಎಲ್ಲೇ ಇದ್ದರೂ ಕೂಡ ಈ ಕತ್ತೆ ನಿಮ್ಮನ್ನು ಗುರುತು ಹಿಡಿಯಬಲ್ಲದು. ಸರ್ಕಸ್ ನಲ್ಲಿ ನಡೆಸಲಾಗುವ 8 ರಿಂದ 10 ಘಟನೆಗಳನ್ನು ಕೇಳಿ ನೀವು ದಂಗಾಗುವಿರಿ.
ಈ ಸರ್ಕಸ್ ವಿಕ್ಷೀಸಲು ಬಂದವರಲ್ಲಿ ಇಂದು ಯಾರು ಸ್ನಾನ ಮಾಡಿ ಬಂದಿದ್ದಾರೆ ಎಂದು ಟ್ರೈನರ್ ಈ ಕಟ್ಟೆಗೆ ಪ್ರಶ್ನಿಸಿದಾಗ. ಕತ್ತೆ ಮೆಲ್ಲಗೆ ಸಾಗುತ್ತ ಹೋಗಿ ಓರ್ವ ಮಹಿಳೆಯ ಪಕ್ಕದಲ್ಲಿ ನಿಂತು ಸಂಕೇತ ನೀಡುತ್ತದೆ. ಬಳಿಕ ಸರ್ಕಸ್ ನ ಟ್ರೈನರ್ ಕತ್ತೆಯ ಕಣ್ಣಿಗೆ ಪಟ್ಟಿ ಕಟ್ಟಿ, ನೆರೆದ ಜನರಲ್ಲಿ ನಾಲ್ವರ ಮೊಬೈಲ್ ಪಡೆದು ಬಳಿಕ ಈ ಮೊಬೈಲ್ ಫೋನ್ ಗಳ ಮಾಲೀಕರು ಯಾರು ಎಂದು ಪ್ರಶ್ನಿಸುತ್ತಾನೆ. ಇದನ್ನು ಕೇಳಿದ ಕತ್ತೆ ಮೆಲ್ಲಗೆ ನಡೆಯುತ್ತಾ ಹೋಗಿ ಪ್ರತಿ ಮೊಬೈಲ್ ಮಾಲೀಕರ ಪಕ್ಕಕ್ಕೆ ನಿಲ್ಲುತ್ತದೆ.
ಝೀ ನ್ಯೂಸ್ ನಿಂದ ಯಾರು ಬಂದಿದ್ದಾರೆ ಎಂದು ಟ್ರೈನರ್ ಕತ್ತೆಗೆ ವಿಚಾರಿಸಿದಾಗ ಅದು ನಮ್ಮ ಝೀ ನ್ಯೂಸ್ ನ ಪ್ರತಿನಿಧಿಯ ಪಕ್ಕಕ್ಕೆ ಬಂದು ನಿಂತಿದೆ. ಬಳಿಕ ಇಂದು ಯಾರು ತಮ್ಮ ಕಣ್ಣಿಗೆ ಕಾಡಿಗೆ ಧರಿಸಿ ಬಂದಿದ್ದಾರೆ ಎಂದು ಟ್ರೈನರ್ ವಿಚಾರಿಸಿದಾಗ ಕತ್ತೆ ಕಣ್ಣಿಗೆ ಕಾಡಿಗೆ ಧರಿಸಿರುವ ಮಹಿಳೆಯ ಪಕ್ಕಕ್ಕೆ ಹೋಗಿ ನಿಂತಿದೆ. ಈ ರೀತಿಯ ಹಲವು ಪ್ರಶ್ನೆಗಳಿಗೆ ಕತ್ತೆ ಉತ್ತರ ನೀಡುತ್ತಲೇ ಇದ್ದು, ಇದನ್ನು ನೋಡಿದ ವೀಕ್ಷಕರು ಒಂದು ಕ್ಷಣ ನಿಬ್ಬೇರಗಾಗುತ್ತಿದ್ದಾರೆ.