ನವದೆಹಲಿ: 23 ನೇ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಆಗಿ ಸುನಿಲ್ ಅರೋರಾ ಇಂದು ಅಧಿಕಾರ ವಹಿಸಲಿದ್ದಾರೆ. ಶನಿವಾರದಂದು ಓಂ ಪ್ರಕಾಶ್ ರಾವತ್ ಅವರು ನಿವೃತ್ತರಾದ ಹಿನ್ನಲೆಯಲ್ಲಿ ಈಗ ನೂತನ ಆಯುಕ್ತರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಆ ಮೂಲಕ ಈಗ ಮುಂಬರುವ 2019ರ ಸಾರ್ವತ್ರಿಕ ಲೋಕಸಭಾ ಚುನಾವಣೆಯ ನೇತೃತ್ವದಲ್ಲಿ ನಡೆಯಲಿದೆ. ಈ ಹಿಂದೆ ಆರೋರಾ ರವರ ಹೆಸರನ್ನು ಕೇಂದ್ರ ಸರ್ಕಾರವು ಅಂತಿಮಗೊಳಿಸಿ ರಾಷ್ಟ್ರಪತಿ ಭವನಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಇದಕ್ಕೆ ರಾಷ್ಟ್ರಪತಿ  ಅವರು ಸಹಿ ಹಾಕಿದ ಹಿನ್ನಲೆಯಲ್ಲಿ ಇಂದು ಅವರು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.


ಮುಂದಿನ ವರ್ಷ ಲೋಕಸಭಾ ಚುನಾವಣೆಯಲ್ಲದೆ, ಜಮ್ಮು ಮತ್ತು ಕಾಶ್ಮೀರ, ಒಡಿಶಾ, ಮಹಾರಾಷ್ಟ್ರ, ಹರಿಯಾಣ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂಗಳಲ್ಲಿ ವಿಧಾನಸಭಾ ಚುನಾವಣೆ ಅರೋರಾ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.


ಚುನಾವಣಾ ಆಯುಕ್ತರ ಕಾಲಾವಧಿ ಆರು ವರ್ಷಗಳು ಅಥವಾ 65 ವರ್ಷಗಳ ವಯಸ್ಸಿನವರೆಗೆ ಅಧಿಕಾರವನ್ನು ಹೊಂದಿರಬಹುದು.ಸಾಮಾನ್ಯವಾಗಿ ಹಿರಿಯ ಆಯುಕ್ತರನ್ನೇ ಚುನಾವಣಾ ಮುಖ್ಯ ಆಯುಕ್ತರನ್ನಾಗಿ ನೇಮಕ ಮಾಡುವುದು ಈ ಹಿಂದಿನ ಸಂಪ್ರದಾಯವಾಗಿದೆ.


ಮಾಜಿ ಅಧಿಕಾರಿ ಅರೋರಾ ಅವರು ಈ ಹಿಂದೆ ಆಗಸ್ಟ್ 31, 2017 ರಂದು ಚುನಾವಣಾ ಆಯುಕ್ತರಾಗಿ ನೇಮಕವಾಗಿದ್ದರು. ಅರೋರಾ (62) ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ಕಾರ್ಯದರ್ಶಿ.1980 ರ ಬ್ಯಾಚ್ ಐಎಎಸ್ ಅಧಿಕಾರಿ ರಾಜಸ್ಥಾನ್ ಕೇಡರ್, ಹಣಕಾಸು, ಜವಳಿ ಮತ್ತು ಯೋಜನಾ ಆಯೋಗದಂತಹ ಸಚಿವಾಲಯಗಳಲ್ಲಿ ಕೆಲಸ ಮಾಡಿದ್ದಾರೆ.