ಮುಖ್ಯ ಮಾಹಿತಿ ಆಯುಕ್ತರಾಗಿ ಪ್ರಮಾಣವಚನ ಸ್ವೀಕರಿಸಿದ ಸುಧೀರ್ ಭಾರ್ಗವ
ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಸುಧೀರ್ ಭಾರ್ಗವ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ನವದೆಹಲಿ: ಕೇಂದ್ರ ಮಾಹಿತಿ ಆಯೋಗ(ಸಿಐಸಿ)ದ ಮುಖ್ಯ ಮಾಹಿತಿ ಆಯುಕ್ತರಾಗಿ ಸುಧೀರ್ ಭಾರ್ಗವ ಇಂದು ಪ್ರಮಾಣವಚನ ಬೋಧಿಸಿದರು.
ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಸುಧೀರ್ ಭಾರ್ಗವ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಭಾರ್ಗವ ಸಿಐಸಿನಲ್ಲಿ ಜೂನ್ 2015 ರಿಂದ ಮಾಹಿತಿ ಕಮೀಷನರ್ ಆಗಿ ಸೇವೆ ಸಲ್ಲಿಸಿದ್ದಾರೆ.
ಸರಕಾರವು ಕಳೆದ ತಿಂಗಳು ನಾಲ್ಕು ಹೊಸ ಮಾಹಿತಿ ಆಯುಕ್ತರನ್ನು ನೇಮಿಸಿತು. ಸಿಐಸಿಗೆ ಭಾರ್ಗವ ಅವರನ್ನು ಹೊಸ ಮುಖ್ಯ ಮಾಹಿತಿ ಆಯುಕ್ತರನ್ನಾಗಿ ನೇಮಕ ಮಾಡಿತು.