ಸ್ವಾತಂತ್ರ್ಯ ದಿನದಂದು ಸಿಹಿ ತಿಂಡಿ ನೀಡಿಲ್ಲ ಎಂದು ಶಿಕ್ಷಕರಿಗೆ ಥಳಿಸಿದ ವಿದ್ಯಾರ್ಥಿಗಳು!
ಸಿಹಿ ತಿಂಡಿ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ವಿದ್ಯಾರ್ಥಿಗಳು ಶಿಕ್ಷಕರನ್ನೇ ಹಿಡಿದು ಥಳಿಸಿದ್ದಾರೆ.
ನವದೆಹಲಿ : ಬಿಹಾರದ ಬಕ್ಸಾರ್‌ನ ಶಾಲೆಯೊಂದರಲ್ಲಿ ಸಿಹಿತಿಂಡಿ ವಿಚಾರವಾಗಿ ಗಲಾಟೆ ನಡೆದಿರುವ ವಿಶಿಷ್ಟ ಪ್ರಕರಣವೊಂದು ಬೆಳಕಿಗೆ ಬಂದಿದೆ.ಜಿಲೇಬಿ ಸಿಗದಿದ್ದಕ್ಕೆ ಕೋಪಗೊಂಡ ವಿದ್ಯಾರ್ಥಿಗಳು ಮೊದಲು ಶಿಕ್ಷಕರಿಗೆ ಜಿಲೇಬಿ ಯಾಕೆ ಸಿಗಲಿಲ್ಲ ಎನ್ನುವ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ.ನಂತರ ವಿವಾದವು ಉಲ್ಬಣಗೊಂಡು ವಿದ್ಯಾರ್ಥಿಗಳು ಶಿಕ್ಷಕರನ್ನು ಥಳಿಸಿದ್ದಾರೆ.
ಬಿಹಾರದ ಬಕ್ಸರ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ವಿದ್ಯಾರ್ಥಿಗಳು ಸಿಹಿತಿಂಡಿ ನೀಡದಿದ್ದಕ್ಕೆ ಶಿಕ್ಷಕರನ್ನು ಥಳಿಸಿದ್ದಾರೆ.ಸಿಹಿತಿಂಡಿ ಸಿಗದ ಕಾರಣಕ್ಕೆ ಸಿಟ್ಟಿಗೆದ್ದ ವಿದ್ಯಾರ್ಥಿಗಳು ತಮ್ಮ ಮನೆಗೆ ತೆರಳುತ್ತಿದ್ದ ಶಿಕ್ಷಕರಿಗೆ ಮುತ್ತಿಗೆ ಹಾಕಿದರು.ಮನೆಗೆ ತೆರಳುತ್ತಿದ್ದ ಶಿಕ್ಷಕರನ್ನು ಅಟ್ಟಿಸಿಕೊಂಡು ಹೋಗಿ ಥಳಿಸಿದ್ದಾರೆ.ವಿದ್ಯಾರ್ಥಿಗಳ ಗಲಾಟೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದರು.
ಇದನ್ನೂ ಓದಿ : ನೀವು ಎಂದೂ ಕೇಳಿರದ 5 ಮಹಾನ್ ಸ್ವಾತಂತ್ರ ಹೋರಾಟಗಾರರ ಬಗ್ಗೆ ಇಲ್ಲಿದೆ ರೋಚಕ ಕಥನ....!
ಮುರಾರ್‌ನ ಇಂಟರ್ ಲೆವೆಲ್ ಹೈಸ್ಕೂಲ್‌ನಲ್ಲಿ ಜಲೇಬಿ ವಿಚಾರವಾಗಿ ಭಾರೀ ಗಲಾಟೆ ನಡೆದಿದೆ.78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳು ಜಲೇಬಿ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಶಿಕ್ಷಕರಿಗೆ ಥಳಿಸಿದ್ದಾರೆ.ಜಲೇಬಿ ವಿಚಾರವಾಗಿ ಕೋಲಾಹಲ ಎದ್ದಿರುವ ಈ ಸುದ್ದಿ ಇಡೀ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪ್ರತಿ ವರ್ಷ ಆಗಸ್ಟ್ 15 ಮತ್ತು ಜನವರಿ 26ರಂದು ಶಾಲಾ ವಿದ್ಯಾರ್ಥಿಗಳ ಹೊರತಾಗಿ ಹಳ್ಳಿಯ ಮಕ್ಕಳು ಕೂಡಾ ಶಾಲೆಯಲ್ಲಿ ಸೇರುತ್ತಾರೆ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.ಈ ಬಾರಿ ಅವರ ಸಂಖ್ಯೆ ಹೆಚ್ಚಿದ್ದರಿಂದ ಸಿಹಿ ನೀಡುವ ಬದಲು ಶಿಕ್ಷಕರನ್ನು ನಿಂದಿಸಿ ಅಟ್ಟಾಡಿಸಿಕೊಂಡು ಹೋಗಲು ಆರಂಭಿಸಿದ್ದಾರೆ.ನಂತರ ಗಲಾಟೆ ಆರಂಭವಾಗಿ ಹೊಡೆದಾಟ ಆರಂಭವಾಯಿತು.
ಇದನ್ನೂ ಓದಿ : Narendra Modi: ಕೆಂಪು ಕೋಟೆ ಮೇಲೆ ಧ್ವಜಾರೋಹಣ ಮಾಡಿದ ಪ್ರಧಾನಿ ನರೇಂದ್ರ ಮೋದಿ..! ಈ ವರ್ಷದ ಥೀಮ್ ಏನು..?
ಈ ಘಟನೆಯಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯ ನಂತರ ಕೋಪಗೊಂಡ ಶಿಕ್ಷಕರು ಪೊಲೀಸ್ ಠಾಣೆಗೆ ಆಗಮಿಸಿ ವಿದ್ಯಾರ್ಥಿಗಳ ವಿರುದ್ಧ ದೂರು ನೀಡಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ