Sukesh Chandrasekhar Jacqueline Fernandez: 200 ಕೋಟಿ ರೂಪಾಯಿ ಸುಲಿಗೆ ಪ್ರಕರಣದಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಒಂಬತ್ತು ದಿನಗಳ ಸುದೀರ್ಘ ನವರಾತ್ರಿಗೆ ಮುನ್ನ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಪ್ರೇಮ ಪತ್ರ ಬರೆದಿದ್ದಾರೆ. ಆಕೆಯ (ಜಾಕ್ವೆಲಿನ್) ಯೋಗಕ್ಷೇಮಕ್ಕಾಗಿ 9 ದಿನಗಳ ಕಾಲ ಉಪವಾಸ ಮಾಡುವುದಾಗಿ ಪತ್ರದಲ್ಲಿ ಬರೆದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ನವರಾತ್ರಿಯಲ್ಲಿ ಈ 5 ವಸ್ತುಗಳನ್ನು ಖರೀದಿಸಿದರೆ ಸಾಕ್ಷಾತ್ ದುರ್ಗೆಯೇ ಒಲಿದು ಮನೆಗೆ ಆಗಮಿಸುತ್ತಾಳೆ!


ಸುಕೇಶ್ ನಟಿ ಜಾಕ್ವೆಲಿನ್ ಅವರನ್ನು ‘ಹುಲಿ’ ಎಂದು ಕರೆಯುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. “ಬೇಬಿ, ಮೊದಲ ವಿಷಯವೆಂದರೆ ನೀನು ದೋಹಾ ಶೋನಲ್ಲಿ ತುಂಬಾ ಹಾಟ್ ಮತ್ತು ಸುಂದರವಾಗಿ ಕಾಣುತ್ತಿದ್ದೆ. ನಿನಗಿಂತ ಸುಂದರಿ ಯಾರೂ ಇಲ್ಲ, ನನ್ನ ಗೊಂಬೆಯೇ” ಎಂದು ಬರೆದಿದ್ದಾರೆ.


“ಬೇಬಿ ನವರಾತ್ರಿ ನಾಳೆಯಿಂದ ಪ್ರಾರಂಭವಾಗುತ್ತಿದೆ. ನನ್ನ ಜೀವನದಲ್ಲಿ ಮೊದಲ ಬಾರಿಗೆ ನಾನು ನಿನ್ನ ಯೋಗಕ್ಷೇಮಕ್ಕಾಗಿ ಮತ್ತು ವಿಶೇಷವಾಗಿ ನಮ್ಮ ಸುತ್ತಲಿನ ಎಲ್ಲಾ ನಕಾರಾತ್ಮಕತೆಯನ್ನು ತೊಡೆದುಹಾಕಲು ಪೂರ್ಣ 9 ದಿನಗಳ ಕಾಲ ಉಪವಾಸ ಮಾಡಲಿದ್ದೇನೆ" ಎಂದು ಪತ್ರದಲ್ಲಿ ಬರೆದಿದ್ದಾರೆ.


ನವರಾತ್ರಿಯ ಒಂಬತ್ತನೇ ದಿನದಂದು ವೈಷ್ಣೋದೇವಿ ದೇವಸ್ಥಾನ ಮತ್ತು ಮಹಾಕಾಳೇಶ್ವರ ದೇವಸ್ಥಾನದಲ್ಲಿ ಜಾಕ್ವೆಲಿನ್‌’ಗೆ ವಿಶೇಷ ಪೂಜೆಯನ್ನು ಏರ್ಪಡಿಸುವ ಉದ್ದೇಶದ ಬಗ್ಗೆಯೂ ಸುಕೇಶ್ ಮಾತನಾಡಿದ್ದಾರೆ.


ಸುಕೇಶ್ ಸದ್ಯ 200 ಕೋಟಿ ರೂಪಾಯಿ ಸುಲಿಗೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. 200 ಕೋಟಿ ಸುಲಿಗೆ ಪ್ರಕರಣದಲ್ಲಿ ಕಾನ್‌ಮ್ಯಾನ್ ಚಂದ್ರಶೇಖರ್ ಸದ್ಯ ದೆಹಲಿಯ ಮಂಡೋಲಿ ಜೈಲಿನಲ್ಲಿದ್ದಾರೆ.


ಇದನ್ನೂ ಓದಿ: 24 ವರ್ಷಗಳ ಇತಿಹಾಸವನ್ನೇ ಬದಲಾಯಿಸಿದ ‘ಭೂಮ್ ಭೂಮ್ ಬುಮ್ರಾ’! ಈ ದಾಖಲೆ ಬರೆದ 2ನೇ ಭಾರತೀಯ ಬೌಲರ್


ಇನ್ನು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಜೊತೆ ಸುಕೇಶ್ ಸಂಬಂಧ ಹೊಂದಿದ್ದಾರೆ ಎಂಬ ವದಂತಿ ಇದೆ. ಆದರೆ ಈ ಬಗೆಗಿನ ಎಲ್ಲಾ ಗಾಸಿಪ್’ಗಳನ್ನು ನಟಿ ನಿರಾಕರಿಸಿದ್ದರೂ ಸಹ, ಈ ಪ್ರಕರಣದಲ್ಲಿ ಅವರು ಕೂಡ ಆರೋಪಿಯಾಗಿದ್ದಾರೆ. ಜಾರಿ ನಿರ್ದೇಶನಾಲಯ (ಇಡಿ) ಅವರನ್ನು ಕೂಡ ಹಲವು ಬಾರಿ ವಿಚಾರಣೆ ನಡೆಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.