ಬಿಎಸ್‌ಇಎಸ್‌ ಯಮುನಾ ಪವರ್ ಲಿಮಿಟೆಡ್‌ ಕಡೆಯಿಂದ ಪದವಿ ಓದುವ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ನೀಡಲಾಗುತ್ತದೆ. ಬಿಎಸ್‌ಇಎಸ್‌ ಯಮುನಾ ಪವರ್ ಲಿಮಿಟೆಡ್‌ ಒಂದು ಪವರ್‌ ವಿತರಣಾ ಕಂಪನಿ ಆಗಿದೆ. ಈ ಕಂಪನಿಯು ತನ್ನ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮದ ಅಂಗವಾಗಿ ಡಿಗ್ರಿ ಫೈನಲ್‌ ಇಯರ್‌ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿದೆ. ಇದೀಗ 2024-25ನೇ ಸಾಲಿನ ಸ್ಕಾಲರ್‌ಶಿಪ್‌ ವಿತರಣೆಗೆ ಅರ್ಜಿ ಕರೆಯಲಾಗಿದೆ. 


COMMERCIAL BREAK
SCROLL TO CONTINUE READING

ಸಮಾಜದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಈ ಸದಾವಕಾಶವನ್ನು ಬಳಸಿಕೊಳ್ಳಬಹುದು. ಉನ್ನತ ಶಿಕ್ಷಣ ಕನಸನ್ನು ನನಸು ಮಾಡಲು ಸಹಾಯ ಮಾಡುವ ಉದ್ದೇಶದಿಂದ ಬಿಎಸ್‌ಇಎಸ್‌ ಯಮುನಾ ಪವರ್ ಲಿಮಿಟೆಡ್‌ 'ಬಿವೈಪಿಎಲ್ ಸಶಕ್ತ್‌ ಸ್ಕಾಲರ್‌ಶಿಪ್‌' ನೀಡುತ್ತಿದೆ. ಅರ್ಹ ವಿದ್ಯಾರ್ಥಿಗಳು ಈ ಹಣಕಾಸು ಸೌಲಭ್ಯವನ್ನು ಪಡೆಯಬಹುದು. 


ಇದನ್ನೂ ಓದಿ: ಕೋಳಿಗಳು ಮುಂಜಾನೆ ಹೊತ್ತಿನಲ್ಲೇ ಹೆಚ್ಚು ಕೂಗುತ್ತವೆ ಏಕೆ..? ಇಲ್ಲಿದೆ ನೋಡಿ ಆಶ್ಚರ್ಯಕರ ಮಾಹಿತಿ


ಅರ್ಜಿ ಸಲ್ಲಿಸಲು ಅರ್ಹತೆ, ವಿಧಾನ ಇತರೆ ಡೀಟೇಲ್ಸ್‌ ಕೆಳಗಿನಂತಿದೆ ನೋಡಿ; 


ಸ್ಕಾಲರ್‌ಶಿಪ್‌ ಹೆಸರು- ಬಿವೈಪಿಎಲ್ ಸಶಕ್ತ್‌ ಸ್ಕಾಲರ್‌ಶಿಪ್‌
ಸ್ಕಾಲರ್‌ಶಿಪ್‌ ಮೊತ್ತ - ವಾರ್ಷಿಕ ರೂ.30,000.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 07-01-2024


ಸ್ಕಾಲರ್‌ಶಿಪ್‌ ಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು;


1) ಭಾರತೀಯ ಪ್ರಜೆಗಳಾಗಿರಬೇಕು.
2) ದೆಹಲಿ ವ್ಯಾಪ್ತಿಯ ವಿದ್ಯಾರ್ಥಿಗಳು ಮಾತ್ರ ಈ ಸ್ಕಾಲರ್‌ಶಿಪ್‌ ಗೆ ಅರ್ಜಿ ಸಲ್ಲಿಸಬಹುದು.
3) ಯಾವುದೇ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು.
4) ಅಂತಿಮ ಸೆಮಿಸ್ಟರ್ / ವರ್ಷದ ಪರೀಕ್ಷೆಯಲ್ಲಿ ಕನಿಷ್ಠ ಶೇಕಡ.55 ಅಂಕಗಳನ್ನು ಪಡೆದಿರುವುದು ಕಡ್ಡಾಯ.
5) ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 6,00,000 ರೂಪಾಯಿಗಿಂತ ಒಳಗಿರಬೇಕು.


ಸ್ಕಾಲರ್‌ಶಿಪ್‌ ಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು;


1) ಪಾಸ್‌ಪೋರ್ಟ್‌ ಅಳತೆಯ ಫೋಟೊ
2) ಆಧಾರ್ ಕಾರ್ಡ್
3) ವಾರ್ಷಿಕ ಆದಾಯ ಪ್ರಮಾಣಪತ್ರ
4) ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಮಾರ್ಕ್ಸ್‌ ಕಾರ್ಡ್‌
5) ಕಾಲೇಜು ಫೀಸ್ ರಿಸಿಪ್ಟ್.
6)‌ ಬ್ಯಾಂಕ್‌ ಪಾಸ್‌ ಬುಕ್‌ ಸ್ಕ್ಯಾನ್‌ ಕಾಪಿ.


ಅರ್ಜಿ ಹಾಕುವ ವಿಧಾನ: 


ಬಿವೈಪಿಎಲ್ ಸಶಕ್ತ್‌ ಸ್ಕಾಲರ್‌ಶಿಪ್‌ ಗೆ ಅರ್ಜಿ ಸಲ್ಲಿಸಲು https://www.buddy4study.com/page/bypl-sashakt-scholarship ಆನ್‌ಲೈನ್‌ ಡೈರೆಕ್ಟ್‌ ಲಿಂಕ್‌ ಕ್ಲಿಕ್ ಮಾಡಿ. ತವೆಬ್‌ಪೇಜ್‌ನಲ್ಲಿ ಸ್ಕ್ರಾಲ್‌ ಡೌನ್‌ ಮಾಡಿದಾಗ 'Apply Now' ಎಂದು ಕಾಣುವುದು. ಅಲ್ಲಿ ಕ್ಲಿಕ್‌ ಮಾಡಿ. ಈ ಹಂತದಲ್ಲಿ ಪಾಪಪ್‌ ಆಗುವ ವೆಬ್‌ಪೇಜ್‌ ಮೇಲೆ ಗೂಗಲ್‌ ಮೇಲ್, ಇ-ಮೇಲ್, ಮೊಬೈಲ್‌ ನಂಬರ್ ಈ ಯಾವುದೇ ಮಾದರಿ ಮೂಲಕ ಲಾಗಿನ್‌ ಆಗಿ. ಬಳಿಕ ಸ್ಕಾಲರ್‌ಶಿಪ್‌ ಗೆ ಅರ್ಜಿ ಸಲ್ಲಿಸಬಹುದು.


ಇದನ್ನೂ ಓದಿ: ಧಾರವಾಡದಲ್ಲಿ ದಲಿತ ಸೂರ್ಯನ ಹೆಜ್ಜೆಗುರುತು -ಮನೋಜಕುಮಾರ ಗುದ್ದಿ ಅವರ ಬರಹ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.