ದಯಾಮರಣಕ್ಕೆ ಸುಪ್ರೀಂಕೋರ್ಟ್ ಅಸ್ತು
ಮಾನವನಿಗೆ ಗೌರವದಿಂದ ಸಾಯವ ಹಕ್ಕಿದೆ ಎಂದು ಹೇಳಿ ಐತಿಹಾಸಿಕ ತೀರ್ಪು ನೀಡಿದೆ.
ನವದೆಹಲಿ : ವಾಸಿಯಾಗದ ಖಾಯಿಲೆಗಳಿಂದ ಬಳಲುತ್ತಿರುವವರಿಗೆ ದಯಾಮರಣಕ್ಕೆ ಒಪ್ಪಿಗೆ ಸೂಚಿಸಿರುವ ಸುಪ್ರಿಂ ಕೋರ್ಟ್, ಮಾನವನಿಗೆ ಘನತೆಯಿಂದ ಸಾಯವ ಹಕ್ಕಿದೆ ಎಂದು ಹೇಳಿ ಐತಿಹಾಸಿಕ ತೀರ್ಪು ನೀಡಿದೆ. ಅಲ್ಲದೆ ಇದು, ಸುಪ್ರೀಂಕೋರ್ಟ್ ಮಾರ್ಗದರ್ಶಿ ಸೂತ್ರಗಳೊಂದಿಗೆ ಅನ್ವಯಿಸಲಿದೆ ಎಂದಿದೆ.
ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ 5 ಸದಸ್ಯರ ಸಂವಿಧಾನಿಕ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ. ದಯಾಮರಣ ಸಂಬಂಧ ಮಾರ್ಗಸೂಚಿ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ವಾಸಿಯಾಗದ ಖಾಯಿಲೆಯಿಂದ ಬಳಲುತ್ತಿರುವ ರೋಗಿಯ ಚೇತರಿಕೆ ಬಗ್ಗೆ ವೈದ್ಯರು ಯಾವುದೇ ಭರವಸೆ ವ್ಯಕ್ತಪಡಿಸದ ಸಂದರ್ಭದಲ್ಲಿ ರೋಗಿಗೆ ಮತ್ತಷ್ಟು ನೋವನ್ನುಂಟು ಮಾಡುವ ಜೀವಾಧಾರಕ ವ್ಯವಸ್ಥೆಯನ್ನು ನಿರಾಕರಿಸುವ ಹಕ್ಕನ್ನು ಅವರಿಗೆ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ. ಈ ಮೂಲಕ ಅನಾರೋಗ್ಯದಿಂದ ಬಳಲುತ್ತಿರುವವರು ದಯಾಮರಣ ಪಡೆಯಳು ಅನುಮತಿ ನೀಡಿದೆ.