ಸುನಂದ ಪುಷ್ಕರ್ ಸಾವಿನ ಪ್ರಕರಣ: ಆಗಸ್ಟ್ 20 ರಿಂದ ವಿಚಾರಣೆ ಪ್ರಾರಂಭ
ಸುನಂದ ಪುಷ್ಕರ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 20 ರಿಂದ ಇಲ್ಲಿನ ರೂಸ್ ಅವೆನ್ಯೂ ನ್ಯಾಯಾಲಯವು ಆರೋಪಗಳ ವಿಚಾರಣೆಯನ್ನು ಪ್ರಾರಂಭಿಸಲಿದೆ ಎನ್ನಲಾಗಿದೆ.ಆರೋಪದ ಮೇಲಿನ ವಾದಗಳಿಗಾಗಿ ನ್ಯಾಯಾಲಯವು ಆಗಸ್ಟ್ 20 ಮತ್ತು 22 ಅನ್ನು ನಿಗದಿಪಡಿಸಿದೆ. ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರು ಪುಷ್ಕರ್ ಅವರ ಆತ್ಮಹತ್ಯೆಗೆ ಸಹಕರಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಪ್ರಸ್ತುತ ಈ ಪ್ರಕರಣದಲ್ಲಿ ಅವರು ಜಾಮೀನಿನಲ್ಲಿದ್ದಾರೆ.
ನವದೆಹಲಿ: ಸುನಂದ ಪುಷ್ಕರ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 20 ರಿಂದ ಇಲ್ಲಿನ ರೂಸ್ ಅವೆನ್ಯೂ ನ್ಯಾಯಾಲಯವು ಆರೋಪಗಳ ವಿಚಾರಣೆಯನ್ನು ಪ್ರಾರಂಭಿಸಲಿದೆ ಎನ್ನಲಾಗಿದೆ.ಆರೋಪದ ಮೇಲಿನ ವಾದಗಳಿಗಾಗಿ ನ್ಯಾಯಾಲಯವು ಆಗಸ್ಟ್ 20 ಮತ್ತು 22 ಅನ್ನು ನಿಗದಿಪಡಿಸಿದೆ. ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರು ಪುಷ್ಕರ್ ಅವರ ಆತ್ಮಹತ್ಯೆಗೆ ಸಹಕರಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಪ್ರಸ್ತುತ ಈ ಪ್ರಕರಣದಲ್ಲಿ ಅವರು ಜಾಮೀನಿನಲ್ಲಿದ್ದಾರೆ.
ವಿಶೇಷ ನ್ಯಾಯಾಧೀಶ ಅರುಣ್ ಭರದ್ವಾಜ್ ಅವರು ಬುಧವಾರದಂದು ಪ್ರಾಸಿಕ್ಯೂಷನ್ (ದೆಹಲಿ ಪೊಲೀಸ್) ಗೆ ಚಾರ್ಜ್‌ಶೀಟ್ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳ ವಿಷಯವನ್ನು ತಜ್ಞರೊಂದಿಗೆ ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟರು.ಆದರೆ, ಚಾರ್ಜ್‌ಶೀಟ್‌ನ್ನು ತಜ್ಞರಲ್ಲದೆ ಬೇರೆ ಯಾರೊಂದಿಗೂ ಹಂಚಿಕೊಳ್ಳಲು ನ್ಯಾಯಾಲಯ ನಿರ್ಬಂಧಿಸಿದೆ.ತರೂರ್ ಪರವಾಗಿ ಹಿರಿಯ ವಕೀಲ ವಿಕಾಸ್ ಪಹ್ವಾ ಮತ್ತು ವಕೀಲ ಗೌರವ್ ಗುಪ್ತಾ ಹಾಜರಿದ್ದರು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಅತುಲ್ ಶ್ರೀವಾಸ್ತವ ಅವರು ದೆಹಲಿ ಪೊಲೀಸರಿಗೆ ಸಲಹೆಗಾರರಾಗಿದ್ದಾರೆ.
ಜನವರಿ 17, 2014 ರ ರಾತ್ರಿ ದೆಹಲಿಯ ಹೋಟೆಲ್ ನಲ್ಲಿ ಸುನಂದಾ ಪುಷ್ಕರ್ ಅವರು ನಿಗೂಢವಾಗಿ ಸಾವನ್ನಪ್ಪಿದ್ದರು.ಮನೆಯ ನವೀಕರಣದ ಹಿನ್ನಲೆಯಲ್ಲಿ ಅವರು ಹೋಟೆಲ್ ನಲ್ಲಿ ತಂಗಿದ್ದರು ಎನ್ನಲಾಗಿದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು 498 ಎ (ಪತಿ ಅಥವಾ ಅವನ ಸಂಬಂಧಿ ಮಹಿಳೆಯನ್ನು ಕ್ರೌರ್ಯಕ್ಕೆ ಒಳಪಡಿಸುವುದು) ಅಡಿಯಲ್ಲಿ ತರೂರ್ ವಿರುದ್ಧ ಆರೋಪ ಹೊರಿಸಲಾಗಿದೆ. ಆದರೆ ಈ ಆರೋಪಗಳನ್ನು ತರೂರ್ ಅವರು ನಿರಾಕರಿಸಿದ್ದಾರೆ ಎನ್ನಲಾಗಿದೆ.