ನವದೆಹಲಿ: ಪೆಟ್ರೋಲ್-ಡೀಸೆಲ್ ದರ ಏರಿಕೆ ನಡುವೆ ಜನಸಾಮಾನ್ಯರಿಗೆ ಈಗ ಸಿಲಿಂಡರ್ ಶಾಕ್ ನೀಡಲು ಭಾರತೀಯ ತೈಲ ಕಾರ್ಪೊರೇಷನ್ (ಐಒಸಿ) ಮುಂದಾಗಿದೆ. ಸೆಪ್ಟೆಂಬರ್ 30 ರಂದು ಸಬ್ಸಿಡಿ ಸಹಿತ LPG ಸಿಲಿಂಡರ್ ದರ 2.89 ರೂಪಾಯಿ ಏರಿಕೆಯಾಗಿದ್ದು, ಪ್ರತಿ ಸಿಲಿಂಡರ್ ದರ 502.4 ರೂಪಾಯಿಗಳಷ್ಟಾಗಿದೆ. ಇದೇ ಸಮಯದಲ್ಲಿ ಸೆಪ್ಟೆಂಬರ್ 30 ರಂದು ಸಬ್ಸಿಡಿ ಸಹಿತ LPG ಸಿಲಿಂಡರ್ ದರ 2.89 ರೂಪಾಯಿ ಏರಿಕೆಯಾಗಿದ್ದು, ಪ್ರತಿ ಸಿಲಿಂಡರ್ ದರ 502.4 ರೂಪಾಯಿಗಳಷ್ಟಾಗಿದೆ. 


COMMERCIAL BREAK
SCROLL TO CONTINUE READING

ಅಂತಾರಾಷ್ಟ್ರೀಯ ಬೆಲೆ ಹಾಗೂ ವಿದೇಶಾಂಗ ವಿನಿಮಯ ವ್ಯತ್ಯಾಸಗಳಿಂದಾಗಿ ಬೆಲೆ ಏರಿಕೆ ಮಾಡಲಾಗಿದೆ ಎಂದು ಭಾರತೀಯ ತೈಲ ಕಾರ್ಪೊರೇಷನ್ (ಐಒಸಿ) ಹೇಳಿದೆ. 


ಸೆಪ್ಟೆಂಬರ್ ನಲ್ಲಿ ಇದು 320.49 ರೂ. ಇದ್ದ, ಸಿಲಿಂಡರ್ ಬಳಕೆದಾರರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವ ಸಬ್ಸಿಡಿ ಮೊತ್ತ ಅಕ್ಟೋಬರ್ ನಿಂದ ಪ್ರತಿ ಸಿಲಿಂಡರ್ಗೆ 376.60 ರೂ. ಆಗಲಿದೆ. 


LPG ದರ ಏರಿಕೆ ಆಗುತ್ತಿದ್ದರೂ ಸಬ್ಸಿಡಿ ಪಡೆಯುವ ಗ್ರಾಹಕರನ್ನು ರಕ್ಷಿಸಲಾಗುವುದು ಎಂದು ಐಒಸಿ ಹೇಳಿದೆ. GST ಇಂದಾಗಿ ವಾಸ್ತವದಲ್ಲಿ ಗೃಹಬಳಕೆ ಎಲ್ಪಿಜಿ ಗ್ರಾಹಕರಿಗೆ 2.89 ರೂಪಾಯಿಗಳಷ್ಟು ಮಾತ್ರ ಹೊರೆಯಾಗಲಿದೆ ಎಂದು ಐಒಸಿ ಹೇಳಿದೆ.