ಕೋವಿಶೀಲ್ಡ್ ನ ಒಂದೇ ಡೋಸ್ ಸಾಕಾ? ಎರಡನೇ ಡೋಸ್ ಅಗತ್ಯವಿಲ್ಲವೇ ?
ಕರೋನಾ ಲಸಿಕೆ ಕೊರತೆಯ ವರದಿಗಳ ಮಧ್ಯೆ `ಸಿಂಗಲ್ ಶಾಟ್ ವ್ಯಾಕ್ಸಿನೇಷನ್` ಬಗ್ಗೆ ಇದೀಗ ಚರ್ಚೆ ನಡೆಯುತ್ತಿದೆ. ಕೋವಿಡ್ -19 ಲಸಿಕೆ ತಯಾರಿಸುವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಲಸಿಕೆಯನ್ನು ಭವಿಷ್ಯದಲ್ಲಿ ಸಿಂಗಲ್ ಶಾಟ್ ಲಸಿಕೆಯಾಗಿ ತಯಾರಿಸಬಹುದು.
ನವದೆಹಲಿ : ಕರೋನಾ ಲಸಿಕೆ ಕೊರತೆಯ ವರದಿಗಳ ಮಧ್ಯೆ 'ಸಿಂಗಲ್ ಶಾಟ್ ವ್ಯಾಕ್ಸಿನೇಷನ್' ಬಗ್ಗೆ ಇದೀಗ ಚರ್ಚೆ ನಡೆಯುತ್ತಿದೆ. ಕೋವಿಡ್ -19 ಲಸಿಕೆ ತಯಾರಿಸುವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಲಸಿಕೆಯನ್ನು ಭವಿಷ್ಯದಲ್ಲಿ ಸಿಂಗಲ್ ಶಾಟ್ ಲಸಿಕೆಯಾಗಿ ತಯಾರಿಸಬಹುದು. ಪ್ರಸ್ತುತ, ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಎರಡೂ ಲಸಿಕೆಗಳ ಎರಡು ಡೋಸ್ ಗಳನ್ನು ನೀಡಲಾಗುತ್ತಿದೆ. ಇದರ ಜೊತೆಗೆ ವಾಕ್ಸಿಗ್ ಮಿಕ್ಸಿಂಗ್ ಬಗ್ಗೆಯೂ ಅಧ್ಯಯನ ನಡೆಯುತ್ತಿದೆ.
ಕೋವಿಶೀಲ್ಡ್ ಲಸಿಕೆ ಒಂದೇ ಡೋಸ್ ಸಾಕಾ ?
ಜಾನ್ಸನ್ ಮತ್ತು ಜಾನ್ಸನ್ (Johnson & Johnson), ಸ್ಪುಟ್ನಿಕ್ ಲೈಟ್ (Sputnik Light) ಮತ್ತು ಕೋವಿಶೀಲ್ಡ್ (Covishield) ಒಂದೇ ಪ್ರಕ್ರಿಯೆ ಮತ್ತು ಫಾರ್ಮುಲಾದಿಂದ ತಯಾರಿಸಲ್ಪಟ್ಟಿದೆ. ಜಾನ್ಸನ್ ಮತ್ತು ಜಾನ್ಸನ್ ಮತ್ತು ಸ್ಪುಟ್ನಿಕ್ ಲೈಟ್ ಎರಡೂ ಒಂದೇ ಡೋಸ್ ಲಸಿಕೆಗಳಾಗಿವೆ. ಹಾಗಾಗಿ, ಅದೇ ಪ್ರಕ್ರಿಯೆಯಿಂದ ತಯಾರಿಸಿದ ಕೋವಿಶೀಲ್ಡ್ ಲಸಿಕೆಯ ಸಿಂಗಲ್ ಶಾಟ್ ಪರಿಣಾಮಕಾರಿಯಾಗಿರಲಿದೆಯೇ ಎಂಬ ಬಗ್ಗೆ ಅಧ್ಯಯನ ನಡೆಯುತ್ತಿದೆ. ಪ್ರಸ್ತುತ ಕೋವಿಶೀಲ್ಡ್ ನ ಎರಡು ಡೋಸ್ ಲಸಿಕೆಗಳನ್ನು ನೀಡಲಾಗುತ್ತಿದೆ. ಅಧ್ಯಯನದಲ್ಲಿ ಸಕಾರಾತ್ಮಕ ಫಲಿತಾಂಶ ಬಂದರೆ ಮುಂಬರುವ ದಿನಗಳಲ್ಲಿ ಕೋವಿಶೀಲ್ಡ್ ನ (Covishield) ಒಂದೇ ಡೋಸ್ ನೀಡುವ ಸಾಧ್ಯತೆ ಇದೆ. ಹೀಗಾದರೆ ಲಸಿಕೆಗಳ (Vaccine) ಕೊರತೆಗೂ ಪರಿಹಾರ ಸಿಕ್ಕಂತಾಗುತ್ತದೆ.
ಇದನ್ನೂ ಓದಿ : ಬಿಹಾರದಲ್ಲಿ ಜೂನ್ 8ರವರೆಗೆ ಲಾಕ್ ಡೌನ್ ವಿಸ್ತರಣೆ, ನಿಯಮಗಳಲ್ಲಿ ಸ್ವಲ್ಪ ಮಟ್ಟಿನ ಸಡಿಲಿಕೆ
ಮಿಕ್ಸಿಂಗ್ ಡೋಸ್ ಬಗ್ಗೆಯೂ ಅಧ್ಯಯನ :
ಇದಲ್ಲದೆ, ಲಸಿಕೆಯ 'ಮಿಕ್ಸಿಂಗ್ ಡೋಸ್' (Mixing Dose) ಬಗ್ಗೆಯೂ ಅಧ್ಯಯನಗಳು ನಡೆಯುತ್ತಿವೆ. ಮೂಲಗಳ ಪ್ರಕಾರ, ಎರಡು ವಿಭಿನ್ನ ಲಸಿಕೆಗಳನ್ನು ಬೆರೆಸುವ ಮೂಲಕ 'ಮಿಕ್ಸಿಂಗ್ ಡೋಸ್' ಕುರಿತ ಅಧ್ಯಯನವು ಒಂದು ತಿಂಗಳಲ್ಲಿ ಪ್ರಾರಂಭವಾಗಲಿದ್ದು, ಎರಡರಿಂದ ಎರಡೂವರೆ ತಿಂಗಳಲ್ಲಿ ಅಧ್ಯಯನ ಪೂರ್ಣಗೊಳ್ಳಲಿದೆ ಎನ್ನಲಾಗಿದೆ. ಹೊಸ ಅಪ್ಲಿಕೇಶನ್‌ನಲ್ಲಿ ದಾಖಲಾದ ಲಸಿಕೆ ಡೇಟಾವನ್ನು (Vaccination data) ಕೇಂದ್ರ ಸರ್ಕಾರ ನಿರ್ಣಯಿಸಲಿದ್ದು, ವ್ಯಾಕ್ಸಿನೇಷನ್ ನಂತರ ಅಡ್ಡಪರಿಣಾಮಗಳ ಸಂಭವವನ್ನು ಕಂಡುಹಿಡಿಯುವುದು ಇದರಿಂದ ಸುಲಭವಾಗುತ್ತದೆ. ಈ ಅಪ್ಲಿಕೇಶನ್ ಅನ್ನು ಕೋವಿನ್‌ಗೆ (CoWin) ಲಿಂಕ್ ಮಾಡಲಾಗುತ್ತದೆ. 20 ಜನರಿಗೆ ಗೊತ್ತಿಲ್ಲದೆ ಎರಡು ಬೇರೆ ಬೇರೆ ಲಸಿಕೆಗಳನ್ನು ನೀಡಲಾಗಿದ್ದರೂ ಅವರಲ್ಲಿ ಯವುದೇ ರೀತಿಯ ಅಡ್ಡಪರಿಣಾಮಗಳು (Side effects) ಕಂಡು ಬಂದಿಲ್ಲ. ಈ ಕಾರಣದಿಂದಾಗಿ ಡೋಸೇಜ್ ಮಿಶ್ರಣ ಮಾಡುವ ಬಗ್ಗೆ ವಿಮರ್ಶೆ ನಡೆಯುತ್ತಿದೆ.
ಇದನ್ನೂ ಓದಿ : Paytm ನಲ್ಲಿ Vaccination slot ಸರ್ಚ್ ಮಾಡುವುದು ಹೇಗೆ ತಿಳಿಯಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.