ನವದೆಹಲಿ: ಸರಕಾರ ಕಳೆದ ವಾರ 328 ಔಷಧಿಗಳನ್ನು ನಿಷೇಧಿಸಿದ ಬಳಿಕ ಸಾರಿಡಾನ್ ಮತ್ತು ಇನ್ನಿತರ ಔಷಧಗಳನ್ನು ಮಾರಾಟ ಮಾಡಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಔಷಧ ತಯಾರಕರು ಸಲ್ಲಿಸಿದ ಮನವಿಯ ಮೇರೆಗೆ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ನೀಡಿದೆ.


COMMERCIAL BREAK
SCROLL TO CONTINUE READING

ನೋವು ನಿವಾರಕ ಸಾರಿಡಾನ್ ಮತ್ತು ಸ್ಕಿನ್ ಕ್ರೀಮ್ ಪಾಂಡರ್ಮ್ ಔಷಧಿಗಳು ಇತ್ತೀಚಿಗೆ ಸರ್ಕಾರ 328 ಔಷಧಿಗಳನ್ನು ನಿಷೇದ ಮಾಡಿರುವ ಪಟ್ಟಿಯಲ್ಲಿದ್ದವು. ಔಷಧಿಗಳನ್ನು ನಿಷೇದ ಮಾಡುವ ಮೊದಲು ಆರೋಗ್ಯ ಸಚಿವಾಲಯವು ಈ ಔಷಧಿಗಳಲ್ಲಿನ ಕೆಲವು ಪದಾರ್ಥಗಳು ಆರೋಗ್ಯಕ್ಕೆ ಸೂಕ್ತವಲ್ಲ ಎಂದು  ಸೂಚನೆ ನೀಡಿತ್ತು ಈ ಹಿನ್ನಲೆಯಲ್ಲಿ ಸರ್ಕಾರ ಅವುಗಳನ್ನು ನಿಷೇದ ಮಾಡಿತ್ತು.


ಔಷಧಗಳ ಸಲಹಾ ಮಂಡಳಿ, ಡ್ರಗ್ ತಾಂತ್ರಿಕ ಸಲಹಾ ಮಂಡಳಿ ಅಥವಾ ಡಿಟಿಎಬಿ, ಈ ಔಷಧಿಗಳಲ್ಲಿ ಪದಾರ್ಥಗಳಿಗೆ ಚಿಕಿತ್ಸಕ ಸಮರ್ಥನೆ ಇಲ್ಲ ಮತ್ತು ಸಾರ್ವಜನಿಕ ಹಿತಾಸಕ್ತಿಗಾಗಿ ನಿಷೇಧಿಸಬೇಕು ಸಲಹೆ ನೀಡಿತ್ತು.