ನವದೆಹಲಿ: ಉತ್ತರಪ್ರದೇಶದಲ್ಲಿ ಜಿಲ್ಲೆಗಳ ಹೆಸರು ಬದಲಾವಣೆಗೆ ಆಗ್ರಹದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಲ್ಲಿಯೂ ಅಂಡಮಾನ್-ನಿಕೋಬಾರ್ ದ್ವೀಪಗಳ ಹೆಸರು ಬದಲಾವಣೆಗೆ ಒತ್ತಾಯ ಹೆಚ್ಚಾಗಿದೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಪಶ್ಚಿಮ ಬಂಗಾಳ ಬಿಜೆಪಿ ಉಪಾಧ್ಯಕ್ಷ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಮೊಮ್ಮಗ ಸುಭಾಷ್ ಕುಮಾರ್ ಬೋಸ್ ಅವರು ಅಂಡಮಾನ್-ನಿಕೋಬಾರ್ ದ್ವೀಪಗಳ ಹೆಸರನ್ನು 'ಸ್ವರಾಜ್ಯ ದ್ವೀಪ' ಹಾಗೂ `ಶಹೀದ್ ದ್ವೀಪ' ಎಂದು ಬದಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.


"1943 ರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಆಜಾದ್ ಹಿಂದ್ ಸರ್ಕಾರವನ್ನು ಸ್ಥಾಪಿಸಿದರು. ಬೋಸರು ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ದ್ವಿತೀಯ ಮಹಾಯುದ್ಧದಲ್ಲಿ ಜಪಾನಿನ ವಶಕ್ಕೆ ಬಂದಿದ್ದ ಅಂಡಮಾನ್ ನಿಕೋಬಾರ್ ದ್ವೀಪ ವೃಂದವನ್ನು ನೇತಾಜಿ ತಮ್ಮ ಸರ್ಕಾರದ ಅಧೀನವನ್ನಾಗಿಸಿಕೊಂಡು ಅವುಗಳಿಗೆ "ಸ್ವರಾಜ್ಯ ದ್ವೀಪ" ಹಾಗೂ "ಶಹೀದ್ ದ್ವೀಪ" ಎಂದು ನಾಮಕರಣ ಮಾಡಿದ್ದರು. ಹಾಗಾಗಿ ಆ ಹೆಸರುಗಳನ್ನೇ ಅಂಡಮಾನ್-ನಿಕೋಬಾರ್ ದ್ವೀಪಗಳಿಗೆ ಮರು ನಾಮಕರಣ ಮಾಡಬೇಕು" ಎಂದು ನೇತಾಜಿ ಕುಮಾರ್ ಬೋಸ್ ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.