ವಿಮಾನದಲ್ಲೇ `ಫ್ಯಾಸಿಸ್ಟ್ ಬಿಜೆಪಿ ಸರ್ಕಾರ` ಎಂದು ಧಿಕ್ಕಾರ ಕೂಗಿದ ವಿದ್ಯಾರ್ಥಿನಿ!
ಟ್ಯುಟಿಕ್ಯೂರಿನ್ ವಿಮಾನ ನಿಲ್ದಾಣದಲ್ಲಿ ಲೋಯಿಸ್ ಸೋಫಿಯಾ ಎನ್ನುವ ಸಂಶೋಧನಾ ವಿದ್ಯಾರ್ಥಿನಿ ವಿಮಾನದಲ್ಲೇ ಫ್ಯಾಸಿಸ್ಟ್ ಬಿಜೆಪಿ ಸರ್ಕಾರ ಎಂದು ಧಿಕ್ಕಾರ ಕೂಗಿದ್ದಕ್ಕೆ ಅವಳನ್ನು ಬಂಧನ ಮಾಡಿ ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ.
ಚೆನ್ನೈ: ಟ್ಯುಟಿಕ್ಯೂರಿನ್ ವಿಮಾನ ನಿಲ್ದಾಣದಲ್ಲಿ ಲೋಯಿಸ್ ಸೋಫಿಯಾ ಎನ್ನುವ ಸಂಶೋಧನಾ ವಿದ್ಯಾರ್ಥಿನಿ ವಿಮಾನದಲ್ಲೇ ಫ್ಯಾಸಿಸ್ಟ್ ಬಿಜೆಪಿ ಸರ್ಕಾರ ಎಂದು ಧಿಕ್ಕಾರ ಕೂಗಿದ್ದಕ್ಕೆ ಅವಳನ್ನು ಬಂಧನ ಮಾಡಿ ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಅದೇ ವಿಮಾನದಲ್ಲಿ ಉಪಸ್ಥಿತರಿದ್ದ ತಮಿಳುನಾಡು ಬಿಜೆಪಿ ಅಧ್ಯಕ್ಷ ತಮಿಲಿಸೈ ಸುಂದರರಾಜನ್ ಈ ಕುರಿತಾಗಿ ದೂರು ನೀಡಿ " ಅವಳು ಸಾಮಾನ್ಯ ಪ್ರಯಾಣಿಕಳಲ್ಲ ಅವಳ ಹಿಂದೆ ಯಾವುದೋ ಉಗ್ರ ಸಂಘಟನೆ ಇದೆ" ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
28 ವರ್ಷದ ಸೋಫಿಯಾ ಕೆನಡಾದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದು,ವಿಮಾನದಲ್ಲಿದ್ದಾಗ ಲೇ ಬಿಜೆಪಿ ವಿರುದ್ದ ಘೋಷಣೆ ಕೂಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸುಂದರರಾಜನ್" ಅದೇಗೆ ಅವಳು ಕೂಗಲು ಸಾಧ್ಯ? ಇದು ಸಾರ್ವಜನಿಕ ವೇದಿಕೆಯಲ್ಲ ಎಂದು ಪ್ರಶ್ನಿಸಿದ್ದಾರೆ.
ಸೋಫಿಯಾ ಈ ಹಿಂದೆ ಸ್ಟೆರ್ಲೈಟ್ ತಾಮ್ರ ಪ್ಲಾಂಟ್ ಪ್ರತಿಭಟನೆ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಳು.ಈಗ ಈ ಘಟನೆಯ ಕುರಿತಾಗಿ ಟ್ವೀಟ್ ಮಾಡಿರುವ ಅವರು "ನಾನು ವಿಮಾನದಲ್ಲಿ ತಮಿಲಿಸೈ ಸುಂದರರಾಜನ್ ಜೊತೆಗಿದ್ದೆ ನನಗೆ ನಿಜಕ್ಕೂ ಡೌನ್ ವಿತ್ ಮೋದಿ ಫ್ಯಾಸಿಸ್ಟ್ ಬಿಜೆಪಿ ಸರ್ಕಾರ ಎಂದು ಕೂಗಬೇಕೆನಿಸಿತ್ತು,ಇದಕ್ಕೆ ನನ್ನನ್ನು ವಿಮಾನದಿಂದ ಹೊರಕ್ಕೆನಾದರು ತಳ್ಳುತ್ತಾರೆಯೇ?" ಎಂದು ಟ್ವೀಟ್ ಮಾಡಿದ್ದಾರೆ.
ಈಗ ಸೋಫಿಯಾ ಬಂಧನವನ್ನು ಖಂಡಿಸಿರುವ ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟ್ಯಾಲಿನ್ ತಾವು ಕೂಡ ರೀತಿ ಘೋಷಣೆ ಕೂಗುವುದಾಗಿ ತಿಳಿಸಿದರು "ಒಂದುವೇಳೆ ಆ ರೀತಿ ಘೋಷಣೆ ಕೂಗುವವರನ್ನು ಬಂಧಿಸುವುದಾದರೆ ಎಷ್ಟು ಲಕ್ಷ ಜನರನ್ನು ನೀವು ಬಂಧಿಸಬೇಕು ? ಎಂದು ಪ್ರಶ್ನಿಸಿದ್ದಾರೆ.