ಗುರುಗ್ರಾಮ್:ರಾಷ್ಟ್ರರಾಜಧಾನಿ ದೆಹಲಿಗೆ ಹೊಂದಿಕೊಂಡಂತೆ ಇರುವ ಸೈಬರ್ ಸಿಟಿ ಗುರುಗ್ರಾಮ್ ನಲ್ಲಿ ಹಸುವಿನ ರಕ್ತನಾಳಗಳನ್ನು ಬಳಸಿ ವಿಶ್ವದ ಮೊಟ್ಟಮೊದಲ ಯಕೃತ್ತಿನ ಕಸಿಯನ್ನು ಯಶಸ್ವಿಯಾಗಿ ನಡೆಸ್ಸಲಾಗಿದೆ. ಸೌದಿ ಅರೇಬಿಯಾದ ಒಂದು ವರ್ಷದ ಪುಟ್ಟ ಬಾಲಕಿಗೆ ಈ ಯಕೃತ್ತು ಕಸಿ ಮಾಡಲಾಗಿದೆ. 14 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯ ನಂತರ, ಹುಡುಗಿ ಇದೀಗ ಸಂಪೂರ್ಣ ಆರೋಗ್ಯವಾಗಿದ್ದು,ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಸೌದಿ ಅರೇಬಿಯಾದ ನಿವಾಸಿಯಾಗಿರುವ ಈ ಪುಟ್ಟ ಬಾಲಕಿಯ ಹೆಸರು ಹೂರ್. ಭಾರತದಲ್ಲಿ ವೈದ್ಯರನ್ನು ದೇವರ ಪ್ರತಿರೂಪ ಎಂದು ಹೇಳಲಾಗುತ್ತದೆ. ಈ ಪುಟ್ಟ ಬಾಲಕಿಯ ವಿಷಯದಲ್ಲಿ ಈ ಹೇಳಿಕೆ ನಿಜ ಎಂದು ಸಾಬೀತಾಗಿದೆ. ಈ ಕುರಿತು ಮಾತನಾಡಿರುವ ಆರ್ಟೆಮಿಸ್ ಆಸ್ಪತ್ರೆಯ ಹಿರಿಯ ಸಲಹೆಗಾರ ಡಾ.ಗಿರಿರಾಜ್ ಬೋರಾ, ಯಕೃತ್ತಿಗೆ ರಕ್ತವನ್ನು ತಲುಪಿಸಲು ಹಸುವಿನ ರಕ್ತನಾಳಗಳನ್ನು ಬಳಸಿದ ವಿಶ್ವದ ಏಕೈಕ ಯಶಸ್ವಿ ಶಸ್ತ್ರಚಿಕಿತ್ಸೆ ಇದಾಗಿದೆ ಎಂದಿದ್ದಾರೆ.


ಈ ಒಂದು ವರ್ಷದ ಪುಟ್ಟ ಬಾಲಕಿಗೆ ಪಿತ್ತರಸ ನಾಳಗಳು ಅಭಿವೃದ್ಧಿಗೊಳ್ಳದ ಕಾರಣ ಯಕೃತ್ತಿನ ಸಮಸ್ಯೆ ಕಾಣಿಸಿಕೊಂಡಿತ್ತು. ಬಳಿಕ ಸೌದಿ ವೈದ್ಯರು ಭಾರತದಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲು ಆಕೆಯ ಪೋಷಕರಿಗೆ ಸಲಹೆ ನೀಡಿದರು. ಅದನ್ನು ಪರಿಗಣಿಸಿದ್ದ ಬಾಲಕಿಯ ಪೋಷಕರು ಬಾಲಕಿಯನ್ನು ಗುರುಗ್ರಾಮ್‌ನ ಆರ್ಟೆಮಿಸ್ ಆಸ್ಪತ್ರೆಗೆ ತಂದು ಭರ್ತಿ ಮಾಡಿದರು, ಅಲ್ಲಿ ಬಾಲಕಿಗೆ ಯಕೃತ್ತಿನ ಕಸಿ ಮಾಡಲಾಗಿದೆ. ಈ ವೇಳೆ ಮಗುವಿನ ಹೊಸ ಯಕೃತ್ತಿಗೆ ರಕ್ತವನ್ನು ಪೂರೈಸಲು ಹಸುವಿನ ರಕ್ತನಾಳಗಳನ್ನು ಬಳಸಲಾಗಿದೆ.


ದೆಹಲಿ-NCR ಪ್ರಾಂತ್ಯದಲ್ಲಿ ಇಷ್ಟೊಂದು ಚಿಕ್ಕ ವಯಸ್ಸಿನ ಬಾಲಕಿಯ ಮೇಲೆ ಯಕೃತ್ತಿನ ಕಸಿ ಮಾಡಿರುವುದು ಇದು ಮೊದಲನೆಯ ಪ್ರಕರಣವಾಗಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಅಷ್ಟೇ ಅಲ್ಲ ಯಕೃತ್ತಿಗೆ ರಕ್ತಪೂರೈಸಲು ಹಸುವಿನ ರಕ್ತನಾಳಗಳನ್ನು ಬಳಸಿದ ವಿಶ್ವದ ಮೊಟ್ಟಮೊದಲ ಶಸ್ತ್ರಚಿಕಿತ್ಸೆ ಇದಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಈ ರಕ್ತನಾಳಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗಿದೆ ಎಂದು ಹೇಳಿರುವ ವೈದ್ಯರು. ಈ ಶಸ್ತ್ರಚಿಕಿತ್ಸೆಗೆ ಸುಮಾರು 14ಗಂಟೆ ಸಮಯಾವಕಾಶ ಬೇಕಾಯಿತು ಎಂದಿದ್ದಾರೆ. ಬಾಲಕಿಗೆ ವ್ಯಸ್ಕ್ ಲಿವರ್ ನ ಎಂಟನೆ ಭಾಗವನ್ನು ಅಳವಡಿಸಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.


ಸದ್ಯ ಮಗುವಿನ ಮೇಲೆ ನಡೆಸಲಾದ ಯಕೃತ್ತಿನ ಕಸಿ ಯಶಸ್ವಿಯಾಗಿದ್ದು, ಎರಡು ವಾರಗಳ ನಿಗಾವಹಿಸಿದ ಬಳಿಕ ಆಕೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಈ ಬಾಲಕಿಯ ತಂದೆ ಅಹ್ಮದ್ ಭಾರತ ಮತ್ತು ಆಸ್ಪತ್ರೆಯ ವೈದ್ಯರಿಗೆ ಧನ್ಯವಾದ ತಿಳಿಸಿದ್ದಾರೆ. 


ಭಾರತದಲ್ಲಿ ವೈದ್ಯರನ್ನು ದೇವರಿಗೆ ಹೋಲಿಸಲಾಗುತ್ತದೆ. ಆದರೆ, ಸೌದಿ ಅರೇಬಿಯಾದ ನಿವಾಸಿಯಾಗಿರುವ ಈ ದಂಪಂತಿಗಳ ಪಾಲಿಗೆ ಈ ಹೇಳಿಕೆ ನಿಜವೆಂದು ಸಾಬೀತಾಗಿದೆ. ವಿಶ್ವದ ಅತ್ಯಂತ ಅಪರೂಪದ ಕಸಿ ಮಾಡುವ ಮೂಲಕ ಬಾಲಕಿಗೆ ಮರುಜೀವ ನೀಡಿದ್ದಾರೆ.