ಸಂಸದರ ವೇತನ ತಿರಸ್ಕರಿಸುವುದಿಲ್ಲವೆಂದ ಸುಬ್ರಮಣ್ಯಂ ಸ್ವಾಮಿ
ನವದೆಹಲಿ:ಇತ್ತೀಚಿಗೆ ಸಂಸತ್ ಅಧಿವೇಶನ ಪ್ರತಿಭಟನೆಯಲ್ಲೇ ಕಳೆದ ಹಿನ್ನಲೆಯಲ್ಲಿ 23 ದಿನಗಳ ವೇತನವನ್ನು ಪಡೆಯದಿರಲು ಬಿಜೆಪಿ ಸಂಸದರು ನಿರ್ಧರಿಸಿದ್ದರು.
ಆದರೆ ಈಗ ಬಿಜೆಪಿಯಲ್ಲಿ ಈ ನಿರ್ಧಾರಕ್ಕೆ ಅಪಸ್ವರದ ಧ್ವನಿ ಎದ್ದಿದೆ. ಹೌದು, ಬಿಜೆಪಿಯ ಹಿರಿಯ ನಾಯಕ ಸುಬ್ರಮಣ್ಯಂ ಸ್ವಾಮಿ ಈ ನಿರ್ಧಾರವನ್ನು ವಿರೋಧಿಸಿದ್ದಾರೆ. ಅವರೇ ಹೇಳುವಂತೆ" ನಾನು ಪ್ರತಿದಿನ ಸಂಸತ್ತಿಗೆ ಹೋಗುತ್ತೇನೆ, ಸದನ ನಡೆಯದಿದ್ದರೆ ಅದು ನನ್ನ ತಪ್ಪಲ್ಲ ಎಂದು ತಿಳಿಸಿದ್ದಾರೆ.ಅಲ್ಲದೆ ಇನ್ನು ಮುಂದುವರೆದು ತಾವು ರಾಷ್ಟ್ರಪತಿಯವರ ಪ್ರತಿನಿಧಿಯಾಗಿದ್ದು ಅವರು ಹೇಳುವವರೆಗೂ ನಾನೇಗೆ ವೇತನವನ್ನು ತೆಗೆದುಕೊಳ್ಳುವುದಿಲ್ಲವೆಂದು ಹೇಳಲಿ"? ಎಂದಿದ್ದಾರೆ.
ಸ್ವಾಮಿಯವರ ಹೇಳಿಕೆ ಇತ್ತೀಚಿಗೆ ಕೇಂದ್ರ ಸಚಿವ ಅನಂತ್ ಕುಮಾರ್ ರವರು 23 ದಿನಗಳ ವೇತನವನ್ನು ಬಿಜೆಪಿ ಮತ್ತು ಎನ್ ಡಿ ಎ ಸಂಸದರು ಪಡೆಯುವುದಿಲ್ಲ ಎಂದು ಹೇಳಿದ ಬೆನ್ನಲ್ಲೇ ಅವರ ಹೇಳಿಕೆ ಬಂದಿದೆ.