ಸಬ್ಸಿಡಿ ಸಿಲಿಂಡರ್ ಗಳ ಬೆಲೆ ತುಟ್ಟಿ! ದರ ಎಷ್ಟು ಹೆಚ್ಚಾಗಲಿದೆ ಗೊತ್ತೇ?
ಜುಲೈ 31ರ ಮದ್ಯರಾತ್ರಿ 12ಗಂಟೆಯಿಂದ ಸಬ್ಸಿಡಿ ಹೊಂದಿರುವ LPG ಸಿಲಿಂಡರ್ ಗಳ ದರದಲ್ಲಿ ಏರಿಕೆಯಾಗಿದೆ.
ನವದೆಹಲಿ: ದೇಶದಲ್ಲಿ ಮತ್ತೊಮ್ಮೆ ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಜುಲೈ 31ರ ಮದ್ಯರಾತ್ರಿ 12ಗಂಟೆಯಿಂದ ಸಬ್ಸಿಡಿ ಹೊಂದಿರುವ LPG ಸಿಲಿಂಡರ್ ಗಳ ದರದಲ್ಲಿ ಏರಿಕೆಯಾಗಿದೆ. ಇದರಿಂದಾಗಿ ಸಬ್ಸಿಡಿ ಸಿಲಿಂಡರ್ ಮೇಲೆ 1.76 ರೂ. ಹೆಚ್ಚಳವಾಗಿದ್ದು, ಈ ಹಿಂದೆ 496.02ರೂ. ಇದ್ದ ಒಂದು ಸಿಲಿಂಡರ್ ಬೆಲೆ, ಇದೀಗ 498.02 ರೂ ಆಗಿದೆ.
ಕೇಂದ್ರ ಸರ್ಕಾರ LPG ಸಿಲಿಂಡರ್ ಗಳ ಬೆಲೆ ಹೆಚ್ಚಳ ಮಾಡಿದ ನಂತರ ಮತ್ತು ತೆರಿಗೆಯಲ್ಲಾದ ಬದಲಾವಣೆ ಸಿಲಿಂಡರ್ ಗಳ ಮೂಲ ಬೆಲೆಯ ಮೇಲೆ ಪ್ರಭಾವ ಬೀರಿದ್ದರಿಂದ ಸಬ್ಸಿಡಿ ಸಿಲಿಂಡರ್ ಗಳ ಬೆಲೆ ಏರಿಕೆಯಾಗಿದೆ ಎಂದು ಇಂಡಿಯನ್ ಆಯಿಲ್ ಸಂಸ್ಥೆ ತಿಳಿಸಿದೆ.
LPG ಸಿಲಿಂಡರ್ ಬೆಲೆಯನ್ನು ಸರಾಸರಿ LPGಯ ಅಂತಾರಾಷ್ಟ್ರೀಯ ಮಾನದಂಡ ದರ ಮತ್ತು ವಿದೇಶಿ ವಿನಿಮಯ ದರಕ್ಕೆ ಅನುಗುಣವಾಗಿ ಪ್ರತಿ ತಿಂಗಳು ಸಬ್ಸಿಡಿ ಸಿಲಿಂಡರ್ ಗಳ ಮೇಲಿನ ದರದಲ್ಲಿ ಬದಲಾವಣೆಯಾಗುತ್ತದೆ ಎಂಬುದು ಇಲ್ಲಿ ಗಮನಾರ್ಹ.